ಮುಚ್ಚಿಲೋಟ್ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ-29 ಜೋಡಿಗಳು ಹಸೆಮಣೆಗೆ
ಕುಂಬಳೆ: ಸೀತಾಂಗೋಳಿ ಸಮೀಪದ ಪೆಣರ್ೆ ಶ್ರೀಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನೆರವೇರಿತು.
ವಾಣಿಯ ಅಥವಾ ಗಾಣಿಗ ಸಮುದಾಯದ ಅತ್ಯಂತ ಕಾರಣಿಕ ಶ್ರದ್ದಾ ಕೇಂದ್ರವಾಗಿರುವ ಪೆಣರ್ೆ ಕ್ಷೇತ್ರದಲ್ಲಿ ವರ್ಷದಲ್ಲಿ ಎರಡು ಬಾರಿ(ಮಾಚರ್್ ಹಾಗೂ ನವಂಬರ್) ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಲಾಗುತ್ತದೆ.
ಶುಕ್ರವಾರ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆ, ಕಣ್ಣೂರು, ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ವಿಟ್ಲ, ಸುರತ್ಕಲ್, ಉಡುಪಿ ಜಿಲ್ಲೆಗಳ ನೂರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಜೊತೆಗೆ 29 ಜೋಡಿಗಳು ಹಸೆಮಣೆಗೇರಿದರು. ಅಲ್ಲದೆ 21 ಪುಟಾಣಿ ಹೆಣ್ಮಕ್ಕಳಿಗೆ ಚಪ್ಪರ ಮದುವೆ ನಡೆಸಲಾಯಿತು. ಕ್ಷೇತ್ರದ ಆಚಾರ ಸ್ಥಾನಿಕರು, ಸಮುದಾಯ ಮುಖಂಡರು ನೇತೃತ್ವ ನೀಡಿದ್ದರು.
ಚಪ್ಪರ ಮದುವೆ..ಏನಿದು:
ಗಾಣಿಗ ಅಥವಾ ವಾಣಿಯ ಸಮುದಾಯದ ಹೆಣ್ಮಕ್ಕಳಿಗೆ ನೀಡುವ ವಿಶೇಷ ಕ್ರಮ ಚಪ್ಪರ ಮದುವೆಯಾಗಿದ್ದು, 10 ರಿಂದ 12ರ ಹರೆಯದ ಈ ಸಮುದಾಯದ ಎಲ್ಲಾ ಹೆಣ್ಮಕ್ಕಳಿಗೂ ಈ ಸಂಪ್ರದಾಯ ಪಾಲಿಸಲಾಗುತ್ತಿದೆ. ಹೆಣ್ಮಕ್ಕಳನ್ನು ವಧುವಿನಂತೆ ಶೃಂಗರಿಸಿ, ಬಳಿಕ ಆಚಾರ ಸ್ಥಾನಿಕರು ಹಾರ ಹಾಕಿ ಸಂಪ್ರದಾಯ ಪಾಲಿಸುತ್ತಾರೆ.