HEALTH TIPS

No title

              ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರ
     ಮಂಜೇಶ್ವರ: ನವಶಕ್ತಿ ಫ್ರೆಂಡ್ಸ್ ಸರ್ಕಲ್ ತೂಮಿನಾಡು ಹಾಗೂ ನೆಹರೂ ಯುವ ಕೇಂದ್ರ ಕಾಸರಗೋಡು ಇದರ ಆಶ್ರಯದಲ್ಲಿ ಮತ್ತು ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದೊಂದಿಗೆ 37 ನೇ ವಾಷರ್ಿಕೋತ್ಸವದ ಪ್ರಯುಕ್ತ ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್. ನಲ್ಲಿ ಬೃಹತ್ ರಕ್ತಾದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
   ಇ.ಎನ್.ಟಿ. ವಿಭಾಗ, ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ನೇತ್ರಾ ತಪಾಸಣೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ ಗಳ ಶಿಬಿರದಲ್ಲಿ ನೂರಾರು ಮಂದಿ ಸದುಪಯೋಗವನ್ನು ಪಡಕೊಂಡರು.
    ಕೃಷ್ಣ ಶಿವಕೃಪಾ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಕ್ಕೆ ಡಾ.ಜಯಪಾಲ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಮನ್ಸೂರ್ ಮಾತನಾಡಿ ರಕ್ತದಾನ ಎಂಬುದು ಬಹಳ ಶ್ರೇಷ್ಠವಾದ ತ್ಯಾಗಗಳಲ್ಲೊಂದಾಗಿದೆ. ಅದೇ ರೀತಿ ನವಶಕ್ತಿಯವರ ಮುತುವಜರ್ಿಯಿಂದ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಸ್ಥಳೀಯನೇ ಆದ ನಾನು ಭಾಗವಹಿಸಿದ್ದು ಹೆಮ್ಮೆಯನ್ನು ತಂದಿದೆ. ನಮ್ಮ ಊರಿನ ಸ್ಥಳೀಯರಿಗೆ ನಾನು ಪ್ರತ್ಯೇಕವಾದ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಹೃದಯ ತೊಂದರೆಯಲ್ಲಿ ಬಳಲುತ್ತಿರುವವರು ನನ್ನನ್ನು ಆಸ್ಪತ್ರೆಯಲ್ಲಿ ಸಂಪಕರ್ಿಸಿದರೆ ನನ್ನಿಂದಾಗುವ ಸಹಾಯವನ್ನು ಮಾಡುವುದಾಗಿ ಮಾನವೀಯತೆಯ ಮಾತುಗಳನ್ನಾಡಿದರು.
   ಮುಖ್ಯ ಅತಿಥಿಗಳಾಗಿ ವೈದ್ಯರುಗಳಾದ ಖಾದರ್ ಎ, ದೀಪ್ತಿ ರಾಣಿ ಎನ್, ಹರೀಶ್ ಶೆಟ್ಟಿ ಮಾಡ ಹಾಗೂ ಆನಂದ ಮಾಸ್ಟರ್ ತೂಮಿನಾಡು ಉಪಸ್ಥಿತರಿದ್ದರು. ಕ್ಲಬ್ ಪದಾಧಿಕಾರಿಗಳಾದ ವಿಘ್ನೇಶ್ ಸ್ವಾಗತಿಸಿ, ರವೀಂದ್ರ ಶೆಟ್ಟಿ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries