HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಐಪಿಎಲ್ ಟೂನರ್ಿ ವೇಳೆ 50 ಭಾರತೀಯ ಆಟಗಾರರ 'ಒತ್ತಡ ನಿರ್ವಹಣೆ' ಮೇಲೆ ಕಣ್ಣಿಡಲಿರುವ ಬಿಸಿಸಿಐ
    ನವದೆಹಲಿ: ಐಪಿಎಲ್ ಟೂನರ್ಿಗೆ ಕೇವಲ ಆರು ದಿನಗಳು ಬಾಕಿ ಇರುವಂತೆಯೇ ಟೂನರ್ಿಯಲ್ಲಿ ಭಾರತೀಯ ಕ್ರಿಕೆಟಿಗರ ಮೇಲೆ ಕಣ್ಣಿಡಲು ಬಿಸಿಸಿಐ ನಿರ್ಧರಿಸಿದ್ದು, ಆಟಗಾರರ ಒತ್ತಡ ನಿರ್ವಹಣೆ ಕುರಿತು ವರದಿ ತಯಾರಿಸಲಿದೆ ಎಂದು ತಿಳಿದುಬಂದಿದೆ.
    ಮೂಲಗಳ ಪ್ರಕಾರ 2019ರ ವಿಶ್ವಕಪ್ ಟೂನರ್ಿಗಾಗಿ ತಂಡವನ್ನು ಸಜ್ಜು ಮಾಡಲು ನಿರ್ಧರಿಸಿರುವ ಬಿಸಿಸಿಐ ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದೆ. ಭಾರತೀಯ ಕ್ರಿಕೆಟಿಗರ ಮಟ್ಟಿಗೆ ಐಪಿಎಲ್ ಟೂನರ್ಿ ಉತ್ತಮ ಆಟಗಾರರ ಪ್ರತಿಭಾ ಪ್ರದರ್ಶನದ ಅತ್ಯುತ್ತಮ ವೇದಿಕೆಯಾಗಿದೆ. ಇದೇ ಕಾರಣಕ್ಕೆ ಭಾರತ ತಂಡದ ಒಟ್ಟು 50 ಆಟಗಾರರ ಕುರಿತ ವರದಿ ತಯಾರಿಸಲು ಬಿಸಿಸಿಐ ಮುಂದಾಗಿದ್ದು, ಈ 50 ಆಟಗಾರರ ಪೈಕಿ 27 ಮಂದಿ ಕೇಂದ್ರೀಯ ಒಪ್ಪಂದ ಹೊಂದಿರುವ ಅಂದರೆ ಈಗಾಗಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ಆಟಗಾರರಾಗಿದ್ದು, ಉಳಿದ 23 ಮಂದಿ ಆಟಗಾರರು ದೇಶೀಯ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿರುವ ಆಟಗಾರರಾಗಿದ್ದಾರೆ ಎಂದು ತಿಳಿದುಬಂದಿದೆ.
  ಆಟಗಾರರ ವರದಿ ತಯಾರಿಕೆಗಾಗಿಯೇ ಪ್ರತ್ಯೇಕ ತಂಡವನ್ನು ಕೂಡ ರಚನೆ ಮಾಡಲಾಗಿದ್ದು, ಈ ತಂಡ ಆಟಗಾರರ ಫಿಟ್ನೆಸ್, ಗಾಯದ ಸಮಸ್ಯೆಯ ವರದಿ, ತರಬೇತಿ ಮತ್ತು ಪ್ರದರ್ಶನದ ಕುರಿತ ವರದಿ ತಯಾರಿಸಲಿದ್ದಾರೆ.
   ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಒಟ್ಟು 50 ಆಟಗಾರರ ದತ್ತಾಂಶ ನಿರ್ವಹಣೆಗೆ ಅಧಿಕಾರಿಗಳನ್ನು ನಿಯಜಿಸಲಾಗಿದೆ. ಐಪಿಎಲ್ ಬಳಿಕ ಭಾರತ ತಂಡ ಸುಧೀರ್ಘ ವಿದೇಶಿ ಪ್ರವಾಸ ಮಾಡಲಿದ್ದು, ಐಪಿಎಲ್ ಬಳಿಕ ಮೊದಲಿಗೆ ಬ್ರಿಟನ್ ಪ್ರವಾಸ ಮಾಡಲಿದೆ. ಅಲ್ಲಿ ಇಂಗ್ಲೆಂಡ್ ಮತ್ತು ಐಲರ್ೆಂಡ್ ದೇಶಗಳೊಂದಿಗೆ ದ್ವಿಪಕ್ಷೀಯ ಸರಣಿ ಆಡಲಿದೆ. 2019ರ ವಿಶ್ವಕಪ್ ಟೂನರ್ಿ ಕೂಡ ಇಂಗ್ಲೆಂಡ್ ನಲ್ಲೇ ನಡೆಯಲಿದ್ದು, ಈ ಸರಣಿ ಭಾರತಕ್ಕೆ ಅಲ್ಲಿನ ಹವಾಗುಣ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
  ಟೂನರ್ಿಗಳಲ್ಲಿ ಉತ್ತಮ ಪ್ರದರ್ಶನ ನೀಡದ ಆಟಗಾರರನ್ನುಭಾರತ ಮತ್ತು ಭಾರತ ಎ ತಂಡಗಳಿಗೆ ಆಯ್ಕೆ ಮಾಡುವುದಿಲ್ಲ. ಭಾರತ ಮತ್ತು ಭಾರತ ಎ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು 2019ರ ವಿಶ್ವಕಪ್ ಟೂನರ್ಿ ಸಂಭಾವ್ಯ ಆಟಗಾರರ ಪಟ್ಟಿಗೆ ಆಯ್ಕೆ ಮಾಡುವ ಸಾದ್ಯತೆ ಇದೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries