HEALTH TIPS

No title

               ಇಂದು ವಿಶ್ವ ಜಲ ದಿನ
    ಕೃಷಿ ಸಂಸ್ಕೃತಿಯ ಜೀವಾಳ ಸುರಂಗಗಳ ಜಲಧಾರೆ
ಕಾಸರಗೋಡುಜಿಲ್ಲೆಯಲ್ಲಿವೆ 5000 ಕ್ಕೂ ಮಿಗಿಲಾದ ನೀರಿನ ಆಗರಗಳಾದ ಸುರಂಗಗಳು
   ಕುಂಬಳೆ: ದಶಕಗಳ ಹಿಂದೆ ಆಧುನಿಕ ತಂತ್ರಜ್ಞಾನ ಸಹಿತ ಯಂತ್ರಗಳು ಇಲ್ಲದಿದ್ದ ಕಾಲಘಟ್ಟದಲ್ಲಿ ಶ್ರಮಜೀವನದ ಮೂಲಕವೇ ನೀರಿನ ಮೂಲವನ್ನು ಗುರುತಿಸಿ ಸುರಂಗಗಳ ಮುಖಾಂತರ ಜಲಧಾರೆಯನ್ನು ಪ್ರಾಪ್ತಿಯಾಗಿಸಿ ಹೊಲ ಗದ್ದೆಗಳಲ್ಲಿ ಬೇಸಾಯ ಮಾಡುತ್ತಿದ್ದ ಜನ ಸಂಸ್ಕೃತಿದಕ್ಷಿಣ ಕರಾವಳಿಯದ್ದು. ಹೆಚ್ಚಾಗಿ ಮುಂಗಾರು ಮಳೆಯನ್ನು ಆಶ್ರಯಿಸಿ ಬೇಸಾಯ ಮಾಡುತ್ತಿದ್ದಕೃಷಿಕರಿಗೆ ಬೇಸಿಗೆ ಕಾಲದಲ್ಲಿ ತೋಟಗಳಿಗೆ ಹಾಗೂ ಗದ್ದೆಗಳಿಗೆ ನೀರನ್ನುಉಣಿಸುತ್ತಿದ್ದುದುಇಲ್ಲಿನ ಬಾವಿಗಳು ಹಾಗೂ ಹಲವು ಮೀಟರ್ ಗಳಷ್ಟು ದೂರಕೊರೆದ ನೀರಿನ ಜಲಧಾರೆಯಾದ ಸುರಂಗಗಳು.
   ಪ್ರಸ್ತುತ ಜಿಲ್ಲೆಯಲ್ಲಿ ಶತಮಾನಗಳ ಹಿಂದಿನಿಂದಲೂ ನೀರನ್ನು ಉಣಿಸುತ್ತಿರುವ ಸುರಂಗಗಳು ಸಹಿತ ಇತ್ತೀಚೆಗೆ ಎರಡು ದಶಕಗಳ ಹಿಂದೆ ಕೊರೆದ ಸುರಂಗಗಳು ಒಟ್ಟಾರೆ ಸಂಖ್ಯೆ 5000 ದಷ್ಟು ಇರಬಹುದು ಎಂದು ಅಂಕಿ ಅಂಶ ಅಧ್ಯಯನ ತಿಳಿಸುತ್ತದೆ.ಇವುಗಳಲ್ಲಿ ಅರ್ಧದಷ್ಟು ಸುರಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕುಡಿ ನೀರಿನ ಅಗತ್ಯತೆಯನ್ನು ಪೂರೈಸುವುದು ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಿಗೂ ಅಗತ್ಯವಾದ ನೀರನ್ನು ಪೂರೈಸುತ್ತಿವೆ.
   ಜನಸಂಖ್ಯಾ ಹೆಚ್ಚಳದಿಂದ ನಗರ ಭಾಗದಲ್ಲಿ ನೀರಿನ ಹಾಗೂ ಸ್ಥಳದ ಅಭಾವ ಹೆಚ್ಚಾದಕಾರಣ ಹೆಚ್ಚಿನ ಮಂದಿ ಅಗ್ಗದ ಬೋರ್ವೆಲ್- ಕೊಳವೆ ಬಾವಿಗಳಿಗೆ ಮಾರುಹೋಗುತ್ತಿರುವುದು ಸಾಮಾನ್ಯವೆನ್ನುವಂತಾಗಿದೆ. ನುರಿತಸುರಂಗಕಾಮರ್ಿಕರಅಭಾವ, ಯುವಜನತೆ ಕೃಷಿ ಜೀವನದಿಂದಹೊರ ಮುಖ ಮಾಡುತ್ತಿರುವುದು, ಹೊಸ ಸುರಂಗಗಳ ನಿಮರ್ಾಣ ಹಾಗೂ ಹಳೆ ಸುರಂಗಗಳ ದುರಸ್ತಿ ಸಹಿತ ನವೀಕರಣಕ್ಕೆ ದೊಡ್ಡ ಹೊಡೆತವಾಗಿದೆ.
   ಜಿಲ್ಲೆಯ ಪ್ರಧಾನ ಕೃಷಿ ಸ್ಥಳಗಳಾದ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾ.ಪಂ ವ್ಯಾಪ್ತಿಯ ಬಾಯಾರುಪದವು, ಎಣ್ಮಕಜೆ ಗ್ರಾ.ಪಂ ಪರಿಧಿಯ ಪಡ್ರೆ ಸೇರಿದಂತೆ ಕಾರಡ್ಕ ಗ್ರಾ.ಪಂ ಗಳು, ಹೆಚ್ಚು ಗುಡ್ಡ ಪ್ರದೇಶಗಳಿರುವ ಮುಳ್ಳೇರಿಯ, ಬಂದಡ್ಕ ಪ್ರದೇಶದಲ್ಲಿ ಅತಿ ಹೆಚ್ಚಿನ ಸುರಂಗಗಳನ್ನು ಕಾಣಬಹುದಾಗಿದೆ. ಕನರ್ಾಟಕ-ಕೇರಳ ಗಡಿಪ್ರದೇಶವಾದ ಅಡ್ಯನಡ್ಕ, ಅನೆಕಲ್ಲು ಪ್ರದೇಶಗಳಲ್ಲೂ ಇಂತಹ ಸುರಂಗಗಳನ್ನು ಕೃಷಿಕರು ಕೊರೆಯಿಸಿರುವುದು, ಶತಮಾನಗಳ ಕೃಷಿ ಸಂಸ್ಕೃತಿ ಸೇರಿದಂತೆ ಶ್ರಮಜೀವನದ ದ್ಯೋತಕಗಳಾಗಿವೆ.
  ಬೆಟ್ಟಗುಡ್ಡ ಪ್ರದೇಶಗಳಿಂದ ಆವೃತವಾಗಿರುವ ಜಿಲ್ಲೆಯ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಮಾನವ ನಿಮರ್ಿತವಾಗಿರುವ ಸುರಂಗಗಳು ನೀರಿನ ಜಲ ಸೆಲೆಯಾಗಿವೆ. ಭೂಮಿಯ ಮೇಲ್ಪದರದ ನೀರು ಸ್ವಾಭಾವಿಕವಾಗಿ ಝರಿಯ ರೂಪದಲ್ಲಿ ಹರಿದು ಸಮೀಪದಲ್ಲಿ ನಿಮರ್ಾಣಗೊಂಡಿರುವ ಕೆರೆ, ಹೊಂಡ, ಬಾವಿಯನ್ನು ಸೇರಿ ಕೃಷಿಕರ ನಿತ್ಯಪಯೋಗ ಸಹಿತ ಕೃಷಿ ಚಟುವಟಿಕೆಗಳಿಗೆ ಯಥೇಚ್ಛ ನೀರನ್ನು ಒದಗಿಸುವ ಆಸರೆಗಳಾಗಿವೆ. ಆಧುನಿಕ ಕಾಲಘಟ್ಟದಲ್ಲಿ ಕೃಷಿ ಜೀವನದ ವಿಮುಖತೆಯಿಂದ ಹೊಸ ಸುರಂಗಗಳ ನಿಮರ್ಾಣವಾಗಲಿ, ಸುರಂಗಗಳ ಮಹತ್ವವನ್ನು ತಿಳಿಸುವ ಕಾರ್ಯವಾಗಲಿ ಹೆಚ್ಚಾಗಿ ಆಗದಿರುವುದು ಅವ್ಯಾಹತ ಬೋರ್ವೆಲ್ ನಿಮರ್ಾಣಕ್ಕೆ ದಾರಿ ಮಾಡಿಕೊಟ್ಟಿದೆ. 
   ಬೋರ್ವೆಲ್ ನಿಮರ್ಾಣಕ್ಕೆತಡೆ ಅಗತ್ಯ:
  ಅಗ್ಗದ ಬೋರ್ವೆಲ್ ನಿಮರ್ಾಣದಿಂದ ಭೂಮಿಯ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿದು ಭೂಮಿಯ ಮೇಲಿನ ಉಷ್ಣಾಂಶ ಹೆಚ್ಚಾಗಿ ಪ್ರತಿಕೂಲ ಪರಿಣಾಮವನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ ಸಂಗತಿ.ಕಳೆದ ವರ್ಷ ಬೋರ್ವೆಲ್ ನಿಮರ್ಾಣಕ್ಕೆ ಜಿಲ್ಲಾಧಿಕಾರಿಗಳ ಲಿಖಿತ ಒಪ್ಪಿಗೆ ಅಗತ್ಯತೆಯಿದ್ದು, ಕೊಳವೆ ಬಾವಿಗಳ ನಿಮರ್ಾಣಕ್ಕೆ ಸ್ವಲ್ಪ ಅಂಕುಶ ಬಿದ್ದಿತ್ತು.ಆದರೆ ಈ ಬಾರಿ ಬೋರ್ವೆಲ್ ನಿಮರ್ಾಣ ಎಗ್ಗಿಲ್ಲದೆ ಸಾಗಿದ್ದು, ಅಂತರ್ಜಲ ಮಟ್ಟಯಥೇಚ್ಚವಾಗಿ ಕುಸಿಯುವ ಹಂತಕ್ಕೆತಲುಪಿದೆ.ಜಿಲ್ಲೆಯ ಪ್ರಧಾನ ನದಿಗಳು ಬತ್ತಿವೆ.
   ಕಾಸರಗೋಡು ಜಿಲ್ಲೆಯ ವಾಷರ್ಿಕವಾಗಿ 3,300 ಮಿ.ಮೀ ಮಳೆ ಗಿಟ್ಟಿಸುತ್ತಿದ್ದರೂ, ಬೇಸಿಗೆ ಕಾಲಾವಧಿಯಲ್ಲಿ ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಸುರಂಗಗಳ ನೀರು ಜಿಲ್ಲೆಯ ನಾಲ್ಕನೇ ಒಂದು ಭಾಗದ ಕೃಷಿ ಸಹಿತ ಕುಡಿಯಲು ಬಳಕೆಯಾಗುತ್ತಿದೆ.1960 ರಿಂದ ಆರಂಭಗೊಂಡ ಅರಣ್ಯನಾಶದಿಂದ ವಾಷರ್ಿಕ ಮಳೆ ಪ್ರಮಾಣವು ಕಡಿಮೆಯಾಗಿದೆ.
ಜಲತಜ್ಞ ಶ್ರೀ ಪಡ್ರೆಯವರ ಅಭಿಪ್ರಾಯದಂತೆ ಕಾಸರಗೋಡಿನ ಭೌಗೋಳಿಕತೆಯನ್ನು ಗಮನಿಸಿದಲ್ಲಿ ಸುರಂಗಗಳು ಕೃಷಿಕರ ನೀರಿನ ಅವಶ್ಯಕತೆಯನ್ನು ಗಣನೀಯವಾಗಿ ಪೂರೈಸುತ್ತವೆ. ಪ್ರಕೃತಿ ಪೂರಕವಾದಂತಹ ಸುರಂಗಗಳ ನೀರು ಆರೋಗ್ಯಕ್ಕೂ ಕೃಷಿಗೂ ಉತ್ತಮ. ಸಾಮಾನ್ಯವಾಗಿ ಸುರಂಗಗಳುಗುಡ್ಡ ಪ್ರದೇಶಗಳಲ್ಲಿ ಸಮನಾಂತರವಾಗಿ ನಿಮರ್ಿಸಲ್ಪಡುತ್ತವೆ. 500 ಸೆಂ.ಮೀ 700 ಸೆಂ.ಮೀ ಅಗಲವಿರುವ ಸುರಂಗಗಳು 200 ರಿಂದ 300 ಮೀ.ಉದ್ದವಿರುತ್ತವೆ. ಸುರಂಗದ ಪಾಶ್ರ್ವಗಳಿಂದ ತೊಟ್ಟಿಕ್ಕುವ ನೀರಿನ ಹನಿಗಳು ಝರಿಯಾಗಿ ಹರಿದು, ನೀರಿನ ಶೇಖರಾಗಾರ ಮದಕಗಳಲ್ಲಿ ಸಂಗ್ರಹವಾಗುತ್ತದೆ.
   ಸುರಂಗ ನಿಮರ್ಾಣಕ್ಕಿದೆ ಶತಮಾನದ ಇತಿಹಾಸ
  ಕಾಸರಗೋಡಿನ ಸುರಂಗಗಳಿಗೆ ಶತಮಾನಗಳ ಇತಿಹಾಸವಿದೆ. ನೀರಿನ ಆಗರಗಳ ಗುರುತಿಸುವಿಕೆ ನಿಮರ್ಾಣ ಕಾರ್ಯವನ್ನು ಆರಂಭಿಸಿದವರು ಇಲ್ಲಿಗೆ ವಲಸಿಗರಾಗಿ ಆಗಮಿಸಿದ ಕೊಂಕಣಸ್ಥರು, ಮರಾಟಿಗರು ಮತ್ತು ಕರಾಡಸ್ಥ ಜನ ಸಮುದಾಯದವರು.ಕೃಷಿ ಜೀವನವನ್ನೇ ಕಾಯಕವಾಗಿಸಿದ ಜನ ಮಂದಿ ಇಲ್ಲಿ ಹಲವು ಸುರಂಗಗಳನ್ನು ನಿಮರ್ಿಸಿದ್ದಾರೆ.ಈ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಸುರಂಗಗಳ ಸಂಖ್ಯೆಯು ಹೆಚ್ಚಾಗಿವೆ. ಸುಮಾರು 15-16 ನೇ ಶತಮಾನದಕಾಲಘಟ್ಟದಲ್ಲಿ ಸುಸ್ಥಿರ ಕೃಷಿ ಆರಂಭವಾದ ಸಮಯ ನೀರಿನಅಭಾವತಪ್ಪಿಸಲು ಸುರಂಗಗಳ ನಿಮರ್ಾಣವು ಹೆಚ್ಚಿರಬೇಕುಎಂದು ಪ್ರಾದೇಶಿಕ ಚರಿತ್ರೆ ತಿಳಿಸುತ್ತದೆ.
 






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries