HEALTH TIPS

No title

               ಫೇಸ್ ಬುಕ್ ಮಾಹಿತಿ ಸೋರಿಕೆ; ಆಂತರಿಕ ತನಿಖೆಗೆ ಜುಕರ್ ಬಗರ್್ ಸೂಚನೆ, ಕೇಂಬ್ರಿಡ್ಜ್ ಅನಲಿಟಿಕಾ ಸಿಇಒ ಅಮಾನತು
   ವಾಷಿಂಗ್ಟನ್: 5 ಕೋಟಿ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯು ರಾಜಕೀಯ ಕಾರಣಗಳಿಗಾಗಿ ಸೋರಿಕೆಯಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಖ್ಯಾತ ಸಾಮಾಜಿಕ ಜಾಲತಾಣ ಪೇಸ್ ಬುಕ್ ನ ಮುಖ್ಯಸ್ಥ ಮಾಕರ್್ ಜುಕರ್ ಬಗರ್್ ತನಿಖೆಗೆ ಸೂಚನೆ ನೀಡಿದ್ದಾರೆ.
    ಪ್ರಸ್ತುತ ವಿವಿಧ ದೇಶಗಳಿಂಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿರುವ ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಜುಕರ್ ಬಗರ್್, ಮಾಹಿತಿ ಸೋರಿಕೆಯಾಗಿದೆಯೇ ಇಲ್ಲವೇ ಎಂಬುದರ ಕುರಿತು ಖಚಿತ ಪಡಿಸಿಕೊಳ್ಳಲು ತಮ್ಮ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಂತೆಯೇ ಇತ್ತ ಮಾಹಿತಿ ಸೋರಿಕೆ ಆರೋಪ ಎದುರಿಸುತ್ತಿರುವ ಕೇಂಬ್ರಿಡ್ಜ್ ಅನಾಲಿಟಿಕ್ಸ್ ಸಂಸ್ಥೆಯ ಸಿಇಒ ಅಲೆಕ್ಸಾಂಡರ್ ನಿಕ್ಸ್ ಅವರನ್ನು ಆ ಸಂಸ್ಥೆಯ ನಿದರ್ೇಶಕರು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
   ಬ್ರಿಟನ್ ಮೂಲದ ಚಾನಲ್ 4 ನ್ಯೂಸ್ ಪೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಸಂಬಂಧ ಸುದ್ದಿ ಪ್ರಸಾರ ಮಾಡಿತ್ತು. ಸ್ವತಃ ಕೇಂಬ್ರಿಡ್ಜ್ ಅನಾಲಿಟಿಕ್ಸ್ ಸಂಸ್ಥೆಯ ಸಿಇಒ ಅಲೆಕ್ಸಾಂಡರ್ ನಿಕ್ಸ್ ಅವರು ಈ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಪ್ರಸಾರ ಮಾಡಿತ್ತು. ವಿಡಿಯೋದಲ್ಲಿ ನಿಕ್ಸ್ 2016ರ  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ತಮ್ಮ ಸಂಸ್ಥೆ ನಿಣರ್ಾಯಕ ಪಾತ್ರ ನಿರ್ವಹಿಸಿತ್ತು. ಸಾಮಾಜಿಕ ಜಾಲತಾಣಗಳ ಸಂಪೂರ್ಣ ದತ್ತಾಂಶ, ಎಲ್ಲಾ ವಿಶ್ಲೇಷಣೆ, ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿತ್ತು ಎಂದು ಹೇಳಿಕೊಂಡಿದ್ದರು.
   ಅಲ್ಲದೆ ತನ್ನ ಈ ಕಾರ್ಯಕ್ಕಾಗಿ ಇ-ಮೇಲ್ ಗಳ  ಬಳಕೆ ಮಾಡಿಕೊಂಡಿದ್ದು, ಈ ಇ-ಮೇಲ್ ಗಳನ್ನು ಸ್ವಯಂ ನಾಶ ಅಥವಾ ಸ್ವಯಂ ಡಿಯಾಕ್ಟಿವೇಟ್ ಆಗುವಂತೆ ರಚಿಸಲಾಗಿತ್ತು. ಇದರಿಂದ ಯಾವುದೇ ತನಿಖಾ ಸಂಸ್ಥೆಯೂ ಕೂಡು ಇದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿತ್ತು. ಹೀಗಾಗಿ ಈ ಕಾರ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪೇಪರ್ ದಾಖಲೆಗಳಿಲ್ಲ ಎಂದು ನಿಕ್ಸ್ ಹೇಳಿಕೊಂಡಿದ್ದರು.
  ನಿಕ್ಸ್ ಹೇಳಿಕೆ ಅಮೆರಿಕ ರಾಜಕೀಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿದ್ದು, ಟ್ರಂಪ್ ಸಕರ್ಾರದ ವಿರುದ್ಧ ವ್ಯಾಪಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ.
ಕೇವಲ ಅಮೆರಿಕ ಮಾತ್ರವಲ್ಲದೇ ಕೇಂಬ್ರಿಡ್ಜ್ ಅನಾಲಿಟಿಕ ಸಂಸ್ಥೆ ಭಾರತೀಯ ರಾಜಕೀಯ ಪಕ್ಷಗಳೊಂದಿಗೂ ಕೆಲಸ ಮಾಡಿರುವ ಕುರಿತು ಆರೋಪಗಳು ಕೇಳಿಬರುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries