HEALTH TIPS

No title

            ಛತ್ತೀಸ್ಗಢ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 9 ಸಿಆರ್?ಪಿಎಫ್ ಸಿಬ್ಬಂದಿ ಹುತಾತ್ಮ
     ನವದೆಹಲಿ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಒಂಭತ್ತು ಸಿಆರ್ಪಿಎಫ್  ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆಂದು ವರದಿಯಾಗಿದ್ದು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ
   ಕಳೆದ ಆರು ತಿಂಗಳ ಹಿಂದೆ ಮಾವೋವಾದಿ ನಕ್ಸಲರುನಡೆಸಿದ್ದ ಮಾರಣಾಂತಿಕ ದಾಳಿಯಲ್ಲಿ 25 ಸಿಆರ್?ಪಿಎಫ್  ಜವಾನರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಅದೇ ರೀತಿಯ ದಾಳಿ ನಡೆದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಸುಕ್ಮಾ ಜಿಲ್ಲೆಯ ನಕ್ಸಲ್ ಪ್ರಾಬಲ್ಯದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಮಗಾರಿ ಸುರಕ್ಷ್ತಾ ದೃಷ್ಟಿಯಿಂದ ಯೋಧರನ್ನು ನೇಮಕ ಮಾಡಲಾಗಿತ್ತು. ಆಗ 300-400 ಎಡಪಂಥೀಯ ದಂಗೆಕೋರರು ದಾಳಿ ನಡೆಸಿದ್ದು ಸಿಆರ್ಪಿಎಫ್  ಯೋಧರನ್ನು ಕೊಂದು ಹಾಕಿದ್ದರು.
ಇದೇ ಅಲ್ಲದೆ ಕಳೆದ ಮಾಚರ್್ ನಲ್ಲಿ ಸಹ ಸುಕ್ಮಾ ಜಿಲ್ಲೆಯಲ್ಲಿ 12 ಸಿಆರ್?ಪಿಎಫ್  ಯೋಧರು ನಕ್ಸಲ್ ದಾಳಿಗೆ ತುತ್ತಾಗಿದ್ದರು.
   ಇಷ್ಟಾಗಿಯೂ ನಕ್ಸಲ್ ಹಾಗೂ ಯೋಧರ ನಡುವಿನ ಸಂಘರ್ಷಗಳಲ್ಲಿ ಯೋಧರು ಸಾಕಷ್ಟು ಯಶ ಕಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸ್?ಗಢದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಪ್ರಕರಣಗಳಲ್ಲಿ 300 ಕ್ಕೂ ಅಧಿಕ ನಕ್ಸಲರನ್ನು ಕೊಲ್ಲಲಾಗಿದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ರಾಮ್ ಸೇವಕ್ ಪೈಕ್ರಾ ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ತಿ:ಳಿಸಿದ್ದರು.
   ಮಾವೋವಾದಿಗಳ ಹಿಡಿತದಲ್ಲಿರುವ ಛತ್ತೀಸ್?ಗಢದ ಅಬುಜ್ಮಾದ್ ಅರಣ್ಯ ಪ್ರದೇಶದಲ್ಲಿ ಸಿಆರ್?ಪಿಎಫ್  ಪಡೆ ಮೂರು ಶಾಶ್ವತ ಶಿಬಿರಗಳನ್ನು ಈ ತಿಂಗಳ  ಪ್ರಾರಂಭದಲ್ಲಿ\ ಸ್ಥಾಪಿಸಲಾಗಿತ್ತು. ಹೀಗೆ ಸ್ಥಾಪಿತವಾದ ಪ್ರತಿ ಕ್ಯಾಂಪ್ ಗಳಲ್ಲಿ ಕನಿಷ್ಟ ನೂರು ಸಿಬ್ಬಂದಿಗಳಿರುತ್ತಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries