HEALTH TIPS

No title

                  ನಾಗಾರಾಧನೆ ಪ್ರಕೃತಿ ಮತ್ತು ಮಾನವ ಸಂಬಂಧಗಳ ಬೆಸುಗೆ-ಎಡನೀರು ಶ್ರೀ
    ಉಪ್ಪಳ: ಮನುಷ್ಯ ಜೀವನದ ಸತ್ಪಥ ಮತ್ತು ನಾಗಾರಾಧನೆಗಳಿಗೆ ನಿಕಟ ಸಂಬಂಧಗಳಿದ್ದು, ಪ್ರತ್ಯಕ್ಷ ಕಾಣುವ ನಾಗನ ಆರಾಧನೆಯಿಂದ ಸಂತೃಪ್ತ, ಸಮೃದ್ದ ಜೀವನ ಪ್ರಾಪ್ತಿಯಾಗುತ್ತದೆ. ಜೊತೆಗೆ ಪ್ರಕೃತಿ ಮತ್ತು ಜನಜೀವನಗಳಮ ಪರಸ್ಪರ ಸಮಬಂಧಗಳನ್ನು ಇದು ಬಿಂಬಿಸುತ್ತದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮಿಗಳು ಆಶೀವರ್ಾದ ಪೂರ್ವಕ ಅನುಗ್ರಹಿಸಿ ಮಾತನಾಡಿದರು.
   ಉಪ್ಪಳ ಮಂಗಲ್ಪಾಡಿಯ ಪೆರಿಂಗಡಿ ಶ್ರೀಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನದಲ್ಲಿ ಸಪರ್ಾದಿಷ್ಟಕುಲ ನಾಗದೇವರ ಮಹಾ ಮಹೋತ್ಸವ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಅಷ್ಟಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಧಾಮರ್ಿಕ ಸಭೆ ಉದ್ಘಾಟಿಸಿ, ಆಶೀರ್ವಚನಗೈದು ಮಾತನಾಡಿದರು.
   ಸೌಭಾಗ್ಯ ಅನುಗ್ರಹಿಸುವ ಶಕ್ತಿಯಿರುವ ನಾಗದೇವತೆ ಕೃಷಿ, ಆರೋಗ್ಯ, ಸಂತಾನ, ಸಂಪತ್ತುಗಳೇ ಮೊದಲದ ಐಶ್ವರ್ಯಗಳು ದೊರೆಯಲು ಮತ್ತು ಉಳಿಯಲು ಹರಸುತ್ತಾನೆ. ರಾಷ್ಟ್ರ ವ್ಯಾಪಕವಾಗಿ ವೈವಿಧ್ಯವಾಗಿ ಆರಾಧನೆಗೊಳ್ಳುವ ನಾಗರ ಆರಾಧನೆಯಲ್ಲಿ ಅಷ್ಟಪವಿತ್ರ ನಾಗಮಂಡಲವು ಅತಿ ವಿಶೇಷವಾಗಿದ್ದು, ಸಜ್ಜನರ ಒಗ್ಗಟ್ಟಿನಿಂದ ಸಂಘಟಿಸಲ್ಪಡುವ ಇಂತಹ ಕಾರ್ಯಕ್ರಮಗಳಿಂದ ಸುಭಿಕ್ಷ ನೆಲಸುವುದು ಎಂದು ಅವರು ತಿಳಿಸಿದರು.
    ಅಷ್ಟಪವಿತ್ರ ನಾಗಮಮಡಲೋತ್ಸವ ಸಮಿತಿಯ ಕಾಯರ್ಾದ್ಯಕ್ಷ ಡಾ. ಎಂ.ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಧಾಮರ್ಿಕ ಮುಂದಾಳು ಕೈಯ್ಯೂರು ನಾರಾಯಣ ಭಟ್ ಮಂಚಿ ಮಾತನಾಡಿ, ವಿಶಾಲ ಹಿಂದೂ ಧರ್ಮದ ನಂಬಿಕೆ, ಆಚರಣೆಗಳ ಮೂಲಾರ್ಥವನ್ನು ಗ್ರಹಿಸಿ ನಿರ್ವಹಿಸಿದರೆ ಮಾತ್ರ ಅದರ ನೈಜ ಫಲಪ್ರಾಪ್ತಿ ಸಾಧ್ಯವಾಗುತ್ತದೆ. ಶ್ರದ್ದೆ ಮತ್ತು ಸಮರ್ಪಣೆಗಳು ಅನುಗ್ರಹ ಪ್ರಾಪ್ತಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. ಇಂದು ನಮ್ಮ ಧಾಮರ್ಿಕ ನೆಲೆಗಟ್ಟುಗಳ ಸ್ವರೂಪ ಜ್ಞಾನದ ಕೊರತೆಯಿಂದ ಸಮಸ್ಯೆಗಳು ಎದುರಾಗಿದ್ದು, ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ, ಧಾಮರ್ಿಕತೆಗಳ ಸ್ಪಷ್ಟ ಅರಿವು ತುತರ್ು ಬೇಕಿದೆ ಎಂದರು.ನಾಗ ಸಂತತಿಗಳು ಭೂಮಿಯ ಇತರ ಜೀವಜಾಲಗಳ ಅಸ್ತಿತ್ವಕ್ಕೆ ಪೂರಕವಾಗಿದ್ದು, ಅಲ್ಲಿ ಸಂಭವಿಸುವ ಅಸಮತೋಲನ ಭೂಮಿಯ ಒಟ್ಟು ಸಮತೋಲನವನ್ನು ಬಾಧಿಸಿ ಕೆಡುಕಿಗೆ ದಾರಿಮಾಡಿಕೊಡುವುದು. ಈ ಹಿನ್ನೆಲೆಯಲ್ಲಿ ನಾಗಾರಾಧನೆ ಹಲವು ಆಯಾಮಗಳಿಂದೊಡಗೂಡಿದ ಅತ್ಯಪೂರ್ವ ಆರಾಧನೆಯಾಗಿ ಬೆಳೆದುಬಂದಿದೆ ಎಂದು ತಿಳಿಸಿದರು.
   ಶ್ರೀಕ್ಷೇತ್ರದ ತಂತ್ರಿವರ್ಯ ವೇದಮೂತರ್ಿ ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ಉಪಸ್ಥಿತರಿದ್ದು ಮಾತನಾಡಿದರು. ಉದ್ಯಮಿ ಪಿ.ಆರ್.ಶೆಟ್ಟಿ ಪೊಯ್ಯೆಲು, ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಇಚ್ಲಂಗೋಡು ಶ್ರೀಮಹಾವಿಷ್ಣು ಕ್ಷೇತ್ರದ ಮೊಕ್ತೇಸರ ವಾಸುದೇವ ಮಯ್ಯ ಕಡೆಗದ್ದೆ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸದಸ್ಯ ಎಂ.ಕೆ.ಅಶೋಕ್ ಕುಮಾರ್ ಹೊಳ್ಳ, ಅಡ್ಕ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗೋಪಾಲ ಬಂದ್ಯೋಡು, ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಮೊಕ್ತೇಸರ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಸೀರೆ ಶ್ರೀಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ವಾನಂದೆ, ಮುಳಿಂಜ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಸಂಜೀವ ಭಂಡಾರಿ, ಉಪ್ಪಳ ಶ್ರೀಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಸತೀಶ ಶೆಟ್ಟಿ ಕೊಂಡೆವೂರು, ಅಷ್ಟಪವಿತ್ರ ನಾಗಮಂಡಲೋತ್ಸವ ಮಾಗಣೆ ಪ್ರಮುಖ ಡಾ.ಎ.ಸುರೇಶ್ ಮಯ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
   ಹರಿಶ್ಚಂದ್ರ ಮಂಜೇಶ್ವರ ಸ್ವಾಗತಿಸಿ, ವಂದಿಸಿದರು.
   ಬಳಿಕ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೊನ್ನೆತ್ತೋಡು ಬಾಲಕಲಾವಿದರ ಯಕ್ಷಕಲಾ ಕೇಂದ್ರದ ಮಕ್ಕಳಿಂದ ಷಣ್ಮುಖ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.
       ಶನಿವಾರ ಬೆಳಿಗ್ಗೆ 7.30ಕ್ಕೆ ನಿತ್ಯಪೂಜೆ, 8 ರಿಂದ ಪುಣ್ಯಾಹ, ಗಣಹೋಮ, ನವಕ ಕಲಶಾಭಿಷೇಕ, ಪವಮಾನ ಹೋಮ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಿತು. ಮಧ್ಯಾಹ್ನ 1.30 ರಿಂದ ಕೂಟಮಹಾಜಗತ್ತು ಮಂಗಲ್ಪಾಡಿ ಯಕ್ಷಕೂಟ ಮಹಿಳಾ ವೇದಿಕೆಯವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ 5 ರಿಂದ 8 ರ ವರೆಗೆ ಭಜನಾ ಸಂಕೀರ್ತನೆ, ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
   ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕದ ಮಾಯಾಲೋಕ ಶ್ಯಾಂ ಜಾದೂಗಾರ್ ಬಳಗದವರಿಂದ ಜಾದೂ, ಹಾಡು, ಮಿಮಿಕ್ರಿ ವೈವಿಧ್ಯಗಳು ಪ್ರದರ್ಶನಗೊಂಡವು.
    ಇಂದಿನ ಕಾರ್ಯಕ್ರಮ(ಭಾನುವಾರ)
   ಬೆಳಿಗ್ಗೆ 7 ರಿಂದ ಪುಣ್ಯಾಹ, ಗಣಹೋಮ, ನವಕ ಕಲಶಾಭಿಷೇಕ, ಪವಮಾನ ಅಭಿಷೇಕ,7.30ಕ್ಕೆ ನಿತ್ಯಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಲಿದೆ. ಮಧ್ಯಾಹ್ನ 1.30 ರಿಂದ 4ರ ತನಕ ಬಾಯಾರು ನವಕನರ್ಾಟಕ ಯಕ್ಷಗಾನ ಕಲಾಮಂಡಳಿವರಿಂದ ಅತಿಕಾಯ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 5 ರಿಂದ 8ರ ವರೆಗೆ ಭಜನಾ ಸಂಕೀರ್ತನೆ,8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡ್ರಾಮಾ ಜ್ಯೂನಿಯರ್ಸ್ ವಿಜೇತೆ ಡಾಲಿ ಚಿತ್ರಾಲಿಯವರಿಂದ ಕಾರ್ಯಕ್ರಮ ವೈವಿಧ್ಯ, ಕೊಂಡೆವೂರು ಸವಿಜೀವನಂ ನಾಟ್ಯಾಲಯದವರಿಂದ ಭರತನಾಟ್ಯ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries