HEALTH TIPS

No title

          ರಾಷ್ಟ್ರೀಯ ಹೆದ್ದಾರಿ ನಅಗಲೀಕರಣ-ನಷ್ಟ ಪರಿಹಾರ ಮೊತ್ತ ಹೆಚ್ಚಿಸಲು ಆಗ್ರಹಿಸಿ ವ್ಯಾಪಾರಿಗಳಿಂದ ಹೋರಾಟ
   ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಹಿತ ಅಭಿವೃದ್ದಿ ಪ್ರಕ್ರಿಯೆಯಲ್ಲಿ ತೀವ್ರ ನಷ್ಟಕ್ಕೊಳಗಾಗುವ ವ್ಯಾಪರಿಗಳಿಗೆ ರಾ.ಹೆದ್ದಾರಿ ಪ್ರಾಧಿಕಾರ ವಿತರಿಸುವ ನಷ್ಟ ಪರಿಹಾರ ಮೊತ್ತವು ನ್ಯಾಯಯುತವಾದುದಲ್ಲ. ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ವ್ಯಾಪಾರಿಗಳು ತೀವ್ರ ಹೋರಾಟಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ.
  ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಸಂಬಂಧಿಸಿ ಸವರ್ೇ ಪ್ರಕ್ರಿಯೆಗಳು ಇದೀಗ ಅಂತಿಮ ಹಂತದಲ್ಲಿದ್ದು, ಈ ಮಧ್ಯೆ ಹೆದ್ದಾರಿ ಅಗಲೀಕರಣ ಸಂದರ್ಭ ಸಂಪೂರ್ಣವಾಗಿ ತಮ್ಮ ವೃತ್ತಿಯನ್ನೇ ಕಳೆದುಕೊಳ್ಳಬೇಕಾದ ಸಂದಿಗ್ದತೆಯಲ್ಲಿರುವ ವ್ಯಾಪಾರಿಗಳಿಗೆ ನಷ್ಟಪರಿಹಾರ ನೀಡುವಲ್ಲಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಹೆಸರಲ್ಲಿ 600 ಕ್ಕೂ ಹೆಚ್ಚಿನ ವ್ಯಾಪಾರ ಮಳಿಗೆಗಳು ಇದೀಗ ತೆರವಿನ ಭೀತಿ ಎದುರಿಸುತ್ತಿದ್ದರೆ ಜಿಲ್ಲೆಯ ತಲಪಾಡಿ ಗಡಿಭಾಗದಿಂದ ಕಾಲಿಕ್ಕಡವಿನ ವರೆಗೆ 49ಕ್ಕೂ ಮಿಕ್ಕಿದ ಅಂಗಡಿಮುಗ್ಗಟ್ಟುಗಳು ತೆರವಿನ ಭೀತಿ ಎದುರಿಸುತ್ತಿದೆ. ರಾಜ್ಯ ಸರಕಾರವು ಈ ಅಂಗಡಿಮುಗ್ಗಟ್ಟುಗಳ ತೆರವಿಗೆ ಸಂಬಂಧಿಸಿ ನಷ್ಟ ಪರಿಹಾರವಾಗಿ ಕೇವಲ 8 ಲಕ್ಷ ರೂ.ಗಳನ್ನು ಮಾತ್ರ ನೀಡಲಿದೆ.
  ಭವಿಷ್ಯ ಕಳೆದುಕೊಂಡು ಅತಂತ್ರರಾಗುವ ವ್ಯಾಪಾರಿಗಳ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಈಗ ಘೋಷಿಸಿರುವ 2 ಲಕ್ಷ ರೂ. ಪರಿಹಾರ ಮೊತ್ತದ ಬದಲಿಗೆ ಕನಿಷ್ಠ 25 ಲಕ್ಷ ರೂ.ಗಳ ನೆರವು ನೀಡಬೇಕು, ನಷ್ಟಕ್ಕೊಳಗಾಗುವ ವ್ಯಾಪಾರಿ ಕುಟುಂಬಗಳ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕು, ಕ್ಷೇಮ ನಿಧಿ ಬೋಡರ್್ ನಿಂದ ಗರಿಷ್ಠ ಮೊತ್ತದ ಪರಿಹಾರ ದೊರಕಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾದ್ಯಂತ ಮಾ. 28 ರಂದು ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕವು ಅಂದು ಕುಂಬಳೆ ಸಿಟಿ ಹಾಲ್ ಸಭಾಂಗಣದ ಎದುರು ಹಾದುಹೋಗುವ ರಾ.ಹೆದ್ದಾರಿಯ ಸನಿಹ ಧರಣಿ ನಡೆಸಲಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
   ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಟ್ರೇಡ್ ಯೂನಿಯನ್ಗಳ ಮುಖಂಡರು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಹಮ್ಮಿಕೊಂಡ ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಲಿವೆ. ಸುದ್ದಿಗೋಷ್ಠಿಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಎಸ್.ಎನ್.ಮಯ್ಯ ಬದಿಯಡ್ಕ, ವಿ.ಕೆ.ಎಸ್.ಹಮೀದ್, ಕುಂಬಳೆ ಘಟಕಾಧ್ಯಕ್ಷ ವಿಕ್ರಂ ಪೈ, ಕಾರ್ಯದಶರ್ಿ ಸತ್ತಾರ್ ಆರಿಕ್ಕಾಡಿ ಉಪಸ್ಥಿತರಿದ್ದು ಮಾತನಾಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries