HEALTH TIPS

No title

                   ಭಜನೋಪಾಸನೆಯಿಂದ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ: ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ
    ಕುಂಬಳೆ: ಭಜನಾ ಸಂಕಿರ್ತನೆಗಳು ಭಗವದ್ ಆರಾಧನೆಯ ಜೊತೆಗೆ ಸಾಮಾಜಿಕ ಏಕತೆಗೆ ಪ್ರೇರಣೆ ನೀಡುವುದು. ಮನಸ್ಸು, ಬುದ್ದಿಗಳ ವಿಕಾಸದಲ್ಲಿ ಭಜನಾ ಸಂಕೀರ್ತನೆಗಳ ಪಾತ್ರ ಮಹತ್ತರವಾದುದು ಎಂದು ಹಿರಿಯ ಸಂಕೀರ್ತನಕಾರ, ಭಜನಾ ಗುರುಗಳಾದ ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ ಅಭಿಪ್ರಾಯ ವ್ಯಕ್ತಪಡಿಸಿದರು.
  ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಕ್ಷೇತ್ರ ಮಹಿಳಾ ಸಮಿತಿ ನೇತೃತ್ವದಲ್ಲಿ ಆರಂಭವಾದ ಮಹಿಳೆಯರ ಭಜನಾ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಅರ್ಥಪೂರ್ಣವಾಗಿ ಹಾಡುವ ಭಜನೆಯು ಸುಲಭದಲ್ಲಿ ದೇವರನ್ನು ತಲುಪುವುದು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಅವಸರದ ಈ ಕಾಲದಲ್ಲಿ ನವ ಪೀಳಿಗೆಗೆ ಯಾವುದಕ್ಕೂ ಸಮಯವಿಲ್ಲದಾಗಿ ಭಜನೆ ಕೂಡಾ ಅನ್ಯವಾಗುತ್ತಿದೆ. ಇದರಿಂದಾಗಿಯೇ ಸಮಾಜದಲ್ಲಿ ಅಶಾಂತಿ ವೃದ್ಧಿಯಾಗುತ್ತಿದೆ. ಭಜನೆ ಸಹಿತ ಆಧ್ಯಾತ್ಮಿಕ ವಿಚಾರಗಳತ್ತ ಅಲ್ಪ ಸಮಯವನ್ನು ಮೀಸಲಿರಿಸುವಂತಾಗಬೇಕೆಂದು ಅವರು ಕರೆಯಿತ್ತರು.
   ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತ ರವಿ ನಾಯ್ಕಾಪು ಅವರು ಮಾತನಾಡಿ, ಭಜನೆ ಇದ್ದಲ್ಲಿ ವಿಭಜನೆ ಆಗುವುದಿಲ್ಲವೆಂದು ಅಭಿಪ್ರಾಯಪಟ್ಟರು. ಶಿಸ್ತುಬದ್ಧ ಕುಟುಂಬ ವ್ಯವಸ್ಥೆಯಲ್ಲಿ ಭಜನೆಗೆ ಮಹತ್ವದ ಸ್ಥಾನವಿತ್ತು. ಆದರಿಂದು ಮನೆಗಳಲ್ಲಿ ಭಜನೆ ಹಾಡುವ ಪರಿಪಾಠ ಕಡಿಮೆಯಾಗಿದೆ. ಇದನ್ನು ಮತ್ತೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂಥಾ ಭಜನಾ ತರಗತಿಗಳು ಔಚಿತ್ಯಪೂರ್ಣವೆಂದರು.
     ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಆಚಾರ ಸ್ಥಾನಿಕರಾಗಿರುವ ಚಂದ್ರಶೇಖರ ಎಳೆ ಚೆಟ್ಟಿಯಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ಗೋಪಾಲ ಚೆಟ್ಟಿಯಾರ್ ಶುಭಾಶಂಸನೆಗೈದರು. ಮಹಿಳಾ ಸಮಿತಿಯ ಸಂಚಾಲಕಿ ಸ್ನೇಹಲತಾ ದಿವಾಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷೆ ಗುಲಾಬಿ ಲಕ್ಷ್ಮಣ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಸುಲೋಚನಾ ವಂದಿಸಿದರು.
    ಸುಮಾರು 30 ರಷ್ಟು ಮಂದಿ ಮಹಿಳೆಯರು ಭಜನಾ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಹರಿದಾಸ್ ಜಯಾನಂದ ಕುಮಾರ್ ಅವರು ಭಜನಾ ಗುರುಗಳಾಗಿದ್ದಾರೆ.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries