HEALTH TIPS

No title

                   ಮೋಹನ್ ಬೊಳ್ಳಾರು ಅವರಿಗೆ ಪಿ.ಎಚ್.ಡಿ. ಪದವಿ
    ಕಾಸರಗೋಡು: ಕನ್ನಡ ವಿಭಾಗದ ಸಂಶೋಧನ ವಿದ್ಯಾಥರ್ಿ ಮೋಹನ್ ಬೊಳ್ಳಾರು ಅವರು ಬರೆದು ಸಲ್ಲಿಸಿದ `ಬಸವಣ್ಣ ಮತ್ತು ನಾರಾಯಣ ಗುರುಗಳ ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ' ಎಂಬ ಸಂಶೋಧನ ಮಹಾಪ್ರಬಂಧವನ್ನು ಮನ್ನಿಸಿ ಮುಂಬೈ ವಿಶ್ವವಿದ್ಯಾಲಯ ಅವರಿಗೆ ಪಿಎಚ್ಡಿ ಪದವಿಯನ್ನು ನೀಡಿದೆ.
   ಡಾ|ಮೋಹನ್ ಅವರು ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ|ರಘುನಾಥ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಸಿದ್ಧಪಡಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದರು.
   ಮುಂಬೈ ವಿಶ್ವವಿದ್ಯಾಲಯದಿಂದ `ಸುನೀತಾ ಶೆಟ್ಟಿಯವರ ಬದುಕು ಬರಹ' ಎಂಬ ವಿಷಯದಲ್ಲಿ ಡಾ|ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್. ಪದವಿ ಪಡೆದಿದ್ದರು. ಅದು ಈಗಾಗಲೇ ಅಭಿಜಿತ್ ಪ್ರಕಾಶನ ಮೂಲಕ ಕೃತಿ ರೂಪದಲ್ಲಿ ಬೆಳಕು ಕಂಡಿದೆ.
    ಡಾ|ಮೋಹನ್ ಅವರು ಕಾಸರಗೋಡು ಬೊಳ್ಳಾರಿನ ಕೃಷ್ಣಪ್ಪ ಪೂಜಾರಿ ಬೊಳ್ಳಾರು-ಭವಾನಿ ದಂಪತಿಗಳ ಪುತ್ರ. ಪ್ರಸ್ತುತ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಬಿಲ್ಲವರ ಅಸೋಸಿಯೇಶನ್ನಲ್ಲಿ ಇವರ ಕೆಲ ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ಬೇಕೂರು ಸು`ಾಸ್ನಗರದ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರಾಗಿದ್ದಾರೆ. ಇವರು ಅನೇಕ ರಾಷ್ಟ್ರೀಯ ಸಂಕಿರಣದಲ್ಲಿ ಉಪನ್ಯಾಸ ನೀಡಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries