HEALTH TIPS

No title

            ಸರಕಾರಿ ಸೂಚನಾ ಫಲಕದ ಮೇಲೆ ಪ್ರತಿಭಾ ಪ್ರದರ್ಶನ
   ಕುಂಬಳೆ: ಒಂದೆಡೆ ಕಾನೂನು, ಸುವ್ಯವಸ್ಥೆಗಳ ಮೂಲಕ ಆಳುವ ವರ್ಗವು ಜನಸಾಮಾನ್ಯರನ್ನು ನಾವು ಅಭಿವೃದ್ದಿಗೊಳಿಸಿದ್ದೇವೆ. ರಸ್ತೆ ಸಹಿತ ಮೂಲ ಸೌಕರ್ಯಗಳು ಸಮರ್ಪಕವಾಗಿದೆ.ಅದೂ ಇದು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಮಧ್ಯೆ ವ್ಯವಸ್ಥೆಗಳನ್ನು ಬುಡಮೇಲುಗೊಳಿಸುವ ಅಸಂಸ್ಕೃತತೆ ವ್ಯಾಪಕಗೊಳ್ಳುತ್ತಿರುವುದೂ ವ್ಯಾಪಕ ಆತಂಕಕ್ಕೆ ಕಾರಣವಾಗುತ್ತಿದೆ.
   ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸ್ಥಾಪಿಸಿದ ಕೇರಳ ಸರಕಾರದ ಸೂಚನಾ ಫಲಕದ ಮೇಲೆಯೇ  ಖಾಸಗಿ ಸಂಸ್ಥೆಯ ಜಾಹಿರಾತು ಫ್ಲೆಕ್ಸ್ ಕಟ್ಟಿರುವುದು ಇದೀಗ ಕಂಡುಬಂದಿದ್ದು, ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
   ಸೂಚನಾ ಫಲಕಗಳು ಮೊದಲೇ ಅವ್ಯವಸ್ಥಿತವಾಗಿದ್ದು, ಇದೀಗ ಅದರ ಮೇಲೆ ಜಾಹೀರಾತು ಫಲಕಗಳನ್ನು ಹಾಕಿರುವುದರಿಂದ ಗೊಂದಲಕ್ಕೆ ಕಾರಣವಾಗಿದೆ.
   ಜಾಹೀರಾತು ಫ್ಲೆಕ್ಸ್ ಗಳನ್ನು ಸ್ಥಾಪಿಸುವಾಗ ಅಧಿಕೃತರ ಅನುಮತಿ ಪಡೆಯಬೇಕು, ಇಂತಿಷ್ಟು ದಿನಗಳಲ್ಲಿ ತೆರವುಗೊಳಿಸಬೇಕು, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹಾಕಬಾರದು ಎಂಬ ಹಲವು ನಿಬಂಧನೆಗಳಿದ್ದರೂ, ಇವೆಲ್ಲವನ್ನೂ ಗಾಳಿಗೆ ತೂರಿ ಫ್ಲೆಕ್ಸ್ ಸ್ಥಾಪಿಸಿರುವುದು ಒಂದೆಡೆ ಆಶ್ಚರ್ಯ ಮುಡಿಸುತ್ತಿದ್ದರೆ, ಇನ್ನೊಂದೆಡೆ ಅಧಿಕೃತರು ಈ ಬಗ್ಗೆ ನೋಡಿಯೂ ನೋಡದಂತೆ ತೆಪ್ಪಗಿರುವುದೂ ಸಂಶಯಕ್ಕೆ ಕಾರಣವಾಗಿದೆ.
   ಬಂಡಿ ತಪ್ಪುವ ಮಧ್ಯೆ ಇದಕೆಲ್ಲಿ ಪುರುಸೊತ್ತು!:
   ಜಿಲ್ಲೆಯ ಹೆಚ್ಚಿನೆಲ್ಲಾ ಸರಕಾರಿ ಕಾಯರ್ಾಲಯಗಳಲ್ಲಿ ಶೇ.95 ರಷ್ಟು ಮಲೆಯಾಳಿಗರೇ ತುಂಬಿದ್ದು, ಬೇರೆ ಜಿಲ್ಲೆಗಳಿಂದ ಆಗಮಿಸುವ ಅವರು ಬೆಳಿಗ್ಗೆ ಕಚೇರಿಗೆ ಆಗಮಿಸುವುದೂ ತಡವಾಗಿ, ಹಾಗೂ ಅಪರಾಹ್ನ ಬಂಡಿ (ರೈಲು ಗಾಡಿ) ಸಿಗಬೇಕೆಂಬ ತರಾತುರಿಯಲ್ಲಿ ಬೇಗನೆ ಕಚೇರಿ ಬಿಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆಯ ಪಾಲನೆಗೆ ತೊಡಕಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿದೆ.
   ಕಾಸರಗೋಡು ನಗರ ಸಹಿತ ಜಿಲ್ಲೆಯ ಬಹುತೇಕ ನಗರ ಪ್ರದೇಶಗಳು ಸಂಪೂರ್ಣ  ಫ್ಲೆಕ್ಸ್ ಬೋಡರ್್ಗಳಿಂದ ಆವೃತಗೊಂಡಿದೆ. ಅಧಿಕೃತರು ಇನ್ನಾದರೂ ತೆರವಿಗೆ ಮುಂದಾಗಬೇಕು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries