HEALTH TIPS

No title

                  ಯಂ ಜಯಚಂದ್ರರಿಂದ ಗಮನ ಸೆಳೆದ ಹಾಡುಗಾರಿಕೆ
     ಪೆರ್ಲ: ಯೆಣ್ಮಕಜೆ ತರವಾಡಿನಲ್ಲಿ ಇತ್ತೀಚೆಗೆ ನಡೆದ ಪಿಲಿಚಾಮುಂಡಿ, ರಕ್ತೇಶ್ವರಿ, ಪರಿವಾರ ದೈವಗಳ ವಷರ್ಾವಧಿ ನೇಮೋತ್ಸವದ ಸಂದರ್ಭದಲ್ಲಿ ಖ್ಯಾತ ಗಾಯಕ ಹಾಗೂ ಸಂಗೀತ ನಿದರ್ೇಶಕ ಯಂ.ಜಯಚಂದ್ರನ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ರಸಿಕರಿಗೆ ರಸಾನುಭೂತಿಯನ್ನು ನೀಡಿತು. ಅನುಭವೀ ಗಾಯಕನ ಗಾಯನದ ಮಾಯಾಜಾಲವು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಸ್ವಿಯಾಯಿತು. ಮಹಾಗಣಪತಿಂ ಎಂಬ ಗಣೇಶ್ ಸ್ತುತಿಯೊಂದಿಗೆ ಆರಂಭವಾದ ಹಾಡುಗಳ ಆಲಾಪನೆ, ರಾಗದ ಮೋಡಿ, ಅದ್ಬುತವಾದ ನಿರೂಪಣೆ, ಆಕರ್ಷಕವಾದ ವರ್ಣಗಳು ಸಭಿಕರ ಕರತಾಡನಕ್ಕೆ ಪಾತ್ರವಾಯಿತು.
ಲಾಲಿತ್ಯಪೂರ್ಣ ರಾಗಗಳು, ನಿರೀಕ್ಷೆಗೂ ಮೀರಿದ ಆಲಾಪನೆ, ಪರಿಚಿತ ಎನ್ನುವಷ್ಟು ಲಲಿತವಾದ ಹಾಡುಗಳ ಆಯ್ಕೆ, ಜೊತೆಗೆ ಆನಂದದ ಅನುಭೂತಿಯನ್ನು ನೀಡುವ ಸರಳ ಮನಮೋಹಕ ಗಾಯನ ಯೆಣ್ಮಕಜೆಯತ್ತ ಆಸಕ್ತರನ್ನು ಸೆಳೆಯಿತು. ಕೀರ್ತನೆಗಳು ಹಾಗೂ ವರ್ಣಗಳ ಸಮ್ಮಿಲನ ಮೈಮನಸು ರೋಮಾಂಚನಗೊಳ್ಳುವಂತೆ ಮಾಡಿತು. ಹಾಡುವುದರಲ್ಲಿರುವ ಸಾಟಿಯಿಲ್ಲದ ಗಾಯಕನ ತನ್ಮಯತೆ, ಪ್ರೇಕ್ಷಕರನ್ನು ಸಂಗೀತ ಸುಧೆಯಲ್ಲಿ ತೇಲಾಡಿಸಿದ ರೀತಿ ಮರೆಯಲಾಗದ ಅನುಭವವೇ ಸರಿ.
ವಯಲಿನ್ನಲ್ಲಿ ಆಟ್ಟುಕಾಲ್ ಬಾಲಸುಬ್ರಹ್ಮಣ್ಯನ್, ಮೃದಂಗದಲ್ಲಿ ಕೆ.ಎಮ್.ಎಸ್.ಮಣಿ, ಘಟಂ ವಿ.ಶ್ರೀಜಿತ್ ಹಾಗೂ ಮೋಸರ್ಿಂಗ್ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries