HEALTH TIPS

No title

               ವಣರ್ೋತ್ಸವದಲ್ಲಿ ರಂಗಸಿರಿ ಯಕ್ಷಗಾನ
     ಬದಿಯಡ್ಕ: ಶಾಲೆಗಳನ್ನು ಜನರತ್ತ ಕೊಂಡೊಯ್ದಾಗ, ಶಾಲಾ ವಾಷರ್ಿಕೋತ್ಸವವನ್ನು ಊರಿನ ಉತ್ಸವವಾಗಿ ಮಾರ್ಪಡಿಸಿದಾಗ ಶಾಲೆಯತ್ತ ಜನರು ಆಕಷರ್ಿತರಾಗುತ್ತಾರೆ. ಇದಕ್ಕೆ ಸಾಕ್ಷಿ ಕುಂಬಳೆ ಜಿ.ಡಬ್ಲೂ.ಎಲ್.ಪಿ. ಶಾಲೆಯಲ್ಲಿ ಶುಕ್ರವಾರ ನಡೆದ ವಣರ್ೋತ್ಸವ 2018. ಸಂದರ್ಭದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಭಕ್ತಸುಧನ್ವ ಯಕ್ಷಗಾನ ವಿಶೇಷತೆಯನ್ನು ನೀಡಿತು. ಜೀವನದಲ್ಲಿ ಭಕ್ತಿಯೆಂಬುದು ಹೇಗೆ ಹಾಸುಹೊಕ್ಕಂತಿರಬೇಕೆಂಬುದನ್ನು ಯಕ್ಷಗಾನದ ಮೂಲಕ ಕಲಾವಿದರು ಪ್ರದಶರ್ಿಸಿದರು.
   ಮುಮ್ಮೇಳದಲ್ಲಿ ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸುಧೀರ್ ರೈ, ಅಜರ್ುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ಪ್ರದ್ಯುಮ್ನನಾಗಿ ಶಶಾಂಕ ಮೈರ್ಕಳ, ವೃಷಕೇತುವಾಗಿ ಅಭಿಜ್ಞಾ ಭಟ್, ಕೃಷ್ಣನಾಗಿ ಗುರುಪ್ರಸಾದ್ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ಭಾಗವತಿಕೆಯಲ್ಲಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಸಹಕರಿಸಿದರು. ವಿದ್ಯಾಥರ್ಿಗಳನ್ನು ತಿದ್ದಿ ರಂಗಕ್ಕೆ ಸಜ್ಜುಮಾಡಿದ ರಂಗಸಿರಿಯ ಯಕ್ಷಗಾನಗುರು ಬಾಯಾರಿನ ಸೂರ್ಯನಾರಾಯಣ ಪದಕಣ್ಣಾಯರು ಮದ್ದಳೆಯಲ್ಲಿ ಸಹಕರಿಸಿದರು. ಅಕಾಲಿಕ ಮಳೆಯಿಂದಾಗಿ ಸ್ವಲ್ಪ ಅಸ್ತವ್ಯಸ್ತಗೊಂಡ ವೇದಿಕೆಯನ್ನೂ ಮತ್ತೆ ವ್ಯವಸ್ಥಿತಗೊಳಿಸಿದ್ದು ವ್ಯವಸ್ಥಾಪಕರ ಕಲಾಪ್ರೀತಿ ಹಾಗೂ ಸೂಕ್ತರೀತಿಯಲ್ಲಿ ಬಳಸಿದುದು ರಂಗಸಿರಿಯ ಕಲಾವಿದರ ನಿಪುಣತೆಗೆ ಕೈಗನ್ನಡಿಯಾಗಿತ್ತು. ನೇಪಥ್ಯದಲ್ಲಿ ಕೇಶವ ಆಚಾರ್ಯ, ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು. ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘ ಹಾಗೂ ವಣರ್ೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು.
 





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries