HEALTH TIPS

No title

               ಪುರಾತನ ದೇವಾಲಯಗಳ ಪುನರುತ್ಥಾನದಿಂದ ಭಾರತೀಯ ಸಂಸ್ಕೃತಿಯ ಉಳಿವು : ಮಧುಸೂದನ ಆಯರ್
     ಬದಿಯಡ್ಕ: ಪುರಾತನ ದೇವಾಲಯಗಳ ಜೀಣರ್ೋದ್ಧಾರಗಳಿಂದ ಭಾರತೀಯ ಸಂಸ್ಕೃತಿಯ ಉಳಿವು ಸಾಧ್ಯವಿದೆ. ಪ್ರತಿಯೊಬ್ಬ ಭಕ್ತರೂ ಇಂತಹ ಪುಣ್ಯಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನವನ್ನು ಪಾವನಗೊಳಿಸಬೇಕು ಎಂದು ಘನ ಉದ್ಯಮಿ ಹಾಗೂ ಧಾಮರ್ಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಅಭಿಪ್ರಾಯಪಟ್ಟರು.
   ಅವರು ಜೀಣರ್ೋದ್ಧಾರಗೊಳ್ಳುತ್ತಿರುವ ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಭೋಜನಶಾಲೆಗೆ ಭಾನುವಾರ ಶಿಲಾನ್ಯಾಸಗೈದು, ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
  ಇಂತಹ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಊರಿನ ಜನರು ಒಂದುಗೂಡಿದಾಗ ಸನಾತನ ಹಿಂದೂ ಧರ್ಮ ಸದೃಢವಾಗುವುದಲ್ಲದೆ, ಏಕತೆ ಹಾಗೂ ಸಾಮರಸ್ಯ ನೆಲೆಗೊಳ್ಳುತ್ತದೆ ಎಂದರು.
  ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಯು.ಬಿ.ಕುಣಿಕುಳ್ಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೀಣರ್ೋದ್ಧಾರ ಸಮಿತಿಯ ಗೌರವಾಧ್ಯಕ್ಷ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಶ್ರೀ ಕ್ಷೇತ್ರದ ಗರ್ಭಗುಡಿ ಮತ್ತು ತೀರ್ಥಮಂಟಪಗಳಿಗೆ ತಾಮ್ರ ಹೊದಿಸುವ ಬಗ್ಗೆ ಧನಸಂಗ್ರಹಕ್ಕಾಗಿ ಹೊರತಂದ ಕೂಪನ್ ಬಿಡುಗಡೆಗೊಳಿಸಿ ಭಕ್ತಜನರನ್ನುದ್ದೇಶಿಸಿ ಮಾತನಾಡುತ್ತಾ ಪೂರ್ವಜನ್ಮದ ಸುಕೃತಫಲದಿಂದ ದೇವಸ್ಥಾನಗಳ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ದಾನಧರ್ಮಗಳನ್ನು ಮಾಡಿ ದೇವರ ಪುಣ್ಯಕಾರ್ಯದಲ್ಲಿ ನಾವೆಲ್ಲಾ ಪಾಲ್ಗೊಂಡು ಕೃತಾರ್ಥರಾಗೋಣ ಎಂದರು.
   ಜೀಣರ್ೋದ್ಧಾರ ಸಮಿತಿಯ ಉಪಾಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಉಬ್ರಂಗಳ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಮಾತೃ ಸಮಿತಿಯ ಅಧ್ಯಕ್ಷೆ ಪ್ರತಿಭಾ ಜಯರಾಜ್ ಉಬ್ರಂಗಳ ಉಪಸ್ಥಿತರಿದ್ದರು. ಜೀಣರ್ೋದ್ಧಾರ ಸಮಿತಿಯ ಕೋಶಾಧಿಕಾರಿ ಈಶ್ವರ ರಾವ್ ಮೈಲ್ತೊಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದಶರ್ಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದಶರ್ಿ ಚಂದ್ರಶೇಖರ ಕುರುಪ್ ಉಬ್ರಂಗಳ ವಂದಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries