HEALTH TIPS

No title

                 ಪರವನಡ್ಕ ಎಂಆರ್ಎಸ್ ಇತರ ಶಾಲೆಗಳಿಗೆ ಮಾದರಿ : ಸಚಿವ ಎ.ಕೆ.ಬಾಲನ್
    ಕಾಸರಗೋಡು: ಪರಿಶಿಷ್ಟ  ವರ್ಗ ವಿಭಾಗದ ಬಾಲಕಿಯರಿಗಾಗಿ ಕೇರಳದಲ್ಲಿ  ಕಾಯರ್ಾಚರಿಸುತ್ತಿರುವ ರೆಸಿಡೆನ್ಶಿಯಲ್ ಶಾಲೆಗಳಲ್ಲಿ  ಕಾಸರಗೋಡು ಜಿಲ್ಲೆಯ ಪರವನಡ್ಕ ಎಂಆರ್ಎಸ್ ಶಾಲೆಯು ಅತ್ಯುತ್ತಮವಾಗಿರುವುದಾಗಿ ರಾಜ್ಯ ಪರಿಶಿಷ್ಟ  ಜಾತಿ - ವರ್ಗ ಮತ್ತು  ಹಿಂದುಳಿದ ವಿಭಾಗ ಅಭಿವೃದ್ಧಿ ಖಾತೆ ಸಚಿವ ಎ.ಕೆ.ಬಾಲನ್ ಹೇಳಿದ್ದಾರೆ.
    ಉದುಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರವನಡ್ಕ ಮೋಡೆಲ್ ರೆಸಿಡೆನ್ಸ್  ಶಾಲೆಯಲ್ಲಿ  ನೂತನವಾಗಿ ನಿಮರ್ಿಸಲಾದ ಹೈಯರ್ ಸೆಕೆಂಡರಿ ಶಾಲೆಯ ಹಾಸ್ಟೆಲ್ ಕಟ್ಟಡ ಮತ್ತು  ರಿಕ್ರಿಯೇಶನ್ ಹಾಲ್ ಹಾಗೂ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಅಧ್ಯಯನ ಹಾಗೂ ಇತರ ಚಟುವಟಿಕೆಗಳಲ್ಲಿ  ಈ ಶಾಲೆಯು ಇತರ ಶಾಲೆಗಳಿಗೆ ಮಾದರಿಯಾಗಿದೆ. ಎಸ್ಎಸ್ಎಲ್ಸಿಯಲ್ಲಿ  ನಿರಂತರವಾಗಿ ಶೇಕಡಾ 100 ಫಲಿತಾಂಶ, ಪ್ಲಸ್ಟುವಿನಲ್ಲಿ  ಉತ್ತಮ ಫಲಿತಾಂಶ ಅಭಿನಂದನಾರ್ಹವಾಗಿದೆ. ಪರವನಡ್ಕ ಶಾಲೆಯ ಸಮರ್ಥ ಹಾಗೂ ಸಮರ್ಪಕ ವ್ಯವಸ್ಥೆ  ಅತ್ಯಂತ ಶ್ರೇಷ್ಠ  ಎಂಬ ಹೆಗ್ಗಳಿಕೆ ಪಡೆದಿದೆ ಎಂದರು. ಉದ್ಘಾಟನೆ ಬಳಿಕ ಹಾಸ್ಟೆಲ್ನಿಂದ ಮಧ್ಯಾಹ್ನದ ಊಟ ಸಹ ಮುಗಿಸಿ ಸಚಿವರು ತೆರಳಿದರು.
   ಕಾರ್ಯಕ್ರಮದಲ್ಲಿ  ಉದುಮ ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಸ್ವಾಗತಿಸಿ, ಜಿಲ್ಲಾ  ಟ್ರೈಬಲ್ ಡೆವಲಪ್ಮೆಂಟ್ ಅಧಿಕಾರಿ ಪಿ.ಟಿ.ಅನಂತಕೃಷ್ಣನ್ ವಂದಿಸಿದರು. ಡೆಪ್ಯೂಟಿ ಚೀಫ್ ಎಂಜಿನಿಯರ್ ಕಮಲಾಕ್ಷನ್ ವರದಿ ಮಂಡಿಸಿದರು.
   ಚೆಮ್ನಾಡು ಗ್ರಾಮ ಪಂಚಾಯತು ಅಧ್ಯಕ್ಷ  ಕಲ್ಲಟ್ರ ಅಬ್ದುಲ್ ಖಾದರ್, ಸದಸ್ಯೆ ರೇಣುಕಾ ಭಾಸ್ಕರನ್, ವಿ.ಶಶೀಂದ್ರನ್, ಒಕ್ಲಮ್ ಕೃಷ್ಣನ್, ಟಿ.ನಾರಾಯಣನ್, ಎಂ.ಸದಾಶಿವನ್, ಮೊಯ್ದೀನ್ ಕುಂಞಿ, ಶಾಲಾ ಮುಖ್ಯ ಶಿಕ್ಷಕ ಪಿ.ರಾಧಾಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಅನಿಲ್ಕುಮಾರ್ ಮುಂತಾದವರು ಭಾಗವಹಿಸಿದ್ದರು.
   3.48 ಕೋಟಿ ರೂ. ವೆಚ್ಚದಲ್ಲಿ  ಮೂರು ಅಂತಸ್ತಿನ ಕಟ್ಟಡ : ಮೂರು ಅಂತಸ್ತಿನ 2,394 ಚದರ ಮೀಟರ್ ವಿಸ್ತೀರ್ಣದ ಹಾಸ್ಟೆಲ್ ಕಟ್ಟಡಕ್ಕಾಗಿ 3.48 ಕೋಟಿ ರೂ. ವಿನಿಯೋಗಿಸಲಾಗಿದೆ. ಪ್ರತಿ ಅಂತಸ್ತಿನಲ್ಲಿ  ನಾಲ್ಕರಂತೆ ಹಾಸ್ಟೆಲ್ ಕೊಠಡಿಗಳು ಹಾಗೂ ಎರಡು ದೊಡ್ಡ  ಕೊಠಡಿಗಳಿವೆ. ಶಾಲಾ ಹಾಸ್ಟೆಲ್, ಸಾಫ್ಟ್  ಕ್ವಾರ್ಟರ್ಸ್, ಮೆಸ್ ಹಾಲ್, ಶಾಲಾ ಸುತ್ತು ಗೋಡೆ ದುರಸ್ತಿಗಾಗಿ 50 ಲಕ್ಷ  ರೂ., ಶಾಲಾ ಸೆಕ್ಯೂರಿಟಿ, ಶೌಚಾಲಯ ಮೊದಲಾದವುಗಳಿಗಾಗಿ 6.50 ಲಕ್ಷ  ರೂ., ಶಾಲಾ ಹಾಸ್ಟೆಲ್ನ ಪ್ಲೋರಿಂಗ್ಗೆ 15 ಲಕ್ಷ  ರೂ., ಹಾಸ್ಟೆಲ್ನ ಮೇಲ್ಛಾವಣಿಗಾಗಿ 8 ಲಕ್ಷ  ರೂ. ಸಹಿತ 82,60,000 ರೂಪಾಯಿ ವೆಚ್ಚ  ಮಾಡಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries