HEALTH TIPS

No title

              ನಾಲಂದಾದಲ್ಲಿ ಮಹಿಳಾ ದಿನಾಚರಣೆ
    ಪೆರ್ಲ: ಹಿಂದೆ ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಅಂತಮರ್ುಖಿಗಳಾಗಿ ಬಾಳುವ ಕಾಲ ಒಂದಿತ್ತು. ಇಂದು ಹಾಗಲ್ಲ. ಇದ್ದ ಸ್ವಾತಂತ್ರ್ಯವನ್ನು ಬಳಸಿಕೊಂಡು ತಾನೇನು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು. ನಾಲ್ಕು ಗೋಡೆಯೊಳಗಿದ್ದು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸ್ತ್ರೀಯರನ್ನು ಜರೆಯುವ, ಟೀಕಿಸುವ ಜನರಿದ್ದಾರೆಂದು ಅಂಜುತ್ತ ಕೂರದೆ ಬಂದುದನ್ನು ಮೆಟ್ಟಿನಿಂತು ಛಲದಿಂದ ಕಾರ್ಯಸಾಧನೆಯನ್ನು ಮಾಡಬೇಕು ಎಂದು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ  ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಸ್ತ್ರೀ ಶಕ್ತಿ ಒಗ್ಗಟ್ಟಾಗಿ  ಸಮಾಜ ಕಂಟಕರ ವಿರುದ್ಧ ಹೋರಾಡಬೇಕಾಗಿದೆ. ಅದಕ್ಕಾಗಿ ಸ್ತ್ರೀಯರು  ಹೋರಾಟ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸತ್ಯ, ಧರ್ಮ, ನ್ಯಾಯಕ್ಕಾಗಿ ಮುನ್ನುಗ್ಗಬೇಕು. ಹೆಣ್ಣೂಬ್ಬಳು ವಿದ್ಯಾವಂತಳಾದರೆ ಅವಳ ಕುಟುಂಬ, ಸಮಾಜ, ದೇಶ ಅಭಿವೃದ್ಧಿ ಹೊಂದುತ್ತದೆ. ಪುರುಷ ಮತ್ತು ಸ್ತ್ರೀ ಸಮಾಜದ ಕಣ್ಣುಗಳಿದ್ದಂತೆ ಎಂದರು.
   ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪುರುಷ ಯಾವುದೇ ಸಾಧನೆಯನ್ನು ಸಾಧಿಸಬೇಕಾದರೆ ಅದರ ಹಿಂದೆ ಸ್ತ್ರೀ ಶಕ್ತಿಯೊಂದಿದೆ ಎಂದರು.  ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್, ಭೂಮಿತ್ರ ಸೇನಾ ಸಂಚಾಲಕ, ಉಪನ್ಯಾಸಕ ರಂಜಿತ್ ಕುಮಾರ್., ಎನ್.ಎಸ್.ಎಸ್. ಯೊಜನಾಧಿಕಾರಿ ಶಂಕರ್ ಖಂಡಿಗೆ, ಮಲೆಯಾಳ ಉಪನ್ಯಾಸಕಿ ವಿನೀಶಾ ಉಪಸ್ಥಿತರಿದ್ದರು. ವಿದ್ಯಾಥರ್ಿನಿ ಕೃಷ್ಣಪ್ರಿಯ ಸ್ವಾಗತಿಸಿ, ನಯನಶ್ರೀ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು, ವಿದ್ಯಾಥರ್ಿ ವಿದ್ಯಾಥರ್ಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries