HEALTH TIPS

No title

          ಮಧೂರು ಶ್ರೀ ಕಾಳಿಕಾಂಬಾ ಮಠ ಧರ್ಮದೈವಗಳ ಬಾಲಾಲಯಕ್ಕೆ ಶಿಲಾನ್ಯಾಸ
     ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದ ಧರ್ಮದೈವಗಳ ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಮಠದ ತಂತ್ರಿವರ್ಯ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯ, ವಾಸ್ತುಶಿಲ್ಪಿ ಮಾಯಿಪ್ಪಾಡಿ ತುಕಾರಾಮ ಆಚಾರ್ಯ ಹಾಗೂ ಕಾಷ್ಠಶಿಲ್ಪಿ  ಪುರೋಹಿತ ಜನಾರ್ದನ ಆಚಾರ್ಯ ಪರಕ್ಕಿಲ ಮಧೂರು ಅವರ ನೇತೃತ್ವದಲ್ಲಿ  ಬಾಲಾಲಯಕ್ಕೆ ಶಂಕು ಸ್ಥಾಪನೆಯನ್ನು ಮಾಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಅಧ್ಯಕ್ಷ ಬಿ.ಜನಾರ್ದನ ಆಚಾರ್ಯ ಕೂಡ್ಲು, ಕಾಯರ್ಾಧ್ಯಕ್ಷ ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು, ಪ್ರಧಾನ ಕಾರ್ಯದಶರ್ಿ ವೈ.ಧಮರ್ೇಂದ್ರ ಆಚಾರ್ಯ ಮಧೂರು, ಕೋಶಾಧಿಕಾರಿ ಕೆ.ನಾರಾಯಣ ಆಚಾರ್ಯ ಕಂಬಾರು, ಉಪಾಧ್ಯಕ್ಷರುಗಳಾದ ಕೆ.ಜಗದೀಶ ಆಚಾರ್ಯ ಕಂಬಾರು, ಬಿ.ಎನ್.ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು, ಪೆಣರ್ೆ ಜನಾರ್ಧನ ಆಚಾರ್ಯ ಕೊಲ್ಯ, ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು, ಎಂ.ಯೋಗೇಂದ್ರ ಆಚಾರ್ಯ ಪರಕ್ಕಿಲ, ಕಾರ್ಯದಶರ್ಿಗಳಾದ ಎ.ನಿರಂಜನ ಆಚಾರ್ಯ ವಿವೇಕಾನಂದನಗರ, ತಾರಾನಾಥ ಆಚಾರ್ಯ ಮಧೂರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ಸುಂದರ ಆಚಾರ್ಯ ಬದಿಯಡ್ಕ, ಹಾಗೂ ಸಲಹಾ ಸಮಿತಿಯ ಸದಸ್ಯರು, ವೈದಿಕ ಸಹಾಯಕರು, ಪ್ರಾಂತ್ಯ ಸದಸ್ಯರು, ಸಮಾಜಬಾಂಧವರು ಉಪಸ್ಥಿತರಿದ್ದರು. ಇದಕ್ಕೆ ಮುಂಚಿತವಾಗಿ ಎಪ್ರಿಲ್ 20 ಮತ್ತು 21ರಂದು ಜರಗುವ ಬ್ರಹ್ಮಕಲಶೋತ್ಸವ ಹಾಗೂ ವಾಷರ್ಿಕೋತ್ಸವದ ಆಮಂತ್ರಣವನ್ನು ಶ್ರೀ ಮಠದಲ್ಲಿ ಬಿಡುಗಡೆ ಮಾಡಲಾಯಿತು.
   ಬಳಿಕ ನಡೆದ ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬಿ.ಜನಾರ್ದನ ಆಚಾರ್ಯ ಕೂಡ್ಲು ವಹಿಸಿದರು. ವಿವಿಧ ಉಪಸಮಿತಿಯ ಸಂಚಾಲಕರನ್ನು ಆಯ್ಕೆಮಾಡಲಾಯಿತು. ಆಥರ್ಿಕ ಸಮಿತಿಗೆ ಕೆ.ನಾರಾಯಣ ಆಚಾರ್ಯ ಕಂಬಾರು, ದೈವಸ್ಥಾನದ ಕಾಮಗಾರಿಗೆ ಗೌರವಾಧ್ಯಕ್ಷ ಎಂ.ಪುರುಷೋತ್ತಮ ಆಚಾರ್ಯ ಕಂಬಾರು, ಕೆ.ಜಗದೀಶ ಆಚಾರ್ಯ ಕಂಬಾರು ತಾರಾನಾಥ ಆಚಾರ್ಯ ಮಧೂರು ಮತ್ತು ಶಶಿಧರರ ಆಚಾರ್ಯ ಬೇಳ ಇವರಿಗೆ ಜಂಟಿಯಾಗಿ ಉಸ್ತುವಾರಿಯನ್ನು ನೀಡಲಾಯಿತು. ಕಾಯರ್ಾಲಯ ಕೊಲ್ಯ ಜನಾರ್ದನ ಆಚಾರ್ಯ, ಮಾಧ್ಯಮ ವಿಭಾಗ ವೈ.ಧಮರ್ೇಂದ್ರ ಆಚಾರ್ಯ ಮಧೂರು, ವೈದಿಕ ವಿಬಗಕ್ಕೆ ಬಿ.ಎನ್.ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು, ಸಾಮಾನು ಮತ್ತು ಸಮಿತ್ತು ಖರೀದಿಗೆ ಎಂ.ಯೋಗೇಂದ್ರ ಆಚಾರ್ಯ ಪರಕ್ಕಿ ಮೊದಲಾದವರನ್ನು ಆಯ್ಕೆಮಾಡಲಾಯಿತು. 
   ಪ್ರಧಾನ ಕಾರ್ಯದಶರ್ಿ ವೈ.ಧಮರ್ೇಂದ್ರ ಆಚಾರ್ಯ ಮಧೂರು ಪ್ರಾಸ್ತಾವಿಕ ನುಡಿದು ಬ್ರಹ್ಮ ಕಲಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ ಎಲ್ಲಾ ಸಂಘ ಸದಸ್ಯರು ಮನ:ಪೂರ್ವಕವಾಗಿ ಸಹಕರಿಸಬೇಕಾಗಿ ವಿನಂತಿಸಿದರು. ಬಾಲಾಲಯ ಪ್ರತಿಷ್ಠೆಯು ಮಾಚರ್್ 24ರಂದು ನಡೆಯಲಿದೆ.
 ಗೌರವಾಧ್ಯಕ್ಷ ಎಂ.ಪುರುಷೋತ್ತಮ ಆಚಾರ್ಯ ಕಂಬಾರು, ಕಾಯರ್ಾಧ್ಯಕ್ಷ ಎನ್.ಪರಮೇಶ್ವರ ಆಚಾರ್ಯ ನೀಚರ್ಾಲು ಮತ್ತು ಕೆ.ಪ್ರಭಾಕರ ಆಚಾರ್ಯ ವಿವಿಧ ಉಪಸಮಿತಿಗಳಿಗೆ ಮಾರ್ಗದರ್ಶನವನ್ನು ನೀಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವೀಯಾಗಿ ಜರಗಿಸಲು ಸಹಕರಿಸಲು ವಿನಂತಿಸಿದರು. ಉಪಾಧ್ಯಕ್ಷ ಲೋಕೇಶ್.ಎಂ.ಬಿ.ಆಚಾರ್ ಕಂಬಾರ್ ಶ್ರೀ ಮಠದ ವಾಟ್ಸಾಪ್ ಗ್ರೂಪಿಗೆ ಕ್ರಿಯಾಶೀಲರನ್ನು ಸೇರ್ಪಡೆ ಮತ್ತು ಯಾವರೀತಿಯಾಗಿ ಕಾರ್ಯಕ್ರಮಕ್ಕೆ ಸಹಕರಿಸಬಹುದು ಎಂಬುದಾಗಿ ಮಾಹಿತಿ ನೀಡಿದರು. ಪುತ್ತೂರು, ಮಂಗಳೂರು ಸಹಿತ ಎಲ್ಲಾ ಪ್ರಾಂತ್ಯ ಸದಸ್ಯರು, ಮಹಿಳಾ ವೃಂದ, ಯುವಕ ಸಂಘ, ಭಜನಾ ಸಂಘದ ಪದಾಧಿಕಾರಿಗಳು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಯನ್ನು ನೀಡಿದರು. ಕೆ.
ಪ್ರಭಾಕರ ಆಚಾರ್ಯ ಕೋಟೆಕ್ಕಾರು ಪ್ರಾರ್ಥನೆಯನ್ನು ಮಾಡಿ, ಕೆ.ನಾರಾಯಣ ಆಚಾರ್ಯ ಕಂಬಾರು ಸ್ವಾಗತಿಸಿದರು. ಎ.ನಿರಂಜನ ಆಚಾರ್ಯ ವಿವೇಕಾನಂದನಗರ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries