HEALTH TIPS

No title

           ಪೆಮರ್ುದೆ ಚಾಪೆಲ್ ಚಚರ್್ ಆಗಿ ಘೋಷಣೆ
   ಉಪ್ಪಳ:  ಬಂದ್ಯೋಡು ಸಮೀಪದ  ಪೆಮರ್ುದೆ  ಸಂತ  ಲಾರೆನ್ಸ್  ಚಾಪೆಲ್ನ್ನು  ಇಗಜರ್ಿ ( ಧರ್ಮಕ್ಷೇತ್ರ)ಯನ್ನಾಗಿ ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ.
    ಸೋಮವಾರ  ಸಂಜೆ  ಪೆಮರ್ುದೆ ಲಾರೆನ್ಸ್ ನಗರದಲ್ಲಿ  ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧಮರ್ಾಧ್ಯಕ್ಷ  ಅತೀ  ವಂದನೀಯ ಡಾ. ಅಲೋಶಿಯಸ್   ಪಾವ್ಲ್  ಡಿ ಸೋಜರು ಪೆಮರ್ುದೆ ಚಾಪೆಲ್ನ್ನು  ಇಗಜರ್ಿಯನ್ನಾಗಿ  ಘೋಷಿಸಿದರು. 
   ಈ ಸಂದರ್ಭದಲ್ಲಿ   ಪೆಮರ್ುದೆ  ಸಂತ  ಲಾರೆನ್ಸ್  ಇಗಜರ್ಿಯ ಪ್ರಥಮ ಧರ್ಮಗುರುಗಳಾಗಿ  ವಂದನೀಯ ಫಾದರ್  ಮೆಲ್ವಿನ್  ಫೆನರ್ಾಡೀಸ್ರವರಿಗೆ   ಧಮರ್ಾಧ್ಯಕ್ಷರು  ಅಧಿಕಾರ ನೀಡಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂದನೀಯ ಫಾದರ್  ವಿಕ್ಟರ್ ಡಿಸೋಜ ಧರ್ಮಕ್ಷೇತ್ರದ ಘೋಷಣೆ ಬಗ್ಗೆ ಮಾಹಿತಿ ನೀಡಿದರು
  ನೂತನ ಇಗಜರ್ಿ ಘೋಷಣಾ ಸಮಾರಂಭದ ಅಂಗವಾಗಿ ಧಮರ್ಾಧ್ಯಕ್ಷರ  ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನೆರವೇರಿತು. ಕಾಸರಗೋಡು ವಲಯ ವಿಕಾರ್ವಾರ್  ವಂದನೀಯ ಫಾದರ್   ವಲೇರಿಯನ್  ಫ್ರಾಂಕ್, ಮಣಿಯಂಪಾರೆ  ಇಗಜರ್ಿ ಧರ್ಮಗುರು ವಂದನೀಯ ಫಾದರ್  ಪಾವ್ಲ್  ಡಿ ಸೋಜ,  ವಂದನೀಯ ಫಾದರ್  ಕ್ಲೋಡ್ಕೋರ್ಡ, ವಂದನೀಯ ಫಾದರ್  ಬೆಂಜಮಿನ್ ಡಿಸೋಜ  ಹಾಗೂ ಇತರ ಧರ್ಮಗುರುಗಳು, ಕಯ್ಯಾರು  ಕ್ರಿಸ್ತರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ   ಜೋನ್  ಡಿ ಸೋಜ , ಕಾರ್ಯದಶರ್ಿ ರೋಶನ್  ಡಿಸೋಜ,  ಸಿಸ್ಟರ್   ಮೋ0ತಿನ್ ಗೋಮ್ಸ್,  ಸಿಸ್ಟರ್  ಜಾಸ್ಮಿನ್, ಸಿಸ್ಟರ್  ರೀನಾ  ಹಾಗೂ ಇತರ ಧರ್ಮಗುರುಗಳು, ಭಗಿನಿಯರು ಅತಿಥಿಗಳು ಉಪಸ್ಥಿತರಿದ್ದರು.
   ಪೆಮರ್ುದೆಯಲ್ಲಿ  ನೂತನ ಇಗಜರ್ಿ  ಘೋಷಣೆಯಾಗುವ ಮೂಲಕ  ಕಾಸರಗೋಡು ವಲಯದಲ್ಲಿ   ಇಗಜರ್ಿಗಳ ಸಂಖ್ಯೆ  14 ಮತ್ತು ಮಂಗಳೂರು ಧರ್ಮಪ್ರಾಂತ್ಯದಲ್ಲಿ 118 ಕ್ಕೇರಿದೆ.
   ಸುಮಾರು ನಾಲ್ಕೂವರೆ ದಶಕದ  ಇತಿಹಾಸವಿರುವ  ಪೆಮರ್ುದೆ ಲಾರೆನ್ಸ್ ನಗರದಲ್ಲಿ 1973ರಂದು ಆರಂಭಗೊಂಡ ಸಂತ ಲಾರೆ ನ್ಸ್ ಚಾಪೆಲ್ ಇಗಜರ್ಿಯಾಗಿ   ಭಡ್ತಿಗೊಂಡಿದೆ.  ಕಯ್ಯಾರು  ಕ್ರಿಸ್ತರಾಜ ದೇವಾಲಯದ   ಅಧೀನದಲ್ಲಿರುವ 61 ಕುಟುಂಬಗಳು ಪೆಮರ್ುದೆ  ಸಂತ ಲೋರೆನ್ಸ್ ದೇವಾಲಯಕ್ಕೆ ಸೇರ್ಪಡೆ ಗೊಂಡಿದೆ.
  ಕಯ್ಯಾರು ಕ್ರಿಸ್ತರಾಜ ದೇವಾಲಯದ ಅಧೀನತೆಯಲ್ಲಿದ್ದ  ಪೆಮರ್ುದೆ  ಸಂತ ಲೋರೆನ್ಸ್   ಚಾಪೆಲ್ 2017 ರ ಜುಲೈ  ಒಂದರಿಂದ  ಸ್ವತಂತ್ರ ಚಾಪೆಲ್ ಆಗಿ ಮಂಗಳೂರು ಧರ್ಮಪ್ರಾಂತ್ಯದ  ಧಮರ್ಾಧ್ಯಕ್ಷರು  ಅನುಮತಿ ನೀಡಿ ಡೊಮಿನಿಕನ್   ಧರ್ಮಗುರುಗಳಿಗೆ ಹಸ್ತಾ0ತರ ಮಾಡಿದ್ದರು.  ವಂದನೀಯ ಫಾ. ಮೆಲ್ವಿನ್  ಫೆನರ್ಾಂಡಿಸ್ರವರರನ್ನು  ಚಾಪೆಲ್ನ ಆಡಳಿತ  ನಿದರ್ೇಶಕರನ್ನಾಗಿ  ನೇಮಿಸಲಾಗಿತ್ತು. 1973  ರಲ್ಲಿ ಚಾಪೆಲ್ ಗೆ   ಮಾನ್ಯತೆ ಲಭಿಸಿತ್ತು.
   ನೂತನ  ದೇವಾಲಯ ನಿಮರ್ಾಣಕ್ಕೆ  2016 ರ ಆಗಸ್ಟ್ ಏಳರಂದು  ಮಂಗಳೂರು ಧರ್ಮಪ್ರಾಂತ್ಯದ  ವಿಕಾರ್  ಜನರಲ್  ಡೆನಿಸ್  ಮೊರಾಸ್ ರವರು ಶಿಲಾನ್ಯಾಸ  ನೆರವೇರಿಸಿದ್ದರು. ನೂತನ ಇಗಜರ್ಿ  ಕಟ್ಟಡ ಕಾಮಗಾರಿ  ಪ್ರಗತಿಯಲ್ಲಿದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries