HEALTH TIPS

No title

              ಕಕ್ವೆಯ ಶಂಖಾಕೃತಿಯ ಕೊಳ ಅಭಿವೃದ್ದಿಯತ್ತ ಮನಮಾಡಿದ ಗ್ರಾಮಸ್ಥರು
                         ಪಾಂಡವ ನಿಮರ್ಿತಿಯೆಂಬ ನಂಬಿಕೆ             
    ಕುಂಬಳೆ: ಜಿಲ್ಲೆಯ ಅತಿ ಎತ್ತರದ ಗುಡ್ಡ ಪ್ರದೇಶವಾಗಿದ್ದು, ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಪೊಸಡಿಗುಂಪೆ ಎಂದಿಗೂ ಕುತೂಹಲ ತಣಿಸದ ಅತ್ಯಪೂರ್ವ ನಿಸರ್ಗ ಪ್ರದೇಶ. ಪೊಸಡಿಗುಂಪೆಯ ಸುತ್ತುಮುತ್ತು ಕಾಣಸಿಗುವ ಹತ್ತು ಹಲವು ಗುಹೆಗಳು, ಭಸ್ಮಗುಹೆ, ಕೊಳಗಳು, ಜೊತೆಗೆ ಬೀಸುವ ತಂಗಾಳಿ ಪುಳಕಿತಗೊಳಿಸುವ ಜೊತೆಗೆ ಇಹವನ್ನು ಮರೆಸಿ ಕನಸಿನ ಲೋಕಕೊಯ್ಯುತ್ತದೆ.
  ಪೊಸಡಿಗುಂಪೆಯ ಸಮೀಪ ಪ್ರದೇಶ ಧರ್ಮತ್ತಡ್ಕ ಕಕ್ವೆ. ಇಲ್ಲಿ ಅತಿ ಪುರಾತನವಾದ ಶ್ರೀರಾಜರಾಜೇಶ್ವರಿ ಭಜನಾ ಮಂದಿರವಿದ್ದು, ಅದರ ಪಕ್ಕ ಕಂಡುಬರುವ ಶಂಖಾಕೃತಿಯ ನಿಸರ್ಗದತ್ತ ಕೊಳ ಇದೀಗ ಜನಾಕರ್ಷಣೆಯ ಕೇಂದ್ರವಾಗಿದೆ.
  ಸಾಮಾನ್ಯವಾಗಿ ಬೆಟ್ಟ ಪ್ರದೇಶವಾದ್ದರಿಂದ ಜನವಸತಿ ವಿರಳವಿರುವ ಕಕ್ವೆಯ ರಾಜರಾಜೇಶ್ವರಿ ಭಜನಾ ಮಂದಿರದ ಪುನರುತ್ಥಾನಕ್ಕಾಗಿ ಇತ್ತೀಚೆಗೆ ಇರಿಸಲಾದ ತಾಂಬೂಲ ಪ್ರಶ್ನೆಯಲಲಿ ಮಂದಿರ ಸನಿಹದ ಶಂಖಾಕೃತಿಯ ಕೊಳದ ಬಗ್ಗೆ ತಿಳಿಸಿದ್ದು, ಅದು ದ್ವಾಪರಾಯುಗದ್ದು ಎಂದು ತಿಳಿಸಲಾಗಿದೆ. ಸ್ವಸ್ಥ ಗಾಳಿ ಮತ್ತು ಸ್ವಚ್ಚ ಬೆಳಕಿಗೆ ಮೈಯೊಡ್ಡಿ ಶಂಖಾಕಾರದಲ್ಲಿರುವ ಈ ಕೊಳ ಏಪ್ರಿಲ್= ಮೇ ತಿಂಗಳುಗಳ ಬಿರುಬಿಸಿಲಿಗೂ ಬತ್ತಿದ ಪುರಾವೆ ಇಲ್ಲ. ದ್ವಾಪರದಲ್ಲಿ ಪಾಂಡವರಿಂದ ನಿಮರ್ಿತವಾದ ಕೊಳವಿದು ಎಮಬುದು ಪ್ರತೀತಿ.
    ಪ್ರಕೃತಿ ಆರಾಧಕರಾದ ಇಲ್ಲಿನ ಆಸ್ತಿಕ ಬಾಂಧವರು ಇದರ ಪೌರಣಿಕ ಮಹತ್ವ ತಿಳಿದು ಪುಳಕಿತರಾಗಿದ್ದು, ಇದರ ರಕ್ಷಣೆಗೆ ಅಣಿಯಾಗಿದ್ದಾರೆ. ಶಂಖಾಕೃತಿಯಂತಿರುವ ಪೌರಾಣಿಕ ತೀರ್ಥ ಕುಂಡ ವೀಕ್ಷಿಸಲು ದೂರದೂರಿನ ಆಸ್ತಿಕರು ತಂಡೋಪತಂಡವಾಗಿ ಕಕ್ವೆ ಪರಿಸರಕ್ಕೆ ಆಗಮಿಸುತ್ತಿದ್ದಾರೆ. ಮಾ.18 ರಂದು ಆದಿತ್ಯವಾರ ಬೆಳಗ್ಗೆ ಹತ್ತು ಗಂಟೆಗೆ ತೀರ್ಥ ಕುಂಡದ ಆವರಣ ನಿಮರ್ಾಣ ಸೇರಿದಂತೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ಜೀಣರ್ೋದ್ಧಾರ ಸಮಿತಿ ಸಭೆ ಕರೆಯಲಾಗಿದ್ದು, ಕನಿಯಾಲತ್ತಡ್ಕ ಸಮೀಪವತರ್ಿ ಪರಿಸರ ಸೇರಿದಂತೆ ಬಾಯಾರು ಗ್ರಾಮದ ಸಕಲ ಆಸ್ತಿಕ ಬಾಂಧವರು ಸಭೆಯಲ್ಲಿ ಭಾಗವಹಿಸಿ ಭಜನಾ ಮಂದಿರ ಹಾಗೂ ದೈವೀ ಸಾನಿಧ್ಯದ ಪುನರುತ್ಥಾನ ಕಾರ್ಯದಲ್ಲಿ ಕೈ ಜೋಡಿಸಲು ಮುಂದಾಗಿದ್ದಾರೆ.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries