HEALTH TIPS

No title

                   ಭೂಗತ ವಿದ್ಯುತ್ ಕೇಬಲ್ ಯೋಜನೆಗೆ ಮರುಜೀವ
           ಮೂರು ತಿಂಗಳೊಳಗೆ ಯೋಜನೆ ಅನುಷ್ಠಾನಕ್ಕೆ ವಿದ್ಯುತ್ ಇಲಾಖೆ ನಿಧರ್ಾರ
    ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ  ಎರಡು ಕೋಟಿ ರೂ. ವೆಚ್ಚದಲ್ಲಿ  ಸ್ಥಾಪಿಸಿದ ವಿದ್ಯುತ್ ಕೇಬಲ್ ಯೋಜನೆಗೆ ಹತ್ತು  ವರ್ಷಗಳ ಬಳಿಕ ಮರುಜೀವ ಬರಲಿದೆ. ಕೇಂದ್ರ ಸರಕಾರದ ಎಪಿಆರ್ಡಿಸಿ ಯೋಜನೆಯಡಿ ಕಾಞಂಗಾಡು ನಗರದಲ್ಲಿ  ಹತ್ತು  ವರ್ಷಗಳ ಹಿಂದೆ ಸ್ಥಾಪಿಸಿದ ಭೂಗತ ವಿದ್ಯುತ್ ಕೇಬಲ್ ಯೋಜನೆಯು ಇದೀಗ ತಾಂತ್ರಿಕ ಸಮಸ್ಯೆಗಳನ್ನು  ಪರಿಹರಿಸಿ ಮೂರು ತಿಂಗಳೊಳಗೆ ಕಾರ್ಯಗತಗೊಳ್ಳಲಿದೆ. ಈ ಕುರಿತು ಕೆಎಸ್ಇಬಿ ಅಂತಿಮ ತೀಮರ್ಾನ ಕೈಗೊಂಡಿದೆ.
    ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಗೊಂಡು ಅಜಾನೂರಿನ ಅತಿಞಾಲ್ ವರೆಗೆ ಯೋಜನೆಯಂತೆ ಭೂಗತ ಕೇಬಲ್ ಸ್ಥಾಪಿಸಲಾಗುವುದು. ಕಾಂಞಂಗಾಡು ನಗರ ಹಾಗೂ ಆಸುಪಾಸಿನಲ್ಲಿ  ಪ್ರಥಮ ಹಂತದಲ್ಲಿ  ಈ ಯೋಜನೆಯನ್ನು  ಅನುಷ್ಠಾನಕ್ಕೆ ತಂದು ನಂತರ ಜಿಲ್ಲೆಯ ಇತರೆಡೆಗಳಿಗೆ ವಿಸ್ತರಿಸಲಾಗುವುದು.
   ತಿರುವನಂತಪುರದಲ್ಲಿ  ಸಚಿವರ ಮಟ್ಟದಲ್ಲಿ  ನಡೆದ ಕೆಎಸ್ಇಬಿ ಅಕಾರಿಗಳ ಸಭೆಯಲ್ಲಿ  ಈ ನಿಧರ್ಾರ ಕೈಗೊಳ್ಳಲಾಗಿದೆ. ಕಾಂಞಂಗಾಡಿನವರಾದ ಕಂದಾಯ ಖಾತೆ ಸಚಿನ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ  ಜರಗಿದ ಈ ಸಭೆಯಲ್ಲಿ  ಲೋಕೋಪಯೋಗಿ ಇಲಾಖೆ ಮತ್ತು  ವಿದ್ಯುತ್ ಇಲಾಖೆ ಸಚಿವರು ಭಾಗವಹಿಸಿ ಅಗತ್ಯದ ಸಲಹೆ ಸೂಚನೆಗಳನ್ನು  ನೀಡಿದ್ದರು.
   ಭೂಗತ ಕೇಬಲ್ಗೆ ತಾಂತ್ರಿಕ ಅನುಮತಿ ನೀಡಲು ಕಾಯರ್ಾಚರಿಸುತ್ತಿರುವ ಪವರ್ ಟೆಲಿಕಾಮ್ ಸಮಿತಿಯ ಅನುಮತಿ ಲಭಿಸದಿರುವುದು ಭೂಗರ್ಭ ಕೇಬಲ್ ಕಾರ್ಯಗತಗೊಳಿಸಲು ಅಡ್ಡಿಯಾಗಿತ್ತು. ಟೆಲಿಫೋನ್ ಕೇಬಲ್ ಹಾಗೂ ವಿದ್ಯುತ್ ಕೇಬಲ್ನೊಂದಿಗೆ ಪರಸ್ಪರ ನಿದರ್ಿಷ್ಟ  ಅಂತರ ಪಾಲಿಸಿಲ್ಲ  ಎಂಬುದು ಪ್ರಧಾನ ತಾಂತ್ರಿಕ ಸಮಸ್ಯೆಯಾಗಿ ಸೂಚಿಸಲಾಗಿತ್ತು. ಇದಕ್ಕೆ ಈಗ ಪರಿಹಾರ ದೊರಕಿರುವುದಾಗಿ ಕೆಎಸ್ಇಬಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪಿ.ಸೀತಾರಾಮನ್ ತಿಳಿಸಿದ್ದಾರೆ.
   ಕಾಂಞಂಗಾಡು ಪೇಟೆಯಲ್ಲಿ  ನಡೆಯುತ್ತಿರುವ ಕೆಎಸ್ಟಿಪಿ ರಸ್ತೆ  ನವೀಕರಣದ ಅಂಗವಾಗಿ ವಿದ್ಯುತ್ ಕೇಬಲ್ಗಳನ್ನು  ಕೆಎಸ್ಇಬಿ ಎಂಜಿನಿಯರ್ಗಳ ಉಪಸ್ಥಿತಿಯಲ್ಲಿ  ಬದಲಿಯಾಗಿ ಸ್ಥಾಪಿಸಲಾಗಿತ್ತು. ರಸ್ತೆ  ನವೀಕರಣದ ಅಂಗವಾಗಿ ಸವರ್ೀಸ್ ರಸ್ತೆಯನ್ನು  ಇಂಟರ್ಲಾಕ್ ಮಾಡಿದೊಡನೆ ಕೆಎಸ್ಇಬಿ ಕೇಬಲ್ ಚಾಜರ್್ ಮಾಡಲಿರುವ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾಕಾರಿ ನಡೆಸಿದ ಸಭೆಯಲ್ಲಿ  ಕಾಂಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ.ರಮೇಶನ್ ಹಾಗೂ ಕೆಎಸ್ಇಬಿ ಮತ್ತು  ಟೆಲಿಕಾಮ್ ಅಧಿಕಾರಿಗಳು ಭಾಗವಹಿಸಿದ್ದರು.
   ವಿದ್ಯುತ್ ಪ್ರಸರಣದ ನಷ್ಟ  ಕಡಿಮೆ ಮಾಡಬೇಕು. ಗಾಳಿ ಮಳೆ ಮೊದಲಾದವುಗಳಿಂದ ಉಂಟಾಗುವ ವಿದ್ಯುತ್ ಹಾನಿಗಳನ್ನು  ಗರಿಷ್ಠ  ಪ್ರಮಾಣದಲ್ಲಿ  ಕಡಿಮೆ ಮಾಡಬೇಕು. ವಿದ್ಯುತ್ ಅನಾಹುತಗಳನ್ನು  ಕಡಿಮೆ ಮಾಡಬೇಕು ಇತ್ಯಾದಿಗಳಿಗಾಗಿ ಭೂಗತ ಕೇಬಲ್ ಯೋಜನೆಯನ್ನು  ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯನ್ನು  ಸಾಕಾರಗೊಳಿಸಲು ಹಾಗೂ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ  ಕ್ರಮಗಳನ್ನು  ಕೈಗೊಳ್ಳಲಾಗುತ್ತಿದೆ.
   ಕಾಸರಗೋಡಿನಲ್ಲೂ  ಯೋಜನೆ : ಕಾಸರಗೋಡು ನಗರ ಹಾಗೂ ಪರಿಸರದ ಪ್ರದೇಶಗಳಲ್ಲೂ ಭೂಗತ ವಿದ್ಯುತ್ ಕೇಬಲ್ಗಳನ್ನು  ಅಳವಡಿಸಲು ಯೋಜನೆ ತಯಾರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ  ನಗರಸಭಾ ಆಡಳಿತವು ಪ್ರಾಥಮಿಕ ಹಂತದ ಕ್ರಮಗಳನ್ನು  ಕೈಗೊಂಡಿದೆ. ಕೆಎಸ್ಇಬಿ ಮತ್ತು  ಟೆಲಿಕಾಮ್ ಇಲಾಖೆಯ ನಡುವೆ ಈ ಯೋಜನೆಯ ಕುರಿತು ಒಮ್ಮತ ಮೂಡಬೇಕಾಗಿದೆ. ಹಾಗಾದಲ್ಲಿ  ಕಾಸರಗೋಡು ನಗರ ಪ್ರದೇಶದಲ್ಲೂ  ವಿದ್ಯುತ್ ಕಂಬ ಮತ್ತು ಲೈನ್ಗಳು ಕಾಣಸಿಗದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries