ಕಾಸರಗೋಡಿನ ಚುಟುಕು ಸಾಹಿತ್ಯ ಪರಂಪರೆ ಶಕ್ತಿಯುತವಾದುದು-ವಿ.ಬಿ.ಕುಳಮರ್ವ
ಕಾಸರಗೋಡು: ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಚುಟುಕು ಸಾಹಿತ್ಯ ಪ್ರಕಾರ ವಿವಿಧ ಮಜಲುಗಳ ಮೂಲಕ ಹಾದುಬಂದಿದೆ. ಪ್ರಾಚೀನ ಹಿನ್ನೆಲೆಯ ಚುಟುಕು ಪ್ರಕಾರವನ್ನು ವಿಫುಲವಾಗಿ ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಯೋಜನೆಗಳು ಚುಟುಕು ಸಾಹಿತ್ಯ ಪರಿಷತ್ತಿನ ಮೂಲಕ ಜಾರಿಗೊಳ್ಳಬೇಕಿದ್ದು, ಕಾಸರಗೋಡಿನ ಚುಟುಕು ಸಾಹಿತ್ಯ ಪರಂಪರೆ ಶಕ್ತಿಯುತವಾಗಿ ಆರಂಭಕಾಲದಲ್ಲಿ ಗುರುತಿಸಿಕೊಂಡಿತ್ತು ಎಂದು ಹಿರಿಯ ಶಿಕ್ಷಣ ತಜ್ಞ, ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಚುಟುಕು ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ 2018 ಕಾರ್ಯಕ್ರಮದ ಅಂಗವಾಗಿ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತರ ಸಾಹಿತ್ಯ ಪ್ರಕಾರಗಳಿಗೆ ಮುಕುಟಪ್ರಾಯವಾಗಿ ಚುಟುಕು ಸಾಹಿತ್ಯ ವಿಭಿನ್ನವಾಗಿ ಬೆಳೆಯುತ್ತಿದೆ. ವಿಶಾಲ ದೃಷ್ಟಿಕೋನಗಳ ವರ್ತಮಾನದ ತುಮುಲಗಳು ಕಿರಿದಾಗಿ ಓದುಗರಿಗೆ ಮುಟ್ಟಿಸುವಲ್ಲಿ ಇಂದಿನ ಕಾಲಕ್ಕನುಗುನವಾಗಿ ಚುಟುಕು ಸಾಹಿತ್ಯಗಳು ಪ್ರಭಾವಶಾಲಿಯಾಗಿದೆ ಎಂದು ಅವರು ತಿಳಿಸಿದರು.
ವಿಚಾರಗೋಷ್ಠಿಯಲ್ಲಿ "ಚುಟುಕು ಸಾಹಿತ್ಯದ ಇತಿ-ಮಿತಿಗಳು" ಎಂಬ ವಿಷಯದಲ್ಲಿ ಉಪನ್ಯಾಸಗೈದ ಯುವ ಶಿಕ್ಷಕ, ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಮಾತನಾಡಿ, ಜನಜೀವನದ ನಾಡಿಮಿಡಿತಗಳಾಗಿರುವ ಸಾಹಿತ್ಯಗಳ ಪೈಕಿ ಚುಟುಕು ಪ್ರಕಾರ ಲಾಲಿತ್ಯ, ಗೇಯತೆಗಳ ಹಂಗಿಲ್ಲದೆ ಸಮಗ್ರ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಸಫಲವಾಗುತ್ತಿದೆ. ಮಿತಿಯೊಳಗಿನ ಗೆರೆಗಳಲ್ಲಿ ಕಚಗುಳಿಯಿಡುವ, ದೀರ್ಘ ಚಿಂತನೆಗೊಳಪಡಿಸುವ ಚುಟುಕು ಸಾಹಿತ್ಯ ಎಲ್ಲಾ ವರ್ಗಗಳನ್ನೂ ಏಕಕಾಲಕ್ಕೆ ಸಂತುಷ್ಟಗೊಳಿಸುವ ಶಕ್ತಿಹೊಂದಿದೆ ಎಂದು ತಿಳಿಸಿದರು.
ಬಳಿಕ "ಕಾಸರಗೋಡಿನಲ್ಲಿ ಚುಟುಕು ಸಾಹಿತ್ಯ" ಎಂಬ ವಿಷಯದಲ್ಲಿ ಪತ್ರಕರ್ತ ಪುರುಷೋತ್ತಮ ಭಟ್ ಕೆ ಉಪನ್ಯಾಸ ನೀಡಿದರು. ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಮೈಸೂರಿನ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಉದ್ಘಾಟಿಸಿ ಮಾತನಾಡಿ, ಚುಟುಕು ಸಾಹಿತ್ಯ ಪ್ರಕಾರ ವಿಸ್ಕೃತವಾಗಿ ಬೆಳೆಯುವ ನಿಟ್ಟಿನಲ್ಲಿ ನಿರಂತರ ಚಟುವಟಿಕೆಗಳು ಆಗಬೇಕಿದೆ. ಗಡಿನಾಡಿನ ಕನ್ನಡ ಹೋರಾಟ, ಜನಸಹಭಾಗಿತ್ವಕ್ಕೆ ಸಂವೇದನಾ ಶಕ್ತಿಯಾಗಿ ಚುಟುಕು ಪ್ರಕಾರ ಬೆನ್ನೆಲುಬಾಗಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲ್ಲೂಕು ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ 2018-19ರ ಸಾಲಿನ ಕಾಸರಗೋಡು ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಯೋಜನೆಗಳಿಗೆ ಈ ಸಂದರ್ಭ ಡಾ.ಎಂ.ಜಿ.ಆರ್ ಅರಸ್ ಲಾಂಛನ ಬಿಡುಗಡೆಗೊಳಿಸಿ ಅದ್ದೂರಿ ಚಾಲನೆ ನೀಡಿದರು. ಮೈಸೂರಿನ ಮೇಘನಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಲತಾಕುಮಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.. ಕಾರ್ಯಕ್ರಮದಲ್ಲಿ ಗೋವಾ ಕನ್ನಡ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕದ ಅಧ್ಯಕ್ಷ ವಿ ಬಿ ಕುಳಮರ್ವ, ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಅಧ್ಯಕ್ಷ ಶಿವರಾಮ ಕಾಸರಗೋಡು, ಚುಟುಕು ಕವಿ, ಪತ್ರಕರ್ತ ವಿರಾಜ್ ಅಡೂರು, ವಿಕೆಎಂ ನಾಟಕ ಸಂಸ್ಥೆಯ ಅಧ್ಯಕ್ಷ ಕೆ ಎಸ್ ವೆಂಕಟೇಶ್, ಪ್ರಧಾನ ಕಾರ್ಯದಶರ್ಿ ಸಿ ಎಂ ತಿಮ್ಮಯ್ಯ, ಕೆಬಿಟಿ ಬಸ್ ಮಾಲಕ ನಿರಂಜನ ಕೊರಕ್ಕೋಡು, ಅಖಿಲ ಕನರ್ಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಸಪ್ತಗಿರಿ ಮಹಿಳಾ ಭಜನಾ ಸಂಘದ ಸದಸ್ಯರು ಪ್ರಾಥರ್ಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ, ಪತ್ರಕರ್ತ, ಚುಟುಕು ಸಾಹಿತಿ ವಿರಾಜ್ ಅಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.