HEALTH TIPS

No title

               ಪೈನಗರ್ ವಿಷನ್ ಸಮಾರೋಪ ಮತ್ತು ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ
    ಉಪ್ಪಳ:  ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಮಾಹಿತಿ ತಂತ್ರಜ್ಞಾನ ಕ್ಲಬ್ನ ಅಂತಜರ್ಾಲ ಮತ್ತು ಮುದ್ರಿತ ಸುದ್ದಿ ಸಾಪ್ತಾಹಿಕವಾದ `ಪೈನಗರ್ ವಿಷನ್' ಸಮಾರೋಪ ಸಮಾರಂಭ ಹಾಗೂ ವಿದ್ಯಾಥರ್ಿ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ ಶನಿವಾರ ಜರಗಿತು.
   ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ ಉದ್ಘಾಟಿಸಿದರು. ಕನ್ನಡ ಶಾಲೆಗಳಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಇಂತಹ ಪ್ರಯತ್ನ ಅಭಿನಂದನೀಯ. ಆಂಗ್ಲಮಯವಾದ ಅಂತಜರ್ಾಲ ಯುಗದಲ್ಲಿ ಕನ್ನಡವನ್ನು ಆಂತಜರ್ಾಲದಲ್ಲೂ ಬೆಳೆಸುವ ಪ್ರಯತ್ನ ಶ್ಲಾಘನೀಯ. ವಿದ್ಯಾಥರ್ಿಗಳಲ್ಲಿ ಮಾಧ್ಯಮ ಲೋಕದ ಬಾಲಪಾಠವನ್ನು ಮಾಡುವ ಪೈನಗರ್ ವಿಷನ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
   ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿಯವರು ಮ್ಯಾಗಝಿನ್ ಬಿಡುಗಡೆ ಮಾಡಿದರು. ಪ್ರಾಂಶುಪಾಲೆ ವಿಶಾಲಾಕ್ಷಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು. ಹಯರ್ ಸೆಕೆಂಡರಿ ವಿಭಾಗದ ವಿಶ್ವನಾಥ ಕುಂಬಳೆ, ನೌಕರ ಸಂಘದ ಕಾರ್ಯದಶರ್ಿ  ಕೃಷ್ಣಮೂತರ್ಿ ಎಂ ಎಸ್, ಆಚರಣಾ ಸಮಿತಿ ಸಂಚಾಲಕ ಶಶಿಕಲ ಕೆ, ಹಿರಿಯ ಪ್ರಾಥಮಿಕ ವಿಭಾಗದ ಎಸ್ ಆರ್ ಜಿ ಸಂಚಾಲಕ ಪ್ರವೀಣ್ ಕನಿಯಾಲ, ಹಿರಿಯ ಶಿಕ್ಷಕ ಬಾಲಕೃಷ್ಣ ಕೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಕಾಯರ್ಕಟ್ಟೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ  ರಮೇಶ್ ಪೈವಳಿಕೆ ಶುಭಾಶಂಸನೆಗೈದರು.
   ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳಾದ ರಜತ್ ಕುಮಾರ್, ಆಶಯ ಕೆ ಎಂ, ವಿಜೇಶ್ ವೈ, ಹನ್ನತ್ ಬೀಬಿ, ಮಹೇಶ್, ವಿದ್ಯಾಶ್ರೀ ಜೆ, ಭವ್ಯಶ್ರೀ ವೈ, ಮಹೇಶ್ ಕಾತರ್ಿಕ್ ಅವರನ್ನು ಅಭಿನಂದಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ತಸ್ಮೀರ ಎ.ಕೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೈಸ್ಕೂಲ್ ವಿಭಾಗದಲ್ಲಿ ವಿದ್ಯಾಥರ್ಿ ಮಾಧ್ಯಮ ಪ್ರಶಸ್ತಿಯಲ್ಲಿ ಧ್ವಾನಿಷ್ ಪ್ರಥಮ, ಸಾತ್ವಿಕ್ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಹಷರ್ಿತ ಪ್ರಥಮ, ಫಾತಿಮ ಹನ ದ್ವಿತೀಯ ಸ್ಥಾನಗಳಿಸಿದರು. ಈ ವರ್ಷದ ಉತ್ತಮ ತರಗತಿಯಾಗಿ 8=ಸಿ ಮತ್ತು 6=ಸಿ ಯನ್ನು ಆಯ್ಕೆಮಾಡಲಾಯಿತು. ಉತ್ತಮ ತರಗತಿ ನಾಯಕನಾಗಿ ಮೊಹಮ್ಮದ್ ಮುಬಾರಕ್ ಮತ್ತು ಸಾತ್ವಿಕ್ ಎನ್ ಆಯ್ಕೆಯಾದರು. ಉತ್ತಮ ವಿದ್ಯಾಥಿಗಳಾಗಿ ಪ್ರಜೇಶ್, ಫಾತಿಮ ಹನ, ಕೌಶಿಕ್ ಬಿ, ಶಮೀಮ ನಸ್ರೀನ್ ಪ್ರಶಸ್ತಿ ನೀಡಲಾಯಿತು. ಉತ್ತಮ ಸ್ವಯಂಸೇವಕರಾಗಿ ಚರಣ್ ರಾಜ್ ಎಸ್, ಉತ್ತಮ ನಿರೂಪಕ ಕಾತರ್ಿಕ್ ಕೆ, ಉತ್ತಮ ಶಾಲಾ ರೇಡಿಯೋ ನಿರೂಪಕಿ ಶ್ರಜ್ಞಾ ಆರ್, ಉತ್ತಮ ಛಾಯಾಗ್ರಾಹಕನಾಗಿ ಅಜಯ್ ಎ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಾಲೆಯಲ್ಲಿ ಕನ್ನಡವನ್ನೇ ತನ್ನ ವ್ಯವಹಾರ ಭಾಷೆಯನ್ನಾಗಿ ಬಳಸಿ ಕನ್ನಡ ನಾಡು ನುಡಿ ಸಂಸ್ಕೃತಿಗೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ 8=ಸಿ ತರಗತಿಯ ಚೇತನ್ ರಾಜ್ ಗೆ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಸಾಧನೆ ಮಾಡಿದ ಧ್ವಾನಿಷ್ ಮತ್ತು ಕಾತರ್ಿಕ್ ಗೆ ವಿಶೇಷ ಬಹುಮಾನ ವಿತರಿಸಲಾಯಿತು. ತರಗತಿ ಪ್ರತಿನಿಧಿ ಚೇತನ್ ರಾಜ್ ಯು ಸ್ವಾಗತಿಸಿ, ಅಝ್ಮಿ ವಂದಿಸಿದರು. ಶ್ರಜ್ಞಾ ಆರ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತ ಸಿ ಎಚ್ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.
 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries