HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸ್ನೇಹರಂಗದ ವಾಷರ್ಿಕ ಚಟುವಟಿಕೆಗಳ ಸಮಾರೋಪ
                    ಕನ್ನಡ ಧ್ವನಿ ವಿಶೇಷಾಂಕ ಬಿಡುಗಡೆ
    ಬದಿಯಡ್ಕ: ವಿದ್ಯಾನಗರದ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಾಂಸ್ಕೃತಿಕ ಸಾಹಿತಿಕ ಚಟುವಟಿಕೆಗಳನ್ನು ಆಯೋಜಿಸುವ ವಿದ್ಯಾಥರ್ಿ ಬಳಗ ಸ್ನೇಹರಂಗದ ವಾಷರ್ಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆಯಿತು.
   ಕಾಂತಗ ವಾದಕ ಚೋಮ ಕಾಟುಕುಕ್ಕೆ ಪುರಾತನ ಜಾನಪದ ಕಲಾ ಪ್ರಕಾರವಾದ ಕಾಂತಗವನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜನಪದ ವಾದ್ಯವಾದ ಕಾಂತಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೊಗೇರ ಸಮುದಾಯದ ಮಂದಿ ಬೇಟೆಗೆ ಹೋದ ಸಂದರ್ಭ ಮರಗಳ ಘರ್ಷಣೆಯ ಶಬ್ದ ಆಲಿಸಿ, ಅದರ ಶಬ್ದ ಗ್ರಹಿಕೆಯ ಮೂಲಕ ಹೊಸ ವಾದ್ಯ ಉಪಕರಣದ ಸೃಷ್ಠಿಗೆ ನಾಂದಿ ಹಾಡಿದರು. ತಮ್ಮ ಎಳೆ ವಯಸ್ಸಿನಲ್ಲಿ ಕಾಂತಗ ಕಲೆಯನ್ನು ತಂದೆಯವರಿಂದ ಕಲಿತು ಮುಂದುವರಿಸಿದೆ ಎಂದು ಅವರು ತಿಳಿಸಿದರು.
   ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಅಭಯ್ ಕುಮಾರ್ ದಲಿತರು ಮತ್ತು ಅಭಿವ್ಯಕ್ತಿ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ಯುರೋಪಿನ ಹಲವು ದೇಶಗಳಲ್ಲಿ ನೆಲ ಮೂಲ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿ ಇತಿಹಾಸದ ಬಗ್ಗೆ ಹೊಸ ಶೋಧೆಯನ್ನು ನಡೆಸುವ ಕಾರ್ಯ ಆರಂಭಗೊಂಡಿದೆ. ನೆಲ ಮೂಲದ ಸಂಸ್ಕೃತಿ, ಆಚರಣೆ, ಸಮುದಾಯಗಳಿಂದ ಆ ಭಾಗದ ವಿಶೇಷತೆಗಳ ಬಗ್ಗೆ ಮಾಹಿತಿ ಕ್ರೋಢಿಕರಿಸಿ ಪೂವರ್ೈತಿಹಾಸವನ್ನು ಅರಿಯುವ ಕ್ರಮ ಸೂಕ್ತವಾಗಿದೆ. ದಲಿತರು ಶ್ರಮ ಸಂಸ್ಕೃತಿಯ ಮೂಲಕ ಜಾನಪದ ಇತಿಹಾಸವನ್ನು ಕಟ್ಟಿ ಬೆಳೆಸಿದವರು, ಇವರ ಮೂಲ ವೃತ್ತಿಯೇ ದುಡಿಮೆ, ಅವರ ಕಲಾ ಸಾಂಸ್ಕೃತಿಕ ಅಭಿವ್ಯಕ್ತಿಯೇ ಅವರ ಇತಿಹಾಸದ ವ್ಯಾಪ್ತಿಯನ್ನು ತಿಳಿಸುತ್ತದೆ ಎಂದು ಡಾ. ಅಭಯ್ ಕುಮಾರ್ ಅಭಿಪ್ರಾಯಪಟ್ಟರು. ಶಿವರಾಮ ಕಾರಂತರ ಚೋಮನ ದುಡಿಯಲ್ಲೂ ಶ್ರಮ ಪರಂಪರೆ ಮತ್ತು ಅಭಿವ್ಯಕ್ತಿಯನ್ನು ಪ್ರಚುರಪಡಿಸಲಾಗಿದೆ. ದುಡಿಯ ಮೂಲಕ ಸುಖ ದುಃಖಗಳನ್ನು ತಿಳಿಸುವ ಕಾರ್ಯವಾಗಿದೆ ಎಂದರು. ದಲಿತರು ಕಲೆ, ಪಾಡ್ದನ, ನೃತ್ಯಗಳ ಮೂಲಕ ತಮ್ಮ ನೋವು ನಲಿವುಗಳನ್ನು ಹೊರತಂದರು, ಕೃಷಿ ಸಂಸ್ಕೃತಿಗೆ ಸಾಮೀಪ್ಯ ಹೊಂದಿದ್ದ ದಲಿತರು ಕರಂಗೋಲು, ಚೆನ್ನು, ಪಿಲಿಪಂಜಿ, ಆಟಿಕಳಂಜ ಮೊದಲಾದ ಕಲಾಪ್ರಕಾರಗಳನ್ನು ಪಸರಿ, ಕೃಷಿ ಸಂಸ್ಕೃತಿಯ ಜ್ಞಾನವನ್ನು ಮುಂದಿನ ತಲೆಮಾರಿಗೆ ವಗರ್ಾಯಿಸುವ ಮಹತ್ಕಾರ್ಯವನ್ನು ನಿರ್ವಹಿಸಿದರು ಎಂದರು. ಪಾಡ್ದನಗಳಲ್ಲಿ ಶೋಷಣೆ, ಅಸಮಾನತೆಯ ವಿರುದ್ಧ ಜಾಗೃತಿ ಧ್ವನಿಯು ಅಭಿವ್ಯಕ್ತವಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ಕಾಂತಗ ವಾದಕ ಚೋಮ ಕಾಟುಕುಕ್ಕೆ ಅವರಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ ಕೃಷ್ಣನ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಸ್ನಾತಕೋತ್ತರ ಮತ್ತು ಪದವಿ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತಾ.ಎಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಡಾ.ಆಶಾಲತಾ ಶುಭಾಶಂಸನೆಗೈದರು. ಸ್ನೇಹರಂಗದ ವಿಶೇಷಾಂಕದ ಸಂಪಾದಕ ಸುಜಿತ್ ಕುಮಾರ್ ಚೇವಾರ್ ವಿಶೇಷಾಂಕದ ಬಗ್ಗೆ ಮಾತನಾಡಿದರು. ಕಾರ್ಯದಶರ್ಿ ಸುಶ್ಮಿತಾ ಶೆಟ್ಟಿ ವಾಷರ್ಿಕ ವರದಿ ವಾಚನ ನಡೆಸಿದರು. ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ ಬೆಳಿಂಜ ಸ್ವಾಗತಿಸಿ, ಚೈತ್ರಾ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries