ಮಾ.27 : ಜಿಲ್ಲಾ ಚುಟುಕು ಸಾಹಿತ್ಯೋತ್ಸವ
ಕಾಸರಗೋಡು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ.27ರಂದು ಅಪರಾಹ್ನ 2ರಿಂದ ಚುಟುಕು ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತು 2018-19ರ ಸಾಲಿನಲ್ಲಿ ನಡೆಸುವ ವಿವಿಧ ಚುಟುಕು ಸಾಹಿತ್ಯ ಕಾರ್ಯಕ್ರಮಗಳಿಗೆ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮೈಸೂರಿನ ಡಾ.ಎಂ.ಜಿ.ಆರ್.ಅರಸ್ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಸಂಘಟಕ ಶಿವರಾಮ ಕಾಸರಗೋಡು, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪತ್ರಕರ್ತ ವಿರಾಜ್ ಅಡೂರು ಭಾಗವಹಿಸಲಿದ್ದಾರೆ. ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ಚುಟುಕು ಸಾಹಿತ್ಯದ ಇತಿಮಿತಿಗಳು ಎಂಬ ವಿಚಾರದಲ್ಲಿ ಶಿಕ್ಷಕ ಹರೀಶ್ ಸುಲಯ ಒಡ್ಡಂಬೆಟ್ಟು ಹಾಗೂ ಕಾಸರಗೋಡಿನ ಚುಟುಕು ಸಾಹಿತ್ಯದ ಕುರಿತಾಗಿ ಪತ್ರಕರ್ತ ಕೆ.ಪುರುಷೋತ್ತಮ ಭಟ್ ಉಪನ್ಯಾಸ ನೀಡಲಿದ್ದಾರೆ. ವಿ.ಬಿ.ಕುಳಮರ್ವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ನಡೆಯುವ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಾಧಾಕೃಷ್ಣ ಕೆ.ಉಳಿಯತ್ತಡ್ಕ ವಹಿಸಲಿದ್ದಾರೆ. ಕವಿಗಳಾದ ಕೆ.ನರಸಿಂಹ ಭಟ್ ಏತಡ್ಕ, ಜಯ ಮಣಿಯಂಪಾರೆ, ವಿಜಯರಾಜ ಪುಣಿಚಿತ್ತಾಯ, ಪ್ರಭಾವತಿ ಕೆದಿಲಾಯ ಪುಂಡೂರು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಆನಂದ ರೈ ಅಡ್ಕಸ್ಥಳ, ಶ್ಯಾಮಲಾ ರವಿರಾಜ್ ಕುಂಬಳೆ, ಶಾರದಾ ಎಸ್.ಭಟ್ ಕಾಡಮನೆ, ರಂಗ ಶರ್ಮ ಉಪ್ಪಂಗಳ, ವಿರಾಜ್ ಅಡೂರು, ಜ್ಯೋತ್ಸ್ನಾ ಎಸ್. ಕಡಂದೇಲು ಭಾಗವಹಿಸಲಿದ್ದಾರೆ. ನಂತರ ಕಾಸರಗೋಡು ಜಿಲ್ಲೆಯ ವಿವಿಧ ಭಾಷೆಯ ಕವಿಗಳಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ