HEALTH TIPS

No title

                     ಅರಣ್ಯ ರೋಧನ
        ವನಪಾಲಕರ, ಪೊಲೀಸರ ನಿರ್ಲಕ್ಷ್ಯದಿಂದ ವನ ನಿನರ್ಾಮದತ್ತ- ಆದೂರು ಚೆಕ್ಪೋಸ್ಟ್ ಮೂಲಕ ಅನಧಿಕೃತ ಮರ ಸಾಗಾಟ ವ್ಯಾಪಕ
    ಮುಳ್ಳೇರಿಯ: ಅನಧಿಕೃತ ಸಾಗಾಟ ತಡೆಗೆ ಕ್ರಮಕೈಗೊಳ್ಳಬೇಕಾದ ಪೊಲೀಸ್ ಹಾಗೂ ಅರಣ್ಯಾಧಿಕಾರಿಗಳ ನಿರುತ್ಸಾಹ ನೀತಿ ಮರ ಕಳ್ಳ ಸಾಗಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ. ಇದರ ಪರಿಣಾಮ ಆದೂರು ಚೆಕ್ಪೋಸ್ಟ್ ಮೂಲಕ ಅನಧಿಕೃತವಾಗಿ ಮರ ಸಾಗಾಟ ವ್ಯಾಪಕಗೊಂಡಿದೆ. ಸರಕಾರದ ಅಧೀನತೆಯಲ್ಲಿರುವ ಅರಣ್ಯ ಹಾಗೂ ಖಾಸಗಿ ವ್ಯಕ್ತಿಗಳ ಹಿತ್ತಿಲಿನಿಂದ ಬೆಲೆ ಬಾಳುವ ಬೃಹತ್ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ರಾತ್ರಿ ಹೊತ್ತಿನಲ್ಲಿ ಮಾತ್ರ ಕಂಡು ಬರುತ್ತಿದ್ದ ಮರ ಸಾಗಾಟ ಇದೀಗ ಹಗಲು ವೇಳೆಯಲ್ಲೇ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಉಭಯ ಭಾಗದವರು ನಿರ್ಲಕ್ಷ್ಯ ನೀತಿ ವಹಿಸುತ್ತಿದ್ದಾರೆಂದು  ನಾಗರಿಕರು ಆರೋಪಿಸುತ್ತಿದ್ದಾರೆ. ಕೇರಳ ಹಾಗೂ ಕನರ್ಾಟಕದ ಅರಣ್ಯ ಪ್ರದೇಶದಿಂದ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಪರಪ್ಪೆ, ದೇಲಂಪಾಡಿ ಅರಣ್ಯದಿಂದ ಹಾಗೂ ಖಾಸಗಿ ವ್ಯಕ್ತಿಗಳ ಹಿತ್ತಿಲಿನಿಂದ ಮರ ಸಾಗಾಟ ನಡೆಯುತ್ತಿದೆ. ಮರಳು, ಕೆಂಪುಮಣ್ಣು, ಜಲ್ಲಿ ಮಾಫಿಯಗಳಂತೆಯೇ ಮರ ಮಾಫಿಯಾಗಳು ವ್ಯಾಪಕವಾಗಿ ಕಾಯರ್ಾಚರಿಸುತ್ತಿವೆ ಎಂದು ದೂರಲಾಗಿದೆ.
   ಈ ಹಿಂದೆ ಮರ ಕಡಿದು ಸಾಗಿಸುತ್ತಿದ್ದ ತಂಡವೊಂದು ಇದೀಗ ಇಬ್ಬಾಗವಾಗಿದ್ದು, ಇದರಲ್ಲಿ ಒಂದು ತಂಡ ಮರ ಸಾಗಾಟದಲ್ಲಿ ಸಕ್ರಿಯವಾಗಿದೆ. ಇದರ ವಿರುದ್ಧ ಇನ್ನೊಂದು ತಂಡ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡುತ್ತಿದೆ ಎನ್ನಲಾಗುತ್ತಿದೆ.
  ಅರಣ್ಯ ಇಲಾಖೆಯು ವನಪಾಲಕರನ್ನು ಹಾಗೂ ಅವರಿಗೆ ಬೇಕಾದ ವಾಹನ ಸೌಕರ್ಯವನ್ನು ಒದಗಿಸಿದೆ. ಆದರೆ ವನ ಪಾಲಕರ ನಿರ್ಲಕ್ಷ್ಯ ನೀತಿಯಿಂದ ವನ ನಿನರ್ಾಮದತ್ತ ಸಾಗುತ್ತಿದೆ. ಇದೇ ವೇಳೆ ಮರ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದರೂ ಅದನ್ನು ತಡೆಯುವುದು ಅರಣ್ಯಾಧಿಕಾರಿಗಳಾಗಿದ್ದಾರೆಂದು ತಿಳಿಸಿ ಪೊಲೀಸರು ಕೈತೊಳೆದುಕೊಳ್ಳುತ್ತಿದ್ದಾರೆ.
   ಇದೇ ವೇಳೆ ಮರ ಸಾಗಾಟದ ಬಗ್ಗೆ ಅರಣ್ಯಾಧಿಕಾರಿಗಳಲ್ಲಿ ಪ್ರಶ್ನಿಸಿದರೆ ಸರಕಾರಿ ಸ್ಥಳದಿಂದ ಅದನ್ನು ಕಡಿದಿಲ್ಲ. ಆದರೆ ಎಲ್ಲಿಂದ ಕಡಿಯಲಾಗಿದೆ, ಎಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಬಗ್ಗೆಯೂ ಗೊತ್ತಿಲ್ಲ ಎಂದು ತಿಳಿಸಿ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ತೋರ್ಪಡಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries