HEALTH TIPS

No title

               ಶಾಂತಿ ಸಮಾಧಾನವೇ ಮನುಕುಲದ ಮೊದಲ ಆದ್ಯತೆ : ಶಾಸಕ ನೆಲ್ಲಿಕುನ್ನು
   ಬದಿಯಡ್ಕ: . ಸರ್ವಜನರು ಶಾಂತಿ ಸಮಾಧಾನದಿಂದ ಇನ್ನೊಬ್ಬರನ್ನು ನೋವಿಸದೆ ಜೀವಿಸಿದರೆ ಮಾತ್ರವೇ ಪರಮಾತ್ಮ ಶಂಕರನ ಸರ್ವರಕ್ಷೆಯೂ ಪ್ರಾಪ್ತಿಯಾಗುವುದು. ಎಲ್ಲಾ ಮತಸ್ಥರು ಸಾಗುವ ದಾರಿ ಬೇರೆ ಬೇರೆಯಾದರೂ ಸೇರುವ ಸ್ಥಳವೊಂದೇ. ಅದುವೇ ಪರಮಾತ್ಮ. ಈಶ್ವರ, ಅಲ್ಲಾಹು, ಯೇಸು ಶ್ರೇಷ್ಠರ ಇಹಲೋಕವಾಗಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ಕರೆನೀಡಿದರು.
      ಬ್ರಹ್ಮ ಕುಮಾರೀಯ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ತ್ರೀಮೂತರ್ಿ ಶಿವ ಜಯಂತಿ ಮಹೋತ್ಸವ ನೀಚರ್ಾಲು ಸಮೀಪದ ಮಲ್ಲಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
     ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಗೈದು ಮಾತನಾಡಿದ ಕುಂಬ್ಡಾಜೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಆನಂದ ಕೆ.ಮವ್ವಾರು ಮಾತನಾಡಿ, ಈಶ್ವರೀಯ ವಿದ್ಯಾಲಯದ ಸಹೋದರಿಯರು ಸಮಾಜಕ್ಕೆ ಸಾರುವ ಶಾಂತಿ ಸಂದೇಶವು ಪ್ರಸ್ತುತ ಜಗತ್ತಿಗೆ ಮಹತ್ವ ಪೂರ್ಣವಾದುದು. ಭೌತಿಕತೆಗಿಂತ ಆತ್ಮದರ್ಶನಗೈಯುವ ಮಹಾಭಾಗ್ಯವು ಸರ್ವರಿಗೂ ಈ ಕಾರ್ಯಕ್ರಮದ ಮೂಲಕ ಪ್ರಾಪ್ತ ವಾಗಿದೆಯೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಸಾಂಸ್ಕೃತಿಕ ರಂಗದಲ್ಲಿರುವ ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ ರೋಗಪೀಡಿತರಾಗಿರುವ ಹಲವಾರು ಮಂದಿಗೆ ಈ ಶಾಂತಿ ಸಂದೇಶ ಹಾಗೂ ನಿತ್ಯಯೋಗ, ಧ್ಯಾನದಿಂದ ಈಶ್ವರೀಯ ಸತ್ಸಂಗ ಆರೋಗ್ಯ ಭಾಗ್ಯವನ್ನು ಕರುಣಿಸಿರುವುದು ನಿಜಕ್ಕೂ ಪರಮಾತ್ಮನ ಶ್ರೀ ರಕ್ಷೆಯಾಗಿದೆ ಎಂದು ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬ್ರಹ್ಮಕುಮಾರಿಯ ವಿಜಯಲಕ್ಷ್ಮಿ ಮಾತನಾಡುತ್ತಾ ಪ್ರತಿಯೊಂದು ಜೀವ ಕುಲವು ಪರಮಾತ್ಮನ ಪುಷ್ಪಗಳಿದ್ದಂತೆ ಹಾಗೂ ಮನುಷ್ಯನು ಅತ್ಯಂತ ಶ್ರೇಷ್ಠತೆಯ ಪುಷ್ಪಗಳಿದ್ದಂತೆ ಎಂದೂ ತಿಳಿಸುತ್ತಾ ನೀಚರ್ಾಲು ಮಲ್ಲಡ್ಕದ ಈಶ್ವರೀಯ ವಿದ್ಯಾಲಯದ  ಈ ಕೇಂದ್ರವು ಹಲವಾರು ಮಂದಿಗೆ ಸಮಾಧಾನದ ಶ್ರೇಷ್ಠತೆಯ ಕೇಂದ್ರವಾಗಿದೆಯೆಂದು ಹಿತವಚನದಲ್ಲಿ ತಿಳಿಸಿದರು. 
    ಸಮಾರಂಭದಲ್ಲಿ ಈಶ್ವರೀಯ ವಿದ್ಯಾಲಯದ ಸಮೀಪ ತಲ್ಪನಾಜೆ ನೂತನ ರಸ್ತೆಗೆ ವ್ಯವಸ್ಥಿತವಾಗಿ ಕಾಂಕ್ರೀಟ್, ಡಾಮರೀಕರಣ ನಡೆದಿರುವುದನ್ನು ಶಾಸಕರು ಶ್ಲಾಘಿಸಿದರು. ರಸ್ತೆಯ ಕಾಂಕ್ರೀಟ್ ಡಾಮರೀಕರಣದ ಗುತ್ತಿಗೆದಾರ ರಫೀಕ್ ಕೋಳಾರಿಯವರು ಉತ್ತಮ ರೀತಿಯಲ್ಲಿ ನಿಮರ್ಾಣ ಮಾಡಿರುವುದನ್ನು ಶಾಸಕರು ಶ್ಲಾಘಿಸಿ ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಂ.ಎಚ್.ಜನಾರ್ಧನ ಸ್ವಾಗತಿಸಿ, ಬಿ.ಕೆ.ವಿನೋದ ವಂದಿಸಿದರು. ಧ್ಯಾನ ಕೇಂದ್ರದಲ್ಲಿ ಬ್ರಹ್ಮ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
    ಸಮಾರಂಭದ ಅಂಗವಾಗಿ ಬ್ರಹ್ಮಕುಮಾರಿಯ ಮಲ್ಲಡ್ಕ ಧ್ಯಾನ ಕೇಂದ್ರದಲ್ಲಿ ತ್ರಿಮೂತರ್ಿ ಶಿವ ಜಯಂತಿ ಮಹೋತ್ಸವ ಶಾಂತಿಯಾತ್ರೆಯು ವೈಭವಯುತವಾಗಿ ಜರಗಿತು. ಶಾಂತಿ ಯಾತ್ರೆಯು ನೀಚರ್ಾಲು ಪೇಟೆಯ ಮೂಲಕ ಸಾಗಿತು. ಶಾಂತಿ ಯಾತ್ರೆಯ ನೇತೃತ್ವದಲ್ಲಿ ಬಿ.ಕೆ.ವಿಜಯಲಕ್ಷ್ಮಿ, ಬಿ.ಕೆ.ರೂಪ, ಬಿ.ಕೆ.ಮಂಗಳ, ಸುಬ್ರಹ್ಮಣ್ಯನ್, ವಸಂತಿ, ಶ್ಯಾಮಲ, ಸುಶೀಲ, ಜಯಶ್ರೀ, ಕಿಶೋರ್ ಕುಮಾರ್, ಗೌರಿಶಂಕರ್, ಕೀತರ್ಿ ಪ್ರಭಾ, ಕವಿತಾ ಕುಮಾರಿ, ರವಿಚಂದ್ರ ಮೊದಲಾದವರು ವಹಿಸಿದರು. ಶಿವಜಯಂತಿ ಮಹೋತ್ಸವದ ಧ್ವಜಾರೋಹಣವನ್ನು ಬಿ.ಕೆ.ಜಯಲಕ್ಷ್ಮೀ ನೆರವೇರಿಸಿದರು.
 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries