ಸಿಪಿಸಿಆರ್ಐಯಲ್ಲಿ ಕೃಷಿಕರಿಗೆ ಶಿಬಿರ
ಕಾಸರಗೋಡು: ಹೊಸ ತಲೆಮಾರಿನ ಯುವ ಸಮೂಹ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯತ್ತ ಮುಖಮಾಡಬೇಕು. ಆಧುನಿಕ ತಂತ್ರಜ್ಞಾನಗಳೊಂದಿಗೆ ಕೃಷಿ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಮನಮಾಡಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಕಾಸರಗೋಡು ಸಿಪಿಸಿಆರ್ಐಯಲ್ಲಿ ನಡೆದ ಕೃಷಿ ತರಬೇತಿ ತರತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕರ ಉತ್ಪನ್ನಕ್ಕೆ ನ್ಯಾಯಬೆಲೆ ಲಭ್ಯಗೊಳಿಸುವ ನಿಟ್ಟಿನಲ್ಲಿ ಸರಕಾರದ ಜೊತೆಗೆ ಎಲ್ಲರೂ ಪ್ರಯತ್ನಿಸಬೇಕು. ಬೆಲೆಗಳ ನಿಖರತೆ, ಬೆಲೆ ನಿರ್ಣಯಗಳಿಗೆ ರೈತರು ನಿರ್ಣಯ ಕೈಗೊಳ್ಳಲು ಸಾಧ್ಯವಾದಾಗ ಕೃಷಿ ಆಸಕ್ತಿದಾಯಕವಾಗಿ ಮೂಡಿಬರುವುದೆಂದು ಅವರು ತಿಳಿಸಿದರು.
ಇದೇ ವೇಳೆ ನವದೆಹಲಿಯಲ್ಲಿ ಜರಗಿದ ಕೃಷಿ ಉನ್ನತಿ ಮೇಳವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸುವ ಕಾರ್ಯಕ್ರಮವನ್ನು ಸಿಪಿಸಿಆರ್ಐಯಲ್ಲಿ ವೆಬ್ಕಾಸ್ಟ್ ಮಾಡಲಾಯಿತು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್ಐ ನಿದರ್ೇಶಕ ಡಾ.ಪಿ.ಚೌಡಪ್ಪ ಸ್ವಾಗತಿಸಿದರು. ಡಾ.ಕೆ.ಮುರಳೀಧರನ್ ವಂದಿಸಿದರು.