HEALTH TIPS

No title

                ಕನ್ನಡ ಮಾಧ್ಯಮಕ್ಕೆ  ಮಲೆಯಾಳಂ ಶಿಕ್ಷಕರ ನೇಮಕಾತಿ : ಪಿಎಸ್ಸಿ ರ್ಯಾಂಕ್ ಪಟ್ಟಿ ರದ್ದುಗೊಳಿಸಲು ಹಷರ್ಾದ್ ವಕರ್ಾಡಿ ಆಗ್ರಹ
     ಮಂಜೇಶ್ವರ: ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳಲ್ಲಿ  ಕನ್ನಡ ಬಲ್ಲ ಶಿಕ್ಷಕರ ಹುದ್ದೆಗಳಿಗೆ ಕೇರಳ ಲೋಕಸೇವಾ ಆಯೋಗ(ಪಿ.ಎಸ್.ಸಿ) ನಡೆಸಿದ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯಥರ್ಿಗಳ ರ್ಯಾಂಕ್  ಪಟ್ಟಿ ಪ್ರಕಟವಾಗಿದ್ದು, ಪೂರ್ಣ ಮಲೆಯಾಳ ಬಲ್ಲವರೇ ಪಟ್ಟಿಯಲ್ಲಿ ತುಂಬಿದ್ದಾರೆ. ಹೊರ ಜಿಲ್ಲೆಗಳ ಅಭ್ಯಥರ್ಿಗಳೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು,ಇವರಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ  ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಆರೋಪಿಸಿದ್ದಾರೆ.
    ಕನ್ನಡ ಮೀಸಲು ಹುದ್ದೆಗಳಿಗೆ ಅನ್ಯ ಭಾಗದವರು ಯಾವ ಮಾಯಾಜಾಲದಲ್ಲಿ  ಪ್ರವೇಶಿಸಿದ್ದಾರೆಂದು ತಿಳಿಯದೆ ಕನ್ನಡ ಪ್ರೇಮಿಗಳು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಕನ್ನಡ ಓದು,ಬರಹ ಹಾಗೂ ಮಾತನಾಡಲು ಸಂದರ್ಶನದಲ್ಲಿ ಇಪ್ಪತ್ತು  ಅಂಕಗಳನ್ನು ನೀಡಲಾಗಿದ್ದು, ಈ ಸಂದರ್ಶನದಲ್ಲಿ ಕನಿಷ್ಠ ಅಂಕ ಸಂಪಾದಿಸಿದರೂ, ಈಗಿನ ನಿಯಮದಂತೆ ನೇಮಕಾತಿಗೆ ಯಾವುದೇ ಅಡ್ಡಿಯಿಲ್ಲವೆನ್ನಲಾಗಿದೆ. ಒಟ್ಟು 12 ಹುದ್ದೆಗಳ  ರ್ಯಾಂಕ್ ಲಿಸ್ಟ್ ಪ್ರಕಟವಾಗಿದ್ದು, ಈ ಪೈಕಿ ಕನ್ನಡ ಮೀಸಲು ಹುದ್ದೆಗಳಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ. ಈಗಾಗಲೇ ಪ್ರಕಟಗೊಂಡ ಪ್ರೌಢಶಾಲಾ ಸಹಾಯಕ ದೈಹಿಕ ಶಿಕ್ಷಕ ಕನ್ನಡ ಮಾಧ್ಯಮ ವಿಭಾಗದ ರ್ಯಾಂಕ್ ಪಟ್ಟಿಯಲ್ಲಿ 12 ಮಂದಿ ಮಲೆಯಾಳಿಗರು ಆಯ್ಕೆಗೊಂಡಿದ್ದು, ಕೂಡಲೇ ಈ ರ್ಯಾಂಕ್ ಪಟ್ಟಿ ರದ್ದುಗೊಳಿಸಿ,ಕನ್ನಡ ಮೀಸಲು ಹುದ್ದೆಗಳ ನೇಮಕಾತಿ ಮಾನದಂಡಗಳಲ್ಲಿ  ಅಗತ್ಯ ಬದಲಾವಣೆಮಾಡಿ ಮೀಸಲಾತಿ ನಿಯಮ ಬುಡಮಮೇಲುಗೊಳಿಸುವುದನ್ನು ಕೊನೆಗೊಳಿಸಬೇಕು ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ  ಹಷರ್ಾದ್ ವಕರ್ಾಡಿಯವರು ಕೇರಳ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
   ಕನ್ನಡ ಶಾಲೆಗಳಲ್ಲಿ ಅಥವಾ ಇತರ ಇಲಾಖೆಗಳ ಕನ್ನಡ ಮೀಸಲು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ವರೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡವರು ಮಾತ್ರ ಆರ್ಹರು ಎಂಬ ತಿದ್ದುಪಡಿಯನ್ನು  ತಂದು ಕನ್ನಡಿಗರ ಹಿತಾಸಕ್ತಿ ಸಂರಕ್ಷಿಸಬೇಕು ಎಂದು ಅವರು ಮನವಿ ಮಾಡಿದ್ದು ಶಿಕ್ಷಣ ಸಚಿವರು,ಪ್ರತಿಪಕ್ಷದ  ನಾಯಕರು ಮುಂತಾದವರಲ್ಲಿ ಈ ಕುರಿತು ಮಧ್ಯಪ್ರವೇಶಿಸಲು ಮನವಿ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries