HEALTH TIPS

No title

            ಬಗಂಬಿಲದಲ್ಲಿ  ದೈವದ ಪ್ರತಿಷ್ಠಾಪನೆ
      ಮಂಜೇಶ್ವರ: ಕೊಡ್ಲಮೊಗರು ಬಗಂಬಿಲದಲ್ಲಿ  ನೂತನವಾಗಿ ನಿಮರ್ಿಸಿದ ಗುವೆದಪಡ್ಪು  ಶ್ರೀ ವಿಷ್ಣುಮೂತರ್ಿ ಶ್ರೀ ವಯನಾಡು ಕುಲವನ್ ದೈವದ ಭಂಡಾರ ಸ್ಥಾನದ ಮತ್ತು  ಗುಳಿಗ ದೈವದ ಪ್ರತಿಷ್ಠಾಪನೆ ಹಾಗೂ ಪರ್ವ ಕಾರ್ಯಕ್ರಮವು ಏ.1ರಿಂದ 3ರ ವರೆಗೆ ಜರಗಲಿದೆ.
    ಗುವೆದಪಡ್ಪು  ಶ್ರೀ ವಿಷ್ಣುಮೂತರ್ಿ, ಶ್ರೀ ವಯನಾಡು ಕುಲವನ್ ಭಂಡಾರ ಸ್ಥಾನ ಜೀಣರ್ೋದ್ಧಾರ ಸಮಿತಿ ಬಗಂಬಿಲ ಹಾಗೂ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿಯ ನೇತೃತ್ವದಲ್ಲಿ  ಕಾರ್ಯಕ್ರಮ ನಡೆಯಲಿದೆ.
   ಏ.1ರಂದು ಬೆಳಗ್ಗೆ  ಹಸಿರುವಾಣಿ ಹೊರೆಕಾಣಿಕೆ, ಸಂಜೆ 5.30ಕ್ಕೆ ಕುತ್ತಿಪೂಜೆ, ರಾತ್ರಿ 7ಗಂಟೆಗೆ ವಾಸ್ತುಹೋಮ, ಏ.2ರಂದು ಬೆಳಗ್ಗೆ  6ಗಂಟೆಗೆ ಗಣಪತಿ ಹೋಮ, 10.02ರಿಂದ 11.02ರ ತನಕ ಒದಗುವ ವೃಷಭ ಲಗ್ನದಲ್ಲಿ  ಶ್ರೀ ವಿಷ್ಣುಮೂತರ್ಿ, ಶ್ರೀ ವಯನಾಡು ಕುಲವನ್ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ , ಮಧ್ಯಾಹ್ನ  1ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಪರ್ವ, 9.30ಕ್ಕೆ ಅನ್ನ ಸಂತರ್ಪಣೆ, 10.30ಕ್ಕೆ ಶ್ರೀ ವಿಷ್ಣುಮೂತರ್ಿ ದೈವದ ತೊಡಂಙಲ್, 11ಗಂಟೆಗೆ ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಪಾವೂರು ಪೊಯ್ಯೆ ಇದರ ಬಾಲ ಕಲಾವಿದರಿಂದ `ಶ್ರೀಕೃಷ್ಣ  ಲೀಲೆ - ಕಂಸವಧೆ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
   ದಯಾನಂದ ಪಾವೂರು ಭಾಗವತರಾಗಿ ಶಂಕರಚಾರ್ಯ ಕೋಳ್ಯೂರು ನಿದರ್ೇಶನದಲ್ಲಿ  ಈ ಯಕ್ಷಗಾನ ಜರಗಲಿದೆ. ಏ.3ರಂದು ಪ್ರಾತಃಕಾಲ 2ಗಂಟೆಗೆ ಶ್ರೀ ವಿಷ್ಣುಮೂತರ್ಿ ದೈವದ ಕೋಲ, ಹರಕೆ, ಬೆಳಗ್ಗೆ  6ಗಂಟೆಗೆ ಶ್ರೀ ಗುಳಿಗ ದೈವದ ಕೋಲ, ಹರಕೆ, ಸಂಜೆ 6ಗಂಟೆಗೆ ಮರುಪುತ್ತರಿ ಕಾರ್ಯಕ್ರಮ ನಡೆಯಲಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries