HEALTH TIPS

No title

            ಸೌಹಾರ್ಧತೆ, ಸಾಮೂಹಿಕ ಪ್ರಜ್ಞಾವಂತಿಕೆಯ ಸಮಾಜ ನಿಮರ್ಾಣದಲ್ಲಿ ಗ್ರಾಮೀಣ ಕಲೆ, ಕ್ರೀಡೆಗಳನ್ನು ಇನ್ನಷ್ಟು ಬೆಳೆಸಬೇಕು-ನಾಗಲಕ್ಷ್ಮೀ ಬಾಯಿ
   ಉಪ್ಪಳ: ಗ್ರಾಮೀಣ ಕಲೆ, ಸಂಸ್ಕೃತಿಗಳು ನಾಗರೀಕತೆಯ ಬೆಳವಣಿಗೆಗೆ ನೀಡಿರುವಷ್ಟು ಕೊಡುಗೆಗಳನ್ನು ಬೇರೊಂದು ಈ ಮಣ್ಣಿಗೆ ನೀಡಿಲ್ಲ. ಸೌಹಾರ್ಧತೆ, ಸಾಮೂಹಿಕ ಪ್ರಜ್ಞಾವಂತಿಕೆಯ ಸಮಾಜ ನಿಮರ್ಾಣದಲ್ಲಿ ಗ್ರಾಮೀಣ ಕಲೆ, ಕ್ರೀಡೆಗಳನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಪರಸ್ಪರ ಕೈಜೋಡಿಸಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕನರ್ಾಟಕ ಸರಕಾರದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಕರೆನೀಡಿದರು.
   ಜಿಲ್ಲೆಯ ವಿವಿಧ ಕಲೆ, ಸಂಸ್ಕೃತಿಗಳ ಸಂರಕ್ಷಣೆ, ಸಮವರ್ಧನೆಗಳಿಗಾಗಿ ಜಿಲ್ಲಾ ಸಾರ್ವಜನಿಕ ಮಾಹಿತಿ ಮತ್ತು ವಾತರ್ಾವಿನಿಮಯ ಕಾಯರ್ಾಲಯದ ನೇತೃತ್ವದಲ್ಲಿ ಶನಿವಾರ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ತೇಜಸ್ವಿನೀ ಫೆಸ್ಟ್ 2018 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎಕೆಎಂ ಅಶ್ರಫ್, ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗಡಿನಾಡು ಕಲಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಝಡ್ ಎ ಕಯ್ಯಾರ್, ಪ್ರೊ.ಎ.ಶ್ರೀನಾಥ್, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕುಡಾಲ್ ಮೇರ್ಕಳ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶನ್ ನಂಬೂದಿರಿ ಉಪಸ್ಥಿತರಿದ್ದು ಮಾತನಾಡಿದರು. ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗ್ಯದ ಪ್ರಮುಖರನ್ನು ಗೌರವಿಸಲಾಯಿತು. ಬಳಿಕ ಯಕ್ಷಗಾನ, ಬಯಲು ಕುಣಿತ, ಮಾಯಾಳು ಕುಣಿತ, ಕನ್ಯಾಪು, ಜಾನಪದ ಹಾಡು ಮೊದಲಾದ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.
  ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಜಿಲ್ಲಾ ವಾತರ್ಾಧಿಕಾರಿ ಸುಗುತನ್ ಸ್ವಾಗತಿಸಿ, ಎಸ್.ಕೆ.ಬಾಲಕೃಷ್ಣ ವಂದಿಸಿದರು.ಇಂದು ಕಾಂಞಿಂಗಾಡ್ ಲಯನ್ಸ್ ಸಭಾಂಗಣದಲ್ಲಿ ಕಳೆದ ಮೂರುದಿನಗಳಿಂದ ಕಾಂಞಿಂಗಾಡ್ ಮತ್ತು ಕುಡಾಲುಮೇರ್ಕಳದಲ್ಲಿ ನಡೆದ ಸಮರಂಭ ಸಮರೋಪಗೊಳ್ಲಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries