ನಿವೃತ್ತರಾಗುತ್ತಿರುವ ಶಿಕ್ಷಕರಿಗೆ ಗ್ರಾ.ಪಂ. ವತಿಯಿಂದ ಬೀಳ್ಕೊಡುಗೆ
ಬದಿಯಡ್ಕ: ಕಲ್ಲನ್ನು ಸುಂದರವಾದ ಮೂತರ್ಿಯನ್ನಾಗಿಸುವ ಶಿಲ್ಪಿಯಂತೆ ಅಧ್ಯಾಪಕರು ಮಕ್ಕಳು ಸುಶಿಕ್ಷಿತರನ್ನಾಗಿಸುವ ಶಿಲ್ಪಿಗಳಾಗಿದ್ದಾರೆ. ಸಮಾಜ ಸೇವೆಯಲ್ಲಿ ಮುಂದೆಯೂ ತಮ್ಮ ತಾವು ತೊಡಗಿಸಿಕೊಂಡು ನಾಡಿನ ಪ್ರಜೆಗಳಿಗೆ ಮಾರ್ಗದರ್ಶಕರಾಗಬೇಕಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಬುಧವಾರ ಬದಿಯಡ್ಕ ಶ್ರೀ ಗುರುಸದನದಲ್ಲಿ ಬದಿಯಡ್ಕ ಗ್ರಾಮಪಂಚಾಯತ್ ಹಾಗೂ ವಿದ್ಯಾಭ್ಯಾಸ ಸಮಿತಿ ವತಿಯಿಂದ ಗ್ರಾಮಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ನಿವೃತ್ತರಾಗಲಿರುವ ಅಧ್ಯಾಪಕರನ್ನು ಸನ್ಮಾಸಿ, ಸ್ಮರಣಿಕೆಯನ್ನಿತ್ತು ಗೌರವಿಸಿ ಮಾತನಾಡಿದದರು.
ಶಿಸ್ತು, ತಾಳ್ಮೆ ಹಾಗೂ ಏಕಾಗ್ರತೆಯಿಂದ ಮಕ್ಕಳನ್ನು ಉತ್ತಮರನ್ನಾಗಿಸುವ ಜವಾಬ್ದಾರಿಯುತವಾದ ಕೆಲಸ ಮಾಡುವುದು ತುಂಬಾ ಕಷ್ಟಕರವಾದ ಕೆಲಸವಾಗಿದ್ದು, ಅದನ್ನು ತಮ್ಮ ಸೇವೆಯ ಮೂಲಕ ತೋರಿಸಿಕೊಡುವವರು ಅಧ್ಯಾಪಕರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನವಜೀವನ ವಿದ್ಯಾಲಯದ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್, ನೀಚರ್ಾಲು ಮ.ಸಂ.ಕಾ.ಹೈ.ಸೆ. ಶಾಲೆಯ ಸೂರ್ಯನಾರಾಯಣ ಹಾಗೂ ಸರಸ್ವತೀ ಟೀಚರ್, ಎ.ಯು.ಪಿ.ಎಸ್.ಪಳ್ಳತ್ತಡ್ಕ ಶಾಲೆಯ ಮುಖ್ಯೋಫಾಧ್ಯಾಯ ಎ.ವಿ.ಮೋಹನನ್, ಎ.ಜೆ.ಬಿ.ಎಸ್.ಚೇಡಿಕ್ಕಾನದ ಸುಜಾತ ಕೆ. ಅವರುಗಳು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಬಿ.ಆರ್.ಸಿ.ಯ ಬಿಪಿಒ ಕುಂಞಿಕೃಷ್ಣನ್ ಮಾತನಾಡಿದರು. ಲಲಿತಾಂಬಿಕಾ ಸ್ವಾಗತಿಸಿ, ಗೋವಿಂದನ್ ನಂಬೂದಿರಿ ಧನ್ಯವಾದವನ್ನಿತ್ತರು. ಪಿಇಸಿಯ ಸದಸ್ಯ ಎ. ರಾಧಾಕೃಷ್ಣನ್ ನಿರೂಪಣೆಗೈದರು. ಪ್ರಶಾಂತ್ ಪಾಣತ್ತೂರು, ಶ್ರೀರಾಮ ಭಟ್, ಇಬ್ರಾಹಿಂ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.