HEALTH TIPS

No title

                  ಪ್ರಭಾವತಿ ಕೆದಿಲಾಯರಿಗೆ ಪ್ರಶಸ್ತಿ
   ಬದಿಯಡ್ಕ : ಪೆರಡಾಲ ನವಜೀವನ ಪ್ರೌಢಶಾಲೆಯ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯರಿಗೆ ಮೈಸೂರಿನ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ಆಶ್ರಯದಲ್ಲಿ ನೀಡಲಾಗುವ ಈ ವರ್ಷದ ಮಹಾಕವಿ ಡಾ. ಲತಾ ರಾಜಶೇಖರ್ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಇದೇ ಮಾ.11ರಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಭಾವತಿ ಕೆದಿಲಾಯರು ಪ್ರಸ್ತುತ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆ ಹಾಗೂ ಕುಂಬಳೆ ಉಪಜಿಲ್ಲಾ ಕನ್ನಡ ಅಧ್ಯಾಪಕ ಸಂಘದ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಎಡನೀರು ಮಠದಲ್ಲಿ ನಡೆದ ಕೆದಿಲಾಯ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳಿಂದ ಸನ್ಮಾನಿತರಾಗಿದ್ದರು. ಪ್ರಭಾವತಿ ಕೆದಿಲಾಯರ ಸಾಧನೆಗಾಗಿ ಕನರ್ಾಟಕ ಲೋಕಸೇವಾ ಆಯೋಗದ ಆಯುಕ್ತ ಟಿ ಶ್ಯಾಮ ಭಟ್ಟರಿಂದ ಅಭಿನಂದಿಸಲ್ಪಟ್ಟಿದ್ದಾರೆ. ಜಿಲ್ಲೆಯ ಸಾಹಿತ್ಯಕ, ಸಾಮಾಜಿಕ, ಧಾಮರ್ಿಕ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ. ಚಿಲುಮೆ, ಬೊಲ್ಪು, ಚುಟುಕು ಚುರುಕು, ತುಳು ಸಿರಿ ಪಾಡ್ದನ ಮೊದಲಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ, ಗಮಕವಾಚಕಿಯಾಗಿ, ಹರಿದಾಸರಾಗಿ ಹಾಗೂ ವಿವಿಧ ಕಮ್ಮಟಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರು ಈಗಾಗಲೇ ದರಾ ಬೇಂದ್ರೆ ಸುವರ್ಣ ಕನರ್ಾಟಕ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ ಮೊದಲಾದ ಗೌರವವನ್ನು ಪಡೆದಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries