HEALTH TIPS

No title

        ಜಿಲ್ಲೆಯಲ್ಲಿ  ಆನ್ಲೈನ್ ಕ್ರಿಯಾಪಡೆ ರೂಪೀಕರಣ
    ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ  ಡಿಜಿಟಲ್ ಸಾಕ್ಷರತಾ ಯೋಜನೆಯನ್ನು  ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಆನ್ಲೈನ್ ಡಿಜಿಟಲ್ ಸೇವೆಗಳ ಏಕೋಪನಕ್ಕೆ ಹಾಗೂ ಪ್ರಾದೇಶಿಕ ಮಟ್ಟದಲ್ಲಿರುವ ತಿಳುವಳಿಕೆ ಕಾರ್ಯಕ್ರಮ ಅಲ್ಲದೆ ಆನ್ಲೈನ್ ಕ್ರಿಯಾಪಡೆಯನ್ನು  ರಚಿಸಲಾಗಿದೆ.
   ಸರಕಾರಿ ನೌಕರರು, ಅಕ್ಷಯ ಕೇಂದ್ರಗಳ ಸಿಬ್ಬಂದಿಗಳು, ಕಾಮನ್ ಸವರ್ೀಸ್ ಕೇಂದ್ರಗಳ ನಿರ್ವಹಣೆ ಉದ್ಯೋಗಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿ ಸಂಯುಕ್ತವಾಗಿ ಡಿಜಿಟಲ್ ಕ್ರಿಯಾಪಡೆಯನ್ನು  ರೂಪಿಸಿದ್ದಾರೆ.
ಕಾಸರಗೋಡು ಜಿಲ್ಲಾಡಳಿತ, ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್  ಆ್ಯಂಡ್ ಇನಮರ್ೇಶನ್ ಟೆಕ್ನಾಲಜಿ ಡಿಪಾಟರ್್ಮೆಂಟ್ನ ಅಧೀನದ ಆನ್ಲೈನ್ ಪೋರ್ಟಲ್ ಆದ ವಿಕಾಸ್ ಪೀಡಿಯ ಕೇರಳ, ಜಿಲ್ಲಾ  ಗವನರ್ೆನ್ಸ್  ಸೊಸೈಟಿ ಇವುಗಳು ಸಂಯುಕ್ತವಾಗಿ ಇರುವ ಕ್ರಿಯಾ ಪಡೆ ಇದಾಗಿದೆ.
   ಸರಕಾರಿ, ಅರೆ ಸರಕಾರಿ, ಖಾಸಗಿ ಆನ್ಲೈನ್ ಸೇವೆಗಳು, ಡಿಜಿಟಲ್ ಸಾಕ್ಷರತೆ, ಡಿಜಿಟಲ್ ಆಥರ್ಿಕ ಸಾಕ್ಷರತೆ, ಸೋಶಿಯಲ್ ಮೀಡಿಯ, ಸೈಬರ್ ಸೆಕ್ಯೂರಿಟಿ ಮೊದಲಾದ ಎಲ್ಲಾ  ಡಿಜಿಟಲ್ ಆನ್ಲೈನ್ ವ್ಯವಸ್ಥೆಗಳನ್ನು  ಜನಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ  ತಿಳುವಳಿಕೆ ಮೂಡಿಸಲು ತೀಮರ್ಾನಿಸಲಾಗಿದೆ.
   ಕೋ- ಆಡರ್ಿನೇಶನ್, ತಿಳುವಳಿಕೆ ಕಾರ್ಯಕ್ರಮ, ತಾಂತ್ರಿಕ ಸಹಾಯ, ಸಾಮಾಜಿಕ ಮಾಧ್ಯಮಗಳು ಹೀಗೆ ನಾಲ್ಕು ವಿಭಾಗಗಳಲ್ಲಿ  ಎಂಭತ್ತಕ್ಕೂ ಅಧಿಕ ಮಂದಿಯನ್ನು  ಒಳಗೊಂಡ ಡಿಜಿಟಲ್ ಕ್ರಿಯಾಪಡೆ ಇದಾಗಿದ್ದು , ಅತ್ಯಂತ ಯಶಸ್ಸಿನತ್ತ  ಮುನ್ನುಗ್ಗುತ್ತಿದೆ. ಈ ಕ್ರಿಯಾಪಡೆಯು ಈಗಾಗಲೇ ಹಲವಾರು ಕಾರ್ಯಯೋಜನೆಗಳನ್ನು  ಸಿದ್ಧಪಡಿಸಿದ್ದು , ಅನುಷ್ಠಾನಕ್ಕೆ ತರುವತ್ತ  ಗಮನಹರಿಸಿದೆ.
   ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ  ಏಕದಿನ ಕಾಯರ್ಾಗಾರವನ್ನು  ಜಿಲ್ಲಾ  ಪಂಚಾಯತು ಅಧ್ಯಕ್ಷ  ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಎಡಿಎಂ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ವಿಕಾಸ್ ಪೀಡಿಯ ರಾಜ್ಯ ಸಂಯೋಜಕ ಸಿ.ವಿ.ಶಿಬು ವಿಷಯ ಮಂಡಿಸಿದರು.
   ಜಿಲ್ಲಾ  ಇ-ಗವನರ್ೆನ್ಸ್  ಸೊಸೈಟಿಯ ಜಿಲ್ಲಾ  ಯೋಜನಾ ಪ್ರಬಂಧಕ ಶ್ರೀರಾಜ್ ಪಿ.ನಾಯರ್, ಜಿಲ್ಲಾ  ಲೀಡ್ ಬ್ಯಾಂಕ್ ಪ್ರಬಂಧಕ ಸಿ.ಎಸ್.ರಮಣನ್, ಜಿಲ್ಲಾ  ಟ್ರೆಷರಿ ಸಂಯೋಜಕ ಪುರುಷೋತ್ತಮನ್, ಜಿಲ್ಲಾ  ಇನಮರ್ೆಟಿಕ್ ಆಫೀಸರ್ ಕೆ.ರಾಜನ್, ಜಿಲ್ಲಾ  ಐಟಿ ಸೆಲ್ ಸಂಯೋಜಕ ಟಿ.ಕೆ.ವಿನೋದ್, ಜಿಎಸ್ಟಿ ಜಿಲ್ಲಾ  ಸಂಯೋಜಕ ಮಧು ಕರಿಂಬಿಲ್, ಜಿಲ್ಲಾ  ವಾತರ್ಾಧಿಕಾರಿ ಇ.ವಿ.ಸುಗತನ್, ವಿಕಾಸ್ ಪೀಡಿಯ ಟೆಕ್ನಿಕಲ್ ಹೆಡ್ ಜುಬಿನ್ ಆಗಸ್ಟಿಯನ್ ಮುಂತಾದವರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries