HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಅಶಕ್ತ ಕುಟುಂಬಕ್ಕೆ ಬೇಕಿದೆ ಭರವಸೆಯ ಬೆಳಕು, ನಿಶ್ಯಕ್ತನಿಗೆ ಬೇಕಿದೆ ಸಾಂತ್ವಾನ
    ಉಪ್ಪಳ: ಶ್ರಮ ಜೀವನವನ್ನೆ ಜೀವನದ ಪ್ರಮುಖ ಗುರಿಯಾಗಿಸಿ ಜೀವನದ ಏಳಿಗೆಯನ್ನು ಬಯಸುವ ಮಂದಿ ಹಲವರಿದ್ದಾರೆ. ಆದರೆ ಕೆಲ ಸಮಯ ಜೀವಕ್ಕೆ ಅಪಾಯ ಬಂದ ಸಂದರ್ಭ ಅದನ್ನು ಎದುರಿಸಲು ಅತೀ ಅಗತ್ಯವಾದ ಆಥರ್ಿಕ ಸದೃಢತೆ ಇಲ್ಲವಾದಲ್ಲಿ ಅಂತಹವರ ಬವಣೆ ಹೇಳ ತೀರದು. ಪೈವಳಿಕೆ ಕಾಯರಕಟ್ಟೆ ನಿವಾಸಿ 40 ವರ್ಷ ವಯಸ್ಸಿನ ಕೃಷ್ಣಯ್ಯ ಬಲ್ಲಾಳ್ ಕಳೆದ ಒಂದು ದಶಕದಿಂದ ಹಾಸಿಗೆ ಹಿಡಿದಿದ್ದು ಆಥರ್ಿಕ ಸಂಕಷ್ಟದ ಮಧ್ಯೆ ಆರೋಗ್ಯವನ್ನು ಸುಧಾರಿಸಿಕೊಳ್ಳಲಾಗದೆ ಸಂಕಷ್ಟಮಯ ಜೀವನವನ್ನು ಎದುರಿಸುತ್ತಿದ್ದಾರೆ.
   12 ವರ್ಷಗಳ ಹಿಂದೆ ಶ್ರಮ ಜೀವನದ ಕೂಲಿ ಕಾಮರ್ಿಕ ವೃತ್ತಿ ನಿರ್ವಹಿಸುತ್ತಿದ್ದ ಕೃಷ್ಣಯ್ಯ ಬಲ್ಲಾಳ್ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಹಲವು ಆಸ್ಪತ್ರೆ, ವೈದ್ಯರು, ಚಿಕಿತ್ಸಾಲಯಗಳನ್ನು ಕಂಡರು ಪ್ರಯೋಜನವಾಗದೆ, ಕುಟುಂಬದ ಆಧಾರ ಸ್ಥಂಭವು ಪೂರ್ಣ ಗುಣಮುಖರಾಗದೆ, ಹಿಂದಿದ್ದ ತೋಳ್ಬಲದ ಶಕ್ತಿಯನ್ನು ಕಾಣದೆ ಹಾಸಿಗೆ ಹಿಡಿಯುವಂತಾಗಿದೆ. ಮನೆಯಲ್ಲಿ ತಾಯಿ ಲಕ್ಷ್ಮೀ ಅಮ್ಮ ಮತ್ರವಿದ್ದು ಮಗನ ಜೌಷಧೋಪಚಾರ ಸಹಿತ ಮನೆಯ ಇತರ ಖಚರ್ು ವೆಚ್ಚಗಳ ಬಗ್ಗೆ ಚಿತ್ತ ಹರಿಸಬೇಕಾದ ದುಸ್ಥಿತಿಯು ಎದುರಾಗಿದೆ. ತಂದೆ ಆದಿತ್ಯ ಬಲ್ಲಾಳ್ ವರ್ಷಗಳ ಹಿಂದೆ ಅಸುನೀಗಿದ್ದು, ಕುಟುಂಬ ನಿರ್ವಹಣೆಯ ಸಂಪೂರ್ಣ ಭಾರವು ತಾಯಿ ಲಕ್ಷ್ಮೀ ಅಮ್ಮನ ಹೇಗಲ ಮೇಲಿದೆ.
   ಬೆನ್ನಿನ ಮೂಳೆ ಮುರಿತಕ್ಕೊಳಗಾದ ಪ್ರಥಮ ಎರಡು ವರ್ಷಗಳ ಕಾಲ ಮಗ ಸಂಪೂರ್ಣ ಗುಣಮುಖನಾಗಬಹುದು ಎಂಬ ಆಶಾಭಾವ ಹೊಂದಿದ್ದ ಮನೆ ಮಂದಿ ಹಲವು ಲಕ್ಷಗಳನ್ನು ವ್ಯಯಿಸಿ, ವೈದ್ಯ ತಪಾಸಣೆ ಸಹಿತ ದುಬಾರಿ ಶಸ್ತ್ರ ಕ್ರಿಯೆಗೂ ಅಣಿಯಾಗಿದ್ದರು. ಆದರೆ ಮಗ ಕೃಷ್ಣಯ್ಯ ಬಲ್ಲಾಳ್ ಆರೋಗ್ಯ ಸುಧಾರಿಸದ ಕಾರಣ ಇಳಿ ವಯಸ್ಸಿನ ತಾಯಿ ಲಕ್ಷ್ಮೀ ಅಮ್ಮ ಅವರು ಹತಾಶರಾಗಿದ್ದಾರೆ. ಕೇರಳ ಸರಕಾರದ ಆರೋಗ್ಯ ಸೇವಾ ವಿಭಾಗದ ಅಧೀನದಲ್ಲಿರುವ ಕಾಸರಗೋಡು ಜಿಲ್ಲಾ ಅಶಕ್ತರ ಮಂಡಳಿ, ಜನರಲ್ ಆಸ್ಪತ್ರೆ ಕಾಸರಗೋಡು ಇದರಿಂದ ಕೃಷ್ಣಯ್ಯ ಬಲ್ಲಾಳ್ ಅವರಿಗೆ ಶಾರೀರಿಕ ಅಸ್ವಸ್ಥನಾಗಿದ್ದಾನೆ, ಚಲನಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂಬ ಸಟರ್ಿಫಿಕೇಟ್ ಲಭ್ಯವಾಗಿದೆ. ತಿಂಗಳಿಗೊಮ್ಮೆ ಅಶಕ್ತನೆಂಬ ಯಾದಿಯಲ್ಲಿ ಕಿಂಚಿತ್ತು ಮಾಸಿಕ ಪಿಂಚಣಿ ಲಭಿಸುತ್ತಿದ್ದರೂ, ಪೂರ್ಣ ಗುಣಮುಖರಾಗದೆ ಹಾಸಿಗೆ ಹಿಡಿದ ಸ್ಥಿತಿಯಲ್ಲಿರುವ ಕೃಷ್ಣಯ್ಯನ ಜೌಷಧಿ, ಆರೋಗ್ಯ ತಪಾಸಣೆಗೆ ಹಣ ಸಾಕಾಗುತ್ತಿಲ್ಲ, ಮನೆಯ ಎಲ್ಲ ಕೆಲಸಗಳನ್ನು ನಿರ್ವಹಿಸುವ ತಾಯಿ ಲಕ್ಷ್ಮೀ ಬಾಯಿಯು ಬಿಡುವಿನ ವೇಳೆ ಬೀಡಿ ಕಟ್ಟಿ ಜೀವನ ನಿರ್ವಹಿಸಬೇಕಾದ ಸ್ಥಿತಿ ಇದೆ. ಸ್ಥಳಿಯಾಡಳಿತ ಸಹಿತ ಕಾಮರ್ಿಕ ಇಲಾಖೆಗಳಿಗೆ ಅಜರ್ಿ ಸಲ್ಲಿಸಿದ್ದರೂ ತಕ್ಕ ಪ್ರಮಾಣದ ಆಥರ್ಿಕ ಸಹಕಾರ ಪ್ರಾಪ್ತಿಯಾಗಿಲ್ಲ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಿಂದ 25 ಸಾವಿರ ರೂ. ಧನಸಹಾಯವನ್ನು ಕೃಷ್ಣಯ್ಯ ಬಲ್ಲಾಳ್ ಅವರ ಚಿಕಿತ್ಸೆಗೆ ನೀಡಲಾಗಿತ್ತು. ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವ ಯುವಕ ಕೃಷ್ಣಯ್ಯ ಬಲ್ಲಾಳ್ ಅವರ ಆರೋಗ್ಯ ಸುಧಾರಣೆ ಸಹಿತ ಹೆಚ್ಚಿನ ಚಿಕಿತ್ಸೆ ಕೊಡಿಸಿದಲ್ಲಿ ಪೂರ್ಣ ಗುಣರಾಗಬಹುದು ಎಂಬ ಭರವಸೆಯು ಇದೆ.
  ನುರಿತ ಕಾಮರ್ಿಕ- ಕೃಷ್ಣಯ್ಯ ಬಲ್ಲಾಳ್ ತಮ್ಮ ವೃತ್ತಿ ಜೀವನದ ಸಂದರ್ಭ ನುರಿತ ಕೃಷಿ ಕಾಮರ್ಿಕರಾಗಿದ್ದರು. ಪೈವಳಿಕೆ ಸಮೀಪದ ಹಲವು ಅಡಿಕೆ ತೆಂಗಿನ ತೋಟಗಳ ಬೆಳೆ ಕೀಳುವಿಕೆ, ಜೌಷಧ ಸಿಂಪಡನೆಯಂತಹ ಕೆಲಸವನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದರು. ಹೊಸ ತಲೆಮಾರಿನ ಯುವ ಮಂದಿ ಇಂತಹ ಕೆಲಸಕಾರ್ಯಗಳಿಗೆ ಸಿಗದಿದ್ದ ಸಂದರ್ಭ ಏರು ಯವ್ವನದ ಕೃಷ್ಣಯ್ಯ ಬಲ್ಲಾಳ್ ಅವರ ಕಾಮರ್ಿಕ ವೃತ್ತಿ ಸಹಕಾರಿಯಾಗಿತ್ತು.
    ಸಹಾಯಹಸ್ತ ನೀಡಲು ಇಚ್ಛಿಸುವವರು ಕೃಷ್ಣಯ್ಯ ಬಲ್ಲಾಳ್ ಅವರ ಪೈವಳಿಕೆ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ಹಣ ವಗರ್ಾಯಿಸಬಹುದಾಗಿದೆ. ಸಿಂಡಿಕೇಟ್ ಬ್ಯಾಂಕ್ ಪೈವಳಿಕೆ ಶಾಖೆ
ಈಖಅ : ಖಙಓಃ0004230
ಅಕೌಂಟ್ ನಂಬರ್: 42302210013940
 :ತಂದೆ ಆದಿತ್ಯ ಬಲ್ಲಾಳ್ ಯಕ್ಷಗಾನ ಕಲಾವಿದ:
   ಕೃಷ್ಣಯ್ಯ ಬಲ್ಲಾಳ್ ರವರ ತಂದೆ ಹಳೆಯ ತಲೆಮಾರಿಯ ಯಕ್ಷಗಾನ ಕಲಾವಿದ ಚಿಪ್ಪಾರು ಆದಿತ್ಯ ಬಲ್ಲಾಳ್ ಅಂದು ಚಿರಪರಿಚಿತರು. ಶ್ರೀಕ್ಷೇತ್ರ ಧರ್ಮಸ್ಥಳ ಮೇಳ ಸಹಿತ ವಿವಿಧ ಮೇಳಗಳಲ್ಲಿ ಆದಿತ್ಯ ಬಲ್ಲಾಳ್ ಹಾಸ್ಯ ಕಲಾವಿದರಾಗಿ ಮಿಂಚಿದ್ದವರು. ಆದರೆ ಆ ಕಾಲಘಟ್ಟ ಇಂದಿನಂತೆ ಕಲಾವಿದರಿಗೆ ತಾರಾ ಮೌಲ್ಯಗಳಿದ್ದ ಕಾಲವಾಗಿರಲಿಲ್ಲ. ಆದ್ದರಿಂದ ಸಂಪಾದನೆ ಎಂಬುದು ಗಗನ ಕುಸುಮವೇ ಆಗಿತ್ತು. ಕುಟುಂಬಕ್ಕಾಗಿ ಏನೂ ಮಾಡಲಾರದ ದುಸ್ಥಿತಿಯಲ್ಲಿದ್ದರು. ವಯೋಸಹಜ ಅಸೌಖ್ಯ ಆದಿತ್ಯ ಬಲ್ಲಾಳ್ ನಿಧನರಾದ ಬಳಿಕ ಕುಟುಂಬ ಅತಂತ್ರವಾಯಿತು.
   ಏನಂತಾರೆ:   ಕಳೆದ ಹನ್ನೆರೆಡು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೃಷ್ಣಯ್ಯ ಬಲ್ಲಾಳ್ ಅವರಿಗೆ ಸಮಾಜಮುಖಿಗಳ ಸಹಾಯಹಸ್ತದ ಜರೂರಿದೆ, ಸಾಂತ್ವಾನ ನೆರವಿನ ಅಗತ್ಯವಿದೆ. ತಜ್ಞ ವೈದ್ಯರನ್ನು ಸಂಪಕರ್ಿಸಿದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದೆಂಬ ಭರವಸೆಯಿದೆ. ಪ್ರಸ್ತುತ ಸರಕಾರವು ಅಶಕ್ತರ ಬಾಳಿನ ಬೆಳಕಾಗಬೇಕು. ಶ್ರಮ ಜೀವನದ ಪ್ರತೀಕವಾದ ಕೃಷ್ಣಯ್ಯನಂತಹ ವ್ಯಕ್ತಿಗಳ ಜೀವನದಲ್ಲಿ ಹೊಸ ಆಶಾಭಾವ ಸೃಷ್ಠಿಯಾಗಬೇಕು. ಈ ಹಿಂದೆ ಕೃಷ್ಣಯ್ಯರನ್ನು ಸಮೀಪದ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಕುಟುಂಬ ವರ್ಗದವರಲ್ಲಿ ಮಾತನಾಡಿದ್ದೇನೆ. ಕೃಷ್ಣಯ್ಯ ಬಲ್ಲಾಳ್ ಹಿಂದಿನಂತೆ ಎದ್ದು ನಿಂತು ಅವರ ಕೆಲಸ ಕಾರ್ಯವನ್ನು ನಿರ್ವಹಿಸುವಂತಾದಲ್ಲಿ ಕುಟುಂಬ ವರ್ಗವು ಸಂತಸ ಪಟ್ಟಿತು.
     ಸರೋಜಾ ಆರ್. ಬಲ್ಲಾಳ್
      ಸಾಮಾಜಿಕ ಕಾರ್ಯಕತರ್ೆ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries