HEALTH TIPS

No title

          ಉತ್ತಮ ಗುಣ ನಡತೆ, ಜ್ಞಾನದಿಂದ ಜೀವನದಲ್ಲಿ ಉನ್ನತಿ ಸಾಧ್ಯ - ಡಾ.ಬೇ.ಸಿ. ಗೋಪಾಲಕೃಷ್ಣ ಭಟ್
    ಉಪ್ಪಳ : ಉತ್ತಮ ಗುಣನಡತೆ, ಜ್ಞಾನದಿಂದ ಜೀವನದಲ್ಲಿ ಉನ್ನತಿ ಸಾಧ್ಯ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮಾಥ್ರ್ಯ ಕೆಲವೇ ಜನರಿಗೆ ಇರುತ್ತದೆ. ನಾರಾಯಣ ರಾವ್ ಅವರು ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ಇಂತಹ ಸವಾಲುಗಳನ್ನು ಎದುರಿಸಿ ವಿಜಯಿಯಾಗಿದ್ದಾರೆ ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್ ನುಡಿದರು.
  ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಹಯರ್ ಸೆಕೆಂಡರಿ ವಿಭಾಗದ ನಾರಾಯಣ ರಾವ್ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿಸೋಮವಾರ ಅವರನ್ನು ಅಭಿನಂದಿಸಿ ಮಾತನಾಡಿದರು.
   ಕಾಸರಗೋಡು ಜಿಲ್ಲೆಯ ಕುಂಬಳೆ ಕೊಯಿಪಾಡಿ ಗ್ರಾಮದಲ್ಲಿ ಕೇಶವರಾವ್ ಮತ್ತು ಕಮಲಮ್ಮ ದಂಪತಿಗಳ ಸುಪುತ್ರನಾಗಿ 24-09-1961ರಲ್ಲಿ ನಾರಾಯಣ ರಾವ್ ಜನಿಸಿದರು. ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ ಹಾಗೂ ಏತಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಅಗಲ್ಪಾಡಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದು, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಅಧ್ಯಾಪನ ವೃತ್ತಿಯತ್ತ ಆಕಷರ್ಿತರಾದ ಅವರು ಕಲ್ಲಿಕೋಟೆ ವಿಶ್ವವಿದ್ಯಾಲಯದ ಶಿಕ್ಷಕ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ ಕುಂಡಂಕುಳಿ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕರಾಗಿ ತಮ್ಮ ಔದ್ಯೋಗಿಕ ಜೀವನಕ್ಕೆ ಕಾಲಿರಿಸಿದರು. ಮುಂದೆ ಪಾಂಡಿ, ಅಡೂರು, ಅಂಗಡಿಮೊಗರು ಶಾಲೆಗಳಲ್ಲಿ ತಾತ್ಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ 1998ರ ಆ. 08 ರಂದು  ಪಡ್ರೆ ಹೈಸ್ಕೂಲಲ್ಲಿ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆ ಮಾಡಿದರು. ಬಳಿಕ ಅದೇ ಶಾಲೆಯಲ್ಲಿ ಇಲಾಖಾ ವಗರ್ಾವಣೆಯ ಮುಖಾಂತರ ಹಯರ್ ಸೆಕೆಂಡರಿ ವಿಭಾಗದ ಉಪನ್ಯಾಸಕರಾಗಿ ಭಡ್ತಿ  ಹೊಂದಿ 2013 ಅ. 27 ರಂದು ಪೈವಳಿಕೆ ನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಗೆ ವಗರ್ಾವಣೆಗೊಂಡರು.  ಓದು ಮತ್ತು ಯಕ್ಷಗಾನದಲ್ಲಿ ವಿಶೇಷ ಒಲವು ಹೊಂದಿರುವ ನಾರಾಯಣ ರಾವ್ ಡಿ.ಪಿ.ಇ.ಪಿ.ಯಿಂದ ತೊಡಗಿ ಎಸ್.ಎಸ್.ಎ. ವರೆಗೆ ಕನ್ನಡ ಪಠ್ಯಪುಸ್ತಕ  ಸಮಿತಿಯಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಸೇವೆಸಲ್ಲಿಸಿದರು.
   ಅಭಿನಂದನ ಸಮಾರಂಭವನ್ನು ಪ್ರಾಂಶುಪಾಲೆ ವಿಶಾಲಾಕ್ಷಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಪೈವಳಿಕೆನಗರ ಶಾಲೆಯಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಕಲ್ಲಿಕೋಟೆಗೆ ವಗರ್ಾವಣೆಗೊಳ್ಳುತ್ತಿರುವ ಶಿಕ್ಷಕ ಸುನೀಶ್ ಕುಮಾರ್ ತಡತ್ತಿಲ್ ಅವರನ್ನು ಸಮಾರಂಭದಲ್ಲಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಬ್ದುಲ್ಲ ಹಾಜಿ, ನಿವೃತ್ತ ಶಿಕ್ಷಣ ಉಪನಿದರ್ೇಶಕ ಶ್ರೀನಿವಾಸ ಕೆ, ನಿವೃತ್ತ ಶಿಕ್ಷಕ ರತ್ನಕುಮಾರ್, ಮಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಲಾರೆನ್ಸ್ ಡಿಸೋಜ ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಪೈವಳಿಕೆ, ಕ್ರೆಸೆಂಟ್ ಸ್ಪೋಟ್ಸರ್್ ಕ್ಲಬ್ನ ಅಬ್ದುಲ್ ರಹಿಮಾನ್, ವೆಂಕಟರಮಣ ನಾಯಕ್, ಕುಞ್ಞಿಕೃಷ್ಣನ್ ಉಪಸ್ಥಿತರಿದ್ದರು. ಹಯರ್ ಸೆಕೆಂಡರಿ ವಿಭಾಗದ ವಿಶ್ವನಾಥ ಕುಂಬಳೆ ಸ್ವಾಗತಿಸಿ, ಎಸ್ ಆರ್ ಜಿ ಸಂಚಾಲಕ ರವೀಂದ್ರನಾಥ್ ಕೆ ಆರ್ ವಂದಿಸಿದರು. ಶಾಲಾ ನೌಕರರ ಸಂಘದ  ಕಷ್ಣಮೂತರ್ಿ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ಎನ್ ಭಟ್ ಪ್ರಾರ್ಥನೆ ಹಾಡಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries