ಉತ್ತಮ ಸಂಸ್ಕಾರ ಸಂಸ್ಕೃತಿ ಕೃತಿ ಅನಾವರಣ
ಬದಿಯಡ್ಕ: ಪುಸ್ತಕ ಓದಿನಿಂದ ಬುದ್ಧಿ ಹರಿತವಾಗುತ್ತದೆ. ಸಂಸ್ಕೃತಿಯೇ ಭಾಷೆಗೆ ಆಧಾರ. ಉತ್ತಮ ಸಂಸ್ಕಾರ ಸಂಸ್ಕೃತಿ ಭಾಷಾ ರೂಪದಲ್ಲಿ ಬಂದಾಗ ಉತ್ತಮ ಕೃತಿಯ ಅನಾವರಣವಾಗುತ್ತದೆ. ಇಂತಹ ಕೃತಿಗಳ ಓದು ನಮ್ಮನ್ನು ಸಂಸ್ಕಾರವಂತನ್ನಾಗಿಸುತ್ತದೆ, ಎಂದು ಮಲಯಾಳಂ ಸಾಹಿತಿ ಪಿ ಸುರೇಂದ್ರನ್ ನುಡಿದರು.
ಅವರು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಕ್ಕಳ ಚಿಲುಮೆ ಪುಸ್ತಕ ಚೀಲವನ್ನು ಗುರುವಾರ ಬಿಡುಗಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ವಹಿಸಿದ್ದರು.ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬೇಸಿಗೆ ರಜಾ ಕಾಲದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಮೂಡಿಸಲು ಆಯ್ದು ಉತ್ತಮ ಪುಸ್ತಗಳ ಚೀಲವನ್ನು ಶಾಲಾ ಮುಖ್ಯ ಶಿಕ್ಷಕ ಶಂಕರ್ ಸಾರಡ್ಕ ವಿತರಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಅಶ್ರಫ್, ಶಾಲಾ ಸಹ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಕೆ , ಅಧ್ಯಾಪಕ ಸಂಘದ ಕಾರ್ಯದಶರ್ಿ ಸುಶೀಲ ಕೆ ಶುಭಾಶಂಸನೆ ಮಾಡಿದರು.
ಶಾಫಿ ಚೂರಿಪಳ್ಳ ಸ್ವಾಗತಿಸಿ, ಬಾಲಕೃಷ್ಣನ್ ವಂದಿಸಿದರು. ಚಿಲುಮೆ ಕಾರ್ಯಕ್ರಮದ ಸಂಚಾಲಕ ಉಣ್ಣಿಕೃಷ್ಣನ್ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ರತ್ನಾಕರನ್ ಕರಿವೆಳ್ಳೂರು ಮತ್ತು ತಂಡದವರಿಂದ ಓಟ್ಟಂತುಳ್ಳಲ್ ಜರಗಿತು.