HEALTH TIPS

No title

              ನವಜೀವನದಲ್ಲಿ ಎನ್ಪಿಸಿ ನಿರ್ಗಮನ ಫೆರೇಡ್
   ಬದಿಯಡ್ಕ:ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದ ಸ್ಟೂಡೆಂಟ್ ಪೊಲೀಸ್ ಕೆಡೆಟ್(ಎಸ್.ಪಿ.ಸಿ) ನಿರ್ಗಮನ   ಪೆರೇಡ್ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
   ಬದಿಯಡ್ಕ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಪೆರೇಡಿನ ಪರಿಶೀಲನೆ ನಡೆಸಿ, ಪಥ ಸಂಚಲನದಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದರು. ಮಕ್ಕಳಲ್ಲಿ ರಕ್ಷಣೆಯ ಅರಿವು ಹಾಗೂ ಜಾಗೃತಿ ಮೂಡಿಸಲು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಎಸ್.ಪಿ.ಸಿ. ನೆರವಾಗುತ್ತದೆ. ರಸ್ತೆನಿಯಮಗಳ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ, ಜನರನ್ನು ಎಚ್ಚರಗೊಳಿಸುವಲ್ಲಿ ಇವರು ತೋರುವ ಆಸಕ್ತಿ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದೆ. ನಾಳಿನ ಸತ್ಪ್ರಜೆಗಳನ್ನು ಸೃಷ್ಟಿಸುವಲ್ಲಿ ಎಸ್.ಪಿ.ಸಿ. ಪ್ರಧಾನ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್, ಎಸ್.ಪಿ.ಸಿ.ಯ ಡಿ.ಎನ್.ಒ. ಥೋಮಸ್, ಪ್ರಶಾಂತ್, ಡಿ.ಐ. ಶಾಜು, ಸಿ.ಪಿ.ಒ. ಕೃಷ್ಣ ಯಾದವ್, ಎ.ಸ್.ಪಿ.ಒ. ವನಜಕುಮಾರಿ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಶಾಲಾ ವಿದ್ಯಾಥರ್ಿಗಳು ಉಪಸ್ಥಿತರಿದ್ದು ಪೆರೇಡ್ ವೀಕ್ಷಿಸಿದರು. ಕಮಾಂಡರ್ ಆವನಿ ರತ್ನಾಕರ, ಪ್ಲೆಟೂನ್ ಟೀಚರ್ ದೀಕ್ಷಿತ, ವಿನೋದ ಕುಮಾರ ಹಾಗೂ ಇತರ ಎಸ್.ಪಿ.ಸಿ. ವಿದ್ಯಾಥರ್ಿಗಳ ಸಹಕಾರದೊಂದಿಗೆ ಪೆರೇಡ್ ಆಕರ್ಷಕವಾಗಿ ನಡೆುತು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries