HEALTH TIPS

No title

                ನೆಟ್ಟಣಿಗೆಯಲ್ಲಿ  ರಂಗಸಿರಿ ಸಂಗೀತ
    ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
  ರಂಗಸಿರಿಯ ಶಾಸ್ತ್ರೀಯ ಸಂಗೀತ ಗುರು ಸಂಗೀತ ವಿದುಷಿ ಗೀತಾ ಸಾರಡ್ಕ ಹಾಗೂ ಶಿಷ್ಯರು ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಕೀರ್ತನೆಗಳು, ಭಕ್ತಿರಸಭರಿತ ಹಾಡುಗಳ ಕಾರ್ಯಕ್ರಮ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.
 ವಿದ್ಯಾಥರ್ಿಗಳಾದ ಪ್ರಗತಿ ಪಂಜಿತ್ತಡ್ಕ, ಅನ್ವಿತಾ ತಲ್ಪನಾಜೆ, ಸುಮೇಧ ಅಗಲ್ಪಾಡಿ, ಅನಘ ಮರಕ್ಕಿಣಿ, ಕೃಷ್ಣಕಿಶೋರ ಪೆಮರ್ುಖ ಪ್ರತಿಭೆ ಮೆರೆದರು. ಪಕ್ಕವಾದ್ಯದಲ್ಲಿ ಬಲರಾಜ್ ಬೆದ್ರಡಿ ವಯಲಿನ್, ಶ್ರೀಧರ ಭಟ್ ಬಡಕ್ಕೆಕೆರೆ ಮೃದಂಗ ನುಡಿಸಿ ಉತ್ತಮ ಸಾಥ್ ನೀಡಿದರು. ರಂಗಸಿರಿಯ ಪದಾಧಿಕಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಂಕರ ಸಾರಡ್ಕ ನಿರೂಪಣೆ ಮಾಡಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದ್ದಕ್ಕಾಗಿ ಸಂಸ್ಥೆಯ ಪರವಾಗಿ ವಂದಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries