HEALTH TIPS

No title

                         ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
                      ಜಿಲ್ಲೆಯ ಕೃತಿಗಳಿಗೆ ಮಾರಾಟ ಅವಕಾಶ
    ಮುಳ್ಳೇರಿಯ : ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ಮಾ.31ರಿಂದ 2 ದಿನಗಳ ಕಾಲ ನಡೆಯುವ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆಯ ಲೇಖಕರ ಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಮ್ಮೇಳನದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವಿಭಾಗದಲ್ಲಿರುವ ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ನೇತೃತ್ವದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಕಾಸರಗೋಡಿನ ಲೇಖಕರ ಕೃತಿಗಳ ಮಾರಾಟಕ್ಕೆ ವಿಭಾಗ ಕಲ್ಪಿಸಲಾಗಿದೆ. ಆಸಕ್ತರು ಸಮ್ಮೇಳನದಂದು ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ತಮ್ಮ ಕೃತಿಗಳ ಪ್ರತಿಗಳನ್ನು ನೀಡಬೇಕಾಗಿ ಪ್ರಕಟಣೆ ತಿಳಿಸಿದೆ. ಸಾಹಿತ್ಯಾಸಕ್ತರು ಕಾಸರಗೋಡಿನ ವಿವಿಧ ಅಮೂಲ್ಯ ಕೃತಿಗಳನ್ನು ಪಡೆಯಲು ಸಿರಿಗನ್ನಡ ಪುಸ್ತಕ ಮಳಿಗೆಯನ್ನು ಸಂಪಕರ್ಿಸಬಹುದು. ಈ ಸಮ್ಮೇಳನದಲ್ಲಿ ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ, ಬೆಂಗಳೂರಿನ ಸಾಧನಾ ಪ್ರಕಾಶನ, ಉಡುಪಿಯ ಸುರಭಿ ಪುಸ್ತಕಾಲಯ ಹಾಗೂ ಯುನಿವರ್ಸಲ್ ಪುಸ್ತಕ ಭಂಡಾರ ಮೊದಲಾದ ಮಳಿಗೆಗಳು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಸಲಿದೆ.
    ಕಲಾ ಪ್ರದರ್ಶನ : ಸಮ್ಮೇಳನದ ಅಂಗವಾಗಿ ವಿವಿಧ ಕಲಾವಿದರು ರಚಿಸಿದ ಬಹುಮುಖಿ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ ಖ್ಯಾತ ಚಿತ್ರ ಕಲಾವಿದ ಪಿ ಎಸ್ ಪುಂಚಿತ್ತಾಯ, ಶಿಲ್ಪ ಕಲಾವಿದ ಪ್ರವೀಣಕುಮಾರ ಪುಂಚಿತ್ತಾಯ ಅವರ ಚಿತ್ರ ಹಾಗೂ ಶಿಲ್ಪ ಕಲಾಕೃತಿಗಳು, ಹಿರಿಯ ಕರಟ ಕಲಾವಿದ ಗೌರಿಯಡ್ಕ ವೆಂಕಟ್ರಮಣ ಭಟ್ ಅವರು ರಚಿಸಿದ ಕರಟ ಕಲಾಕೃತಿಗಳು, ವ್ಯಂಗ್ಯಚಿತ್ರಗಾರರಾದ ಬಾಲಮಧುರಕಾನನ, ವೆಂಕಟ್ ಭಟ್ ಎಡನೀರು, ವಿರಾಜ್ ಅಡೂರು ಅವರು ರಚಿಸಿದ ವ್ಯಂಗ್ಯಚಿತ್ರಗಳು, ಆಲ್ ಕೇರಳ ಫೋಟೋಗ್ರಾಫರ್ಸ್ ಆರ್ಗನೈಸೇಶನ್(ಎಕೆಪಿಎ) ಕಾಸರಗೋಡು ವಲಯ ಸಮಿತಿಯಿಂದ ಛಾಯಾಚಿತ್ರ ಪ್ರದರ್ಶನ, ಬೇಳ ಜಯಪ್ರಕಾಶ್ ಮಾಸ್ತರ್ ಹಾಗೂ ಚಿತ್ರ ಕಲಾವಿದ ಎಸ್ ಬಿ ಕೋಳಾರಿ ರಚಿಸಿದ ವಿವಿಧ ಕಲಾ ಪ್ರಕಾರಗಳು ಮೊದಲಾದ ಅನೇಕ ಕಲಾವಿದರ ಅದ್ಭುತ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜಿಲ್ಲೆಯ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries