HEALTH TIPS

No title

                    ಉತ್ತಮ ನಡೆ, ನುಡಿ ಶಿಕ್ಷಣದಿಂದ-ಪುಂಡರೀಕಾಕ್ಷ ಕೆ.ಎಲ್.
     ಕುಂಬಳೆ: ಉರಿಯುವ ದೀಪದಂತೆ ಯಾವುದೇ ಬೇಧಭಾವವಿಲ್ಲದೆ ಶಾಲೆಗಳು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದ್ದು ಅಧ್ಯಾಪಕರಿಗೆ ಮಕ್ಕಳನ್ನು ತಿದ್ದಲು ಅವಕಾಶವನ್ನು ಕಲ್ಪಸಿಕೊಡಬೇಕು ಎಂದು ಕುಂಬಳೆ ಗ್ರಾಮಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅಭಿಪ್ರಾಯಪಟ್ಟರು.
   ಅವರು ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವವನ್ನು ಶನಿವಾರ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
     ಬಾಹ್ಯ ಸೌಂದರ್ಯದಿಂದ ಆಂತರಿಕ ಸೌಂದರ್ಯಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕು. ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ನಡೆ ನುಡಿ, ನಯ ವಿನಯದಲ್ಲಿ ಜನರೊಂದಿಗೆ ಬೆರೆಯಬೇಕು ಎಂದರು.
   ಶಾಲಾ ವ್ಯವಸ್ಥಾಪಕ ಡಾ.ಕೆ.ವಿ.ತೇಜಸ್ವಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತರಾಗಲಿರುವ ಅಧ್ಯಾಪಿಕೆ ಜಯಲಕ್ಷ್ಮೀ ಅವರನ್ನು ಅಭಿನಂದಿಸಲಾಯಿತು. ಗ್ರಾ.ಪಂ. ಸದಸ್ಯ ಮುರಳೀಧರ ಯಾದವ್ ಮಾತನಾಡುತ್ತಾ ಮಕ್ಕಳ ಮನಸ್ಸನ್ನು ಗೆದ್ದು ತಾಯ್ತನದ ಪ್ರೀತಿಯನ್ನು ನೀಡುತ್ತಿರುವ ಮೃದು ಮನಸ್ಸಿನ ಶಿಕ್ಷಕಿಯ ಸೇವೆ ಯಾವತ್ತೂ ಸ್ಮರಣೀಯವಾಗಿದೆ. ಇಂತಹ ಅಧ್ಯಾಪಿಕೆಯರು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬಲ್ಲರು ಎಂದು ಹೇಳಿದರು.
   ಬ್ಲಾಕ್ ಪಂಚಾಯತು ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಮಾತನಾಡಿದರು.  ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ, ಕುಂಬಳೆ ಬಿ.ಆರ್.ಸಿ. ತರಬೇತುದಾರ ಕೇಶವನ್ ನಂಬೂದಿರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಐತ್ತಪ್ಪ, ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ರಾಮಚಂದ್ರ ಹೆಗಡೆ, ಹಳೆ ವಿದ್ಯಾಥರ್ಿ ಸಂಘದ ಪ್ರತಿನಿಧಿ ನಾರಾಯಣ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ ಭಾರತಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ಪಧರ್ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಧ್ಯಾಪಿಕೆಯರಾದ ಸ್ಮಿತಾ ಕುಮಾರಿ ಕೆ. ಕಾರ್ಯಕ್ರಮ ನಿರೂಪಿಸಿದರು. ಉಷಾದೇವಿ ಕೆ. ವಂದಿಸಿದರು. ಶಾಲಾ ವಿದ್ಯಾಥರ್ಿಗಳು ಪ್ರಾರ್ಥನೆಯನ್ನು ಹಾಡಿದರು. ಸಭಾಕಾರ್ಯಕ್ರಮದ ಬಳಿಕ ಶಾಲಾಮಕ್ಕಳಿಂದ, ಅಂಗನವಾಡಿ ಚಿಣ್ಣರಿಂದ ಹಾಗೂ ಹಳೆವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಅಧ್ಯಾಪಿಕೆ ಜಯಲಕ್ಷ್ಮೀ ಅವರನ್ನು ವಿವಿಧ ಸಂಘಸಂಸ್ಥೆಗಳು, ಹಳೆವಿದ್ಯಾಥರ್ಿಗಳು ಹಾಗೂ ಹಿತೈಷಿಗಳು ವೈಯಕ್ತಿಯವಾಗಿ ನೆನಪಿನ ಕಾಣಿಕೆಯಿತ್ತು ಗೌರವಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries