HEALTH TIPS

No title

                 ದ್ರವರೂಪದ ಸಾಬೂನು `ಅಂಬಾ ಮಲ್ಟಿ ಪರ್ಪಸ್ ಲಿಕ್ವಿಡ್' ಲೋಕಾರ್ಪಣೆ       
   ಬದಿಯಡ್ಕ : ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ಭಾರತೀಯ ಗೋಗ್ರಾಮ ಯೋಜನೆಯ ನೇತೃತ್ವದಲ್ಲಿ ಗೋವರ್ಧನ ಗೋವಿಹಾರಧಾಮ, ಜೋಗಿಯಡ್ಕ, ಚೊಕ್ಕಾಡಿ ಇವರು ತಯಾರಿಸಿರುವ ದೇಶೀಯ ಗೋ ತಳಿಯ ಗೋಮೂತ್ರದ ಅರ್ಕದಿಂದ ನಿಮರ್ಿಸಿರುವ ದ್ರವರೂಪದ ಸಾಬೂನು `ಅಂಬಾ ಮಲ್ಟಿ ಪರ್ಪಸ್ ಲಿಕ್ವಿಡ್' ಎಂಬ ಉತ್ಪನ್ನವನ್ನು ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರಮಠದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಲೋಕಾರ್ಪಣೆ ಮಾಡಿ ಅನುಗ್ರಹಿಸಿ ಆಶೀರ್ವದಿಸಿದರು.
`ಅಂಬಾ ಮಲ್ಟಿಪರ್ಪಸ್ ಲಿಕ್ವಿಡ್' ಎಂಬ ದ್ರವರೂಪದ ಈ ಸಾಬೂನನ್ನು ಪಾತ್ರೆ, ಬಟ್ಟೆ ಬರೆ, ವಾಹನ, ಚಿನ್ನಾಭರಣ, ಬೆಳ್ಳಿ ಆಭರಣ, ಪೂಜಾಪರಿಕರಗಳನ್ನು ತೊಳೆಯಲು ಹಾಗೂ ವಾಷಿಂಗ್ ಮೆಷಿನ್ಗಳಲ್ಲಿಯೂ ಉಪಯೋಗಿಸಬಹುದಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಗೋಗ್ರಾಮ ಯೋಜನೆಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಾಬೂನುಗಳಲ್ಲಿರುವ ಮಾರಕವಾದ ರಾಸಾಯನಿಕಗಳಿಂದ ನಮ್ಮ ಶರೀರದ ಮೇಲಾಗುವ ದುಷ್ಪರಿಣಾಮಗಳನ್ನು ಎಳೆ ಎಳೆಯಾಗಿ ವಿವರಿಸಿದರು. ಅತ್ಯಂತ ಕಡಿಮೆ ರಾಸಾಯನಿಕ ಹಾಗೂ ದೇಶೀಯ ಗೋತಳಿಗಳ ಗೋಮೂತ್ರದ ಅರ್ಕದಿಂದ ತಯಾರಿಸುವ ಈ ಮಲ್ಟಿಪರ್ಪಸ್ ಲಿಕ್ವಿಡ್ ಪಾತ್ರೆಗಳನ್ನು ಅತಿಶೀಘ್ರದಲ್ಲಿ ಶುಚಿಗೊಳಿಸುವುದು ಮಾತ್ರವಲ್ಲದೆ ಪಾತ್ರೆಗಳಲ್ಲಿ ಅಂಟಿಕೊಳ್ಳುವುದಿಲ್ಲ. ಇದರಿಂದಾಗಿ ಮನುಷ್ಯನ ಹೊಟ್ಟೆಸೇರುವ ಸಾಬೂನನ್ನು ಇಲ್ಲವಾಗಿಸಿ ರೋಗಮುಕ್ತವಾಗಿ ಜೀವನವನ್ನು ಸಾಗಿಸಬಹುದೆಂದು ಅಭಿಪ್ರಾಯಪಟ್ಟರು. ಬಟ್ಟೆಗಳಿಗೆ ಇದನ್ನು ಉಪಯೋಗಿಸುವ ಮೂಲಕ ಚರ್ಮವ್ಯಾಧಿಗಳನ್ನು ಕಡಿಮೆಗೊಳಿಸಬಹುದಾಗಿದೆ ಎಂದರು.
ಗೋವರ್ಧನ ಗೋವಿಹಾರ ಧಾಮದ ಸಂಚಾಲಕ ಮಹಾಲಿಂಗೇಶ್ವರ ಭಟ್ಟ ಜೋಗಿಯಡ್ಕ, ಕಾಮದುಘಾ ಸಂಚಾಲಕ ಡಾ| ವೈ ವಿ ಕೃಷ್ಣಮೂತರ್ಿ, ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಗೋವಿಂದಬಳ್ಳಮೂಲೆ, ಉಪ್ಪನಂಗಡಿ ಹವ್ಯಕ ಮಂಡಲಾಧ್ಯಕ್ಷ ಅಶೋಕ ಕೆದ್ಲ, ಮುಳ್ಳೇರ್ಯ ಹವ್ಯಕ ಮಂಡಲಾಧ್ಯಕ್ಷ ಪ್ರೊ ಶ್ರೀಕೃಷ್ಣ ಭಟ್, ಗೋಶಾಲಾ ವಿಭಾಗ ಜೊತೆಕಾರ್ಯದಶರ್ಿ ಶ್ರೀಕೃಷ್ಣ ಭಟ್ ಮೀನಗದ್ದೆ, ಮಾಣೀಮಠದ ವ್ಯವಸ್ಥಾಪಕ ಹಾರಕೆರೆ ನಾರಾಯಣ ಭಟ್, ಕೃಷ್ಣಪ್ರಕಾಶ ಪೆಲತ್ತಡಿ, ಗೋಗ್ರಾಮ ಯೋಜನೆಯ ಕೋಶಾಧಿಕಾರಿ ಪರಮೇಶ್ವರ ಪೆರುಮುಂಡ, ಗೋಗ್ರಾಮ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಬದಿಯಡ್ಕ ಸಮೀಪದ ನೆಕ್ಕರೆಕಳೆಯ ಗೋವಿಜ್ಞಾನ ಅಧ್ಯಯನ ಕೇಂದ್ರ ಇವರ ಸಹಕಾರವೂ ಈ ಯೋಜನೆಯಲ್ಲಿದೆ.
   ಕೋಟ್ಸ್:
  ಸದ್ಯ ಚೊಕ್ಕಾಡಿ ಜೋಗಿಯಡ್ಕದ ಗೋವರ್ಧನ ಗೋವಿಹಾರಧಾಮದಲ್ಲಿ ಈ ದ್ರವರೂಪದ ಸಾಬೂನಿನ ಉತ್ಪಾದನೆಯು ನಡೆಯುತ್ತಿದ್ದು ದೇಶೀಯ ಗೋತಳಿಯನ್ನೇ ಸಾಕುವ ರೈತರ ಮನೆಯಿಂದ ಗೋಮೂತ್ರದ ಸಂಗ್ರಹಿಸುವ ಕಾರ್ಯ ಆರಂಭವಾಗಿರುತ್ತದೆ. ಇದು ಗೋವನ್ನು ಸಾಕುವ ರೈತರಿಗೆ ಅನುಕೂಲವಾಗಲಿದೆ. 
- ಮಹಾಲಿಂಗೇಶ್ವರ ಭಟ್ಟ ಜೋಗಿಯಡ್ಕ, ಗೋವರ್ಧನ ಗೋವಿಹಾರ ಧಾಮ, ಚೊಕ್ಕಾಡಿ. (ಸಂಚಾಲಕರು)
   * ಹೊಸನಗರ ಶ್ರೀರಾಮಚಂದ್ರಾಪುರ ಮಠದ ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ದಿವ್ಯ ಸಂಕಲ್ಪವಾದ ಪ್ರತೀಮನೆಯಲ್ಲಿ ದೇಶೀಯ ತಳಿಯ ಗೋವು ಆಥರ್ಿಕವಾಗಿ ಹೇಗೆ ಲಾಭದಾಯಕವಾಗಿ ನಡೆಸಬಹುದು ಎಂಬ ವಿಚಾರದಡಿಯಲ್ಲಿ ಭಾರತೀಯ ಗೋಗ್ರಾಮ ಯೋಜನೆಯು ಮುಂದೆ ಕಾರ್ಯನಿರ್ವಹಸಲಿರುವುದು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries