HEALTH TIPS

No title

                   ಮಕ್ಕಳಿಗೆ ಪೋಲಿಯೋ ಲಸಿಕೆ ವಿತರಣೆ
   ಕುಂಬಳೆ: ಕೇರಳದಲ್ಲಿ  ಮಕ್ಕಳಿಗೆ ಪಲ್ಸ್  ಪೋಲಿಯೋ ಲಸಿಕೆ ವಿತರಣೆ ಕಾರ್ಯಕ್ರಮವು ಮಾ.11ರಂದು ನಡೆಯಲಿದೆ. ರಾಜ್ಯದಲ್ಲಿ  5 ವರ್ಷಕ್ಕಿಂತ ಕೆಳಗಿನ 25,50,376 ಮಂದಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು.
    ಇದಕ್ಕಾಗಿ 24,439 ವ್ಯಾಕ್ಸಿನೇಶನ್ ಬೂತ್ಗಳನ್ನು  ಸ್ಥಾಪಿಸಲಾಗಿದೆ. ಅಲ್ಲದೆ ಟ್ರಾನ್ಸಿಟ್ ಬೂತ್ ಹಾಗೂ ಸಂಚಾರಿ ಬೂತ್ಗಳು ಕೂಡ ಇವೆ. ತರಬೇತಿ ಪಡೆದ ಆರೋಗ್ಯ ಸ್ವಯಂಸೇವಕರು ಮಾ.11ರಂದು ಬೆಳಗ್ಗೆ  8ರಿಂದ ಸಂಜೆ 5ಗಂಟೆಯ ತನಕ ಬೂತ್ಗಳಲ್ಲಿ  ಮಕ್ಕಳಿಗೆ ಲಸಿಕೆ ವಿತರಿಸಲಿದ್ದಾರೆ.
   ರೈಲು ನಿಲ್ದಾಣ ಸಹಿತ ಟ್ರಾನ್ಸಿಟ್ ಬೂತ್ಗಳು ಅಂದು ಬೆಳಗ್ಗೆ  8ರಿಂದ ರಾತ್ರಿ 8ಗಂಟೆಯ ವರೆಗೆ ಕಾಯರ್ಾಚರಿಸಲಿವೆ. ಯಾವುದಾದರೂ ಕಾರಣದಿಂದ ಮಕ್ಕಳಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ ಅಂತಹ ಮಕ್ಕಳನ್ನು  ಪತ್ತೆಹಚ್ಚಿ  ಮರುದಿನ ಲಸಿಕೆ ನೀಡುವ ವ್ಯವಸ್ಥೆ  ಕಲ್ಪಿಸಲಾಗಿದೆ.
   ಜಿಲ್ಲೆಯಲ್ಲಿ  1.22 ಲಕ್ಷ  ಮಕ್ಕಳು : ಕಾಸರಗೋಡು ಜಿಲ್ಲೆಯಲ್ಲಿ  ಮಾ.11ರಂದು ಬೆಳಗ್ಗೆ  8ರಿಂದ ಸಂಜೆ 5ಗಂಟೆಯ ವರೆಗೆ ಪೋಲಿಯೋ ಲಸಿಕೆ ವಿತರಣೆ ನಡೆಯಲಿದ್ದು, ಇದಕ್ಕಾಗಿ 1190 ಬೂತ್ಗಳನ್ನು  ಏರ್ಪಡಿಸಲಾಗಿದೆ. ಆಸ್ಪತ್ರೆಗಳು, ಸಬ್ ಸೆಂಟರ್ಗಳು, ಅಂಗನವಾಡಿಗಳು, ರೈಲು ಮತ್ತು  ಬಸ್ ನಿಲ್ದಾಣಗಳಲ್ಲಿ  ಲಸಿಕೆ ವಿತರಣೆ ಬೂತ್ಗಳನ್ನು  ಆಯೋಜಿಸಲಾಗುವುದು. 
   ಇದಲ್ಲದೆ 141 ಸಂಚಾರಿ ಬೂತ್ಗಳನ್ನು  ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ  ಐದು ವರ್ಷಕ್ಕಿಂತ ಕೆಳಪ್ರಾಯದ 1,22,202 ಮಂದಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮಾ.11ರಂದು ಲಸಿಕೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಮಾ.12, 13 ಮತ್ತು  14ರಂದು ಲಸಿಕೆ ವಿತರಿಸುವ ಸೌಕರ್ಯವನ್ನು  ಹಮ್ಮಿಕೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries