HEALTH TIPS

No title

                  ಮಾ.18 : ಕಾಸರಗೋಡಿನಲ್ಲಿ ಕನ್ನಡ ಚಿಂತನೆ
                  ಕನ್ನಡ ಕಲಿಕಾ ಕಾಯರ್ರ್ಾಗಾರ ಸಮಾರೋಪ
    ಕಾಸರಗೋಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ  ಅಪೂರ್ವ ಕಲಾವಿದರು ಕಾಸರಗೋಡು ಇದರ ಸಹಯೋಗದೊಂದಿಗೆ  ಪ್ರತಿ ತಿಂಗಳು ನಡೆಯುತ್ತಿರುವ ಕನ್ನಡ ಚಿಂತನೆ ಕಾರ್ಯಕ್ರಮ ಮತ್ತು ಕಾಸರಗೋಡಿನ ಮಲೆಯಾಳ ಪತ್ರಕರ್ತರಿಗೆ ಕನ್ನಡ ಕಲಿಸುವ ವಿಶೇಷ ಯೋಜನೆಯ ಸಮಾರೋಪ ಸಮಾರಂಭವು ಮಾ.18 ರಂದು ನಗರದ ಹೊಸ ಬಸ್ ನಿಲ್ದಾಣ ಸಮೀಪದ ಕಾಸರಗೋಡು ಸವರ್ೀಸ್ ಕೋ ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ಅಪರಾಹ್ನ 2ರಿಂದ ನಡೆಯಲಿದೆ.
   ಕಳೆದ ಎರಡೂವರೆ ವರ್ಷಗಳಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ಔಚಿತ್ಯಪೂರ್ಣವಾಗಿ ಮತ್ತು ಅರ್ಥಪೂರ್ಣವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ಚಿಂತನೆ ಕಾರ್ಯಕ್ರಮವು ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದು ಪ್ರಾಧಿಕಾರದ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಕಾಸರಗೋಡಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ಈಗಾಗಲೇ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಕಾರ್ಯಕ್ರಮವನ್ನು ಪ್ರತಿ ತಿಂಗಳು ಹಮ್ಮಿಕೊಂಡು ಬರುತಿದ್ದು, ವಿಶೇಷೋಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ್ನಣೆಯನ್ನು ಪಡೆದಿದೆ.
ಕಾಸರಗೋಡಿನ ಮಲೆಯಾಳ ಪತ್ರಕರ್ತರಿಗೆ ಕನ್ನಡ ಕಲಿಸುವ ಯೋಜನೆಯ ಮೂಲಕ ಇಲ್ಲಿನ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಆಳವಾದ ಅರಿವನ್ನು ಮಲೆಯಾಳ ಪತ್ರಕರ್ತರಿಗೆ ತಿಳಿಸುವ ಮೂಲಕ ಇಲ್ಲಿ ಕನ್ನಡ ಭಾಷೆ ಸಾಹಿತ್ಯ ಸದಾ ಕಾಲ ಉಳಿಯಬೇಕಾದ ಅನಿವಾರ್ಯತೆಯನ್ನು ಅವರಿಗೆ ತಿಳಿಸಿಕೊಡುವ ಪ್ರಯತ್ನ ಈ ಯೋಜನೆಯ ಹಿಂದಿದೆ. ಆ ಮೂಲಕ ಮಲೆಯಾಳಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವು ಈ ಯೋಜನೆಯಿಂದ ಸಾಕಾರಗೊಂಡಿದೆ.
   ಮಾಚರ್್ 18ರಂದು  ಅಪರಾಹ್ನ 2 ಗಂಟೆಗೆ ನಡೆಯುವ ಕನ್ನಡ ಚಿಂತನೆ ಮತ್ತು ಕನ್ನಡ ಕಲಿಕಾ ಕಾಯರ್ಾಗಾರದ ಸಮಾರೋಪ ಸಮಾರಂಭವನ್ನು ಕಾಸರಗೋಡು ಪ್ರೆಸ್ ಕ್ಲಬ್ನ ಅಧ್ಯಕ್ಷ ಟಿ.ಎ.ಶಾಫಿ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದಶರ್ಿ ಡಾ|ಕೆ.ಮುರಳಿಧರ ಅವರು ಪ್ರಮಾಣ ಪತ್ರ ವಿತರಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಂಶೋಧನ ವಿದ್ಯಾಥರ್ಿ ರವಿಶಂಕರ ಜಿ.ಕೆ. ಅವರು `ಕೀರ್ತನೆಗಳಲ್ಲಿ ಸಂಸ್ಕೃತಿ ಚಿಂತನೆ' ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡುವರು. ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ್ ಸಾಲಿಯಾನ್ ಎಂ, ಕಾರ್ಯದಶರ್ಿ ಡಾ|ರತ್ನಾಕರ ಮಲ್ಲಮೂಲೆ, ಕನ್ನಡ ಚಿಂತನೆ ಕಾರ್ಯಕ್ರಮ ಸಂಯೋಜಕ ಎಸ್.ಜಗನ್ನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಾಸ ಸಂಕೀರ್ತನೆ ನಡೆಯಲಿದ್ದು, ರಾಜ್ಯಪ್ರಶಸ್ತಿ ವಿಜೇತ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ಚಂದ್ರ ಅವರು ನಡೆಸಿಕೊಡುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries