HEALTH TIPS

No title

        ಪೆರಿಂಗಡಿಯಲ್ಲಿ ಇಂದು ಐತಿಹಾಸಿಕ ಅಷ್ಟಪವಿತ್ರ ನಾಗಮಂಡಲೋತ್ಸವ=ಸಿದ್ದತೆಗಳು ಪೂರ್ಣ
    ಉಪ್ಪಳ:  ಉಪ್ಪಳ ಮಂಗಲ್ಪಾಡಿಯ ಪೆರಿಂಗಡಿ ಶ್ರೀಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನದಲ್ಲಿ ಸಪರ್ಾದಿಷ್ಟಕುಲ ನಾಗದೇವರ ಮಹಾ ಮಹೋತ್ಸವ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಗಡಿನಾಡು ಕಾಸರಗೋಡಿಗೆ ಬಹು ಅಪೂರ್ವವಾದ ಅಷ್ಟಪವಿತ್ರ ನಾಗಮಂಡಲೋತ್ಸವವು ಇಂದು (ಮಂಗಳವಾರ) ನಡೆಯಲಿದ್ದು ಸಮಾರಂಭದ ಯಶಸ್ವಿಗೆ ಸಿದ್ದತೆಗಳು ಪೂರ್ಣಗೊಂಡಿದೆ.
  ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ 6ಕ್ಕೆ ನಿತ್ಯಪೂಜೆ, 6.30ರಿಂದ ಪುಣ್ಯಾಹ, ಗಣಹೋಮ, ಶಾಸ್ತಾರ ದೇವರಿಗೆ ನವಕ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಿತು. ಬಳಿಕ 7 ರಿಂದ ಮೃತ್ಯುಂಜಯ ಯಾಗಾರಂಭ, 8ಕ್ಕೆ ಆಶ್ಲೇಷ ಬಲಿ ಪೂಜೆ, ಬ್ರಾಹ್ಮಣ ವಟು ಆರಾಧನೆ, ಕನ್ನಿಕಾರಾಧನೆಗಳು ನಡೆಯಿತು. 9ಕ್ಕೆ ಪರಿವಾರ ದೇವತೆಗಳಿಗೆ ತಂಬಿಲ, 11.30ಕ್ಕೆ ಮೃತ್ಯುಂಜಯ ಯಾಗದ ಪೂಣರ್ಾಹುತಿ, ನಾಗತಂಬಿಲ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 5 ರಿಂದ 8ರ ತನಕ ಭಜನಾ ಸಂಕೀರ್ತನೆ ವಿವಿಧ ತಂಡಗಳಿಂದ ನಡೆಯಿತು. 6 ರಿಂದ ನಾಗಮಂಡಲ ಮಂಟಪದಲ್ಲಿ ಸಪ್ತಶುದ್ದಿ, ಪುಣ್ಯಾಹ, ಪ್ರಾಸಾದ ಶುದ್ದಿ, ರಾಕ್ಷೊಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ದಿಕ್ಪಾಲಕ ಬಲಿ, ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ಲತಾ ಕೇಶವ ಭಟ್ ಎಡಕ್ಕಾನ ಮತ್ತು ದಿವ್ಯಾ ಕಾರಂತ ಪರಂಕಿಲ ಮತ್ತು ಬಳಗದವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು.
   ಇಂದಿನ ಕಾರ್ಯಕ್ರಮ(ಮಂಗಳವಾರ):
  ಬೆಳಿಗ್ಗೆ 7ಕ್ಕೆ ನಿತ್ಯಪೂಜೆ, 7.30 ರಿಂದ ಪುಣ್ಯಾಹ, ಗಣಹೋಮ, ನವಕ ಕಲಶಾಭಿಷೇಕ, 8ಕ್ಕೆ ಚಂಡಿಕಾ ಯಾಗಾರಂಭ, 11.30ಕ್ಕೆ ಪರಿವಾರ ದೇವತೆಗಳಿಗೆ ತಂಬಿಲ, 12ಕ್ಕೆ ಚಂಡಿಕಾ ಯಾಗದ ಪೂಣರ್ಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ರಿಂದ 6ರ ತನಕ ಭಜನೆ, ಸಂಜೆ 5.30 ರಿಂದ ದ್ರವ್ಯ ಜೋಡಣೆ, ತನುತರ್ಪಣ, ಹಾಲಿಟ್ಟು ಸೇವೆ ನಡೆಯಲಿದೆ. 6 ರಿಂದ ನಡೆಯುವ ಧಾಮರ್ಿಕ ಸಭೆಯಲ್ಲಿ ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಆಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡುವರು. ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಉಪಸ್ಥಿತರಿರುವರು. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾ.ಗಣೇಶ್ ಕಾಣರ್ಿಕ್, ಚಂದ್ರಪ್ರಸಾದ್ ಶೆಟ್ಟಿ ತುಂಬೆ, ಕುಸುಮೋದರ ಡಿ.ಶೆಟ್ಟಿ, ಅಣ್ಣಿ ಸಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಿ.ರಘುನಾಥ ಸೋಮಯಾಜಿ, ಕುಂಟಾರು ರವೀಶ ತಂತ್ರಿ, ಸಂಜೀವ ಶೆಟ್ಟಿ, ಮೋನಪ್ಪ ಭಂಡಾರಿ, ಡಾ.ಬಿ.ಎಸ್.ರಾವ್, ಡಾ.ಅನಂತ ಕಾಮತ್, ಅಂಗಾರ ಶ್ರೀಪಾದ, ಚೇತನಾ ಎಂ ಮೊದಲಾದವರು ಉಪಸ್ಥಿತರಿರುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾಮರ್ಿಕ ಉಪನ್ಯಾಸ ನೀಡುವರು.
   ರಾತ್ರಿ 10 ರಿಂದ ಶ್ರೀಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದ್ದು,ತಂತ್ರಿವರ್ಯ ಬ್ರಹ್ಮಶ್ರೀ ಬಂಬ್ರಾಣ ಶಂಕರನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ  ಸಗ್ರಿ ಗೋಪಾಲಕೃಷ್ಣ ಸಾಮಗ ಹಾಗೂ ಮದ್ದೂರು ಬಾಲಕೃಷ್ಣ ವೈದ್ಯ ತಂಡ ನಾಗಮಂಡಲೋತ್ಸವ ನಡೆಸುವರು. ಬಳಿಕ ಮಂತ್ರಾಕ್ಷತೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ ನಡೆಯಲಿದೆ.
   ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ರಿಂದ 3ರ ವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
     ಸಿದ್ದತೆಗಳು:
   ಈಗಾಗಲೇ ಸ್ಥಳೀಯ ಸ್ವಯಂಸೇವಕರು ಪೆರಿಂಗಡಿಯ ವಿಶಾಲ ಗದ್ದೆಯಲ್ಲಿ 10 ಸಾವಿರ ಮಂದಿಗೆ ಕುಳಿತು ಭಕ್ತಿ ಪುರಸ್ಸರವಾದ ಸಮಾರಂಭ ವೀಕ್ಷಿಸಲು ವ್ಯವಸ್ಥೆಮಾಡಲಾಗಿದೆ. ಶಾಮಿಯಾನ, ಕುಚರ್ಿಗಳನ್ನು ಇರಿಸಲಾಗಿದೆ. ಆಹಾರ, ನೀರು ಪೂರೈಕೆಗೆ ಸಿದ್ದತೆಗಳನ್ನು ಮಾಡಲಾಗಿದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries