HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪಯಸ್ವಿನಿಗೆ ಚೆಕ್ ಡಾಂ;  ಅಂತಿಮಗೊಳ್ಳದ ಟೆಂಡರ್;  ಬೆಳ್ಳೂರಿಗೆ ಕುಡಿಯುವ ನೀರು ಸರಬರಾಜು ನನೆಗುದಿಗೆ
      ಮುಳ್ಳೇರಿಯ: ಪಯಸ್ವಿನಿ ನದಿಯ ನೀರನ್ನು ಕುಂಟಾರು ಪ್ರದೇಶದಿಂದ ಹಾಯಿಸುವ ಜಲನಿಧಿ ಯೋಜನೆಯ ಕಾಮಗಾರಿಗಳು ಬಹುತೇಕ ಪೂತರ್ಿಗೊಂಡರೂ ಪಯಸ್ವಿನಿ ನದಿಗೆ ಕುಂಟಾರಿನಲ್ಲಿ ಚೆಕ್ ಡಾಂ ನಿಮರ್ಾಣ ನೆನೆಗುದಿಗೆ ಬಿದ್ದ ಕಾರಣ ನೀರು ಸರಬರಾಜು ಯೋಜನೆ ಕನಸಾಗಿಯೇ ಉಳಿದಿದೆ.
   ಜಲನಿಧಿ ಚೆಕ್ ಡಾಂ ನಿಮರ್ಾಣಕ್ಕಾಗಿ ಜಲನಿಧಿ ಹಣ ಬಿಡುಗಡೆಗೊಳಿಸಿದರೂ  ಟೆಂಡರ್ ಕಾರ್ಯಚಟುವಟಿಕೆಗಳು ಇನ್ನೂ ಪೂತರ್ಿಯಾಗದ ಕಾರಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಚೆಕ್ ಡಾಂ ನಿಮರ್ಿಸದೆ ಜಲ ವಿತರಣೆ ಆರಂಭಿಸ ಬಾರದು ಎಂಬ ತೀಮರ್ಾನದ ಹಿನ್ನೆಲೆಯಲ್ಲಿ ಬೆಳ್ಳೂರಿಗೆ ಜಲ ವಿತರಣೆ ಈ ವರ್ಷವಂತೂ ನಡೆಯದು. ಬೇಸಗೆಯಲ್ಲಿ ಪಯಸ್ವಿನಿಯು ಬತ್ತಿ ಕುಂಟಾರಿನ ಜನರೂ ನೀರಿಗಾಗಿ ಒದ್ದಾಡ ಬೇಕಾಗುತ್ತಿರುವ ಹಿನ್ನೆಲೆಯಲ್ಲಿ ಜಲ ವಿತರಣಾ ಯೋಜನೆಯ ಬಾವಿ ತೋಡಿದ ಸ್ಥಳಕ್ಕಿಂತ ಕೆಳ ಭಾಗದಲ್ಲಿ,  ತೂಗು ಸೇತುವೆಗಿಂತ 75 ಮೀಟರ್ನಷ್ಟು ದೂರದಲ್ಲಿ ಚೆಕ್ ಡಾಂ ನಿಮರ್ಿಸಲು ಉದ್ಧೇಶಿಸಲಾಗಿದೆ. ಇದರ ಸ್ಥಳ ಪರಿಶೀಲನೆಯು ಕಳೆದ ವರ್ಷ ಬೇಸಗೆಯಲ್ಲಿಯೇ ನಡೆದಿತ್ತು. ಎರಡು ಮೀಟರ್ ಎತ್ತರದ, ನೀರನ್ನು ತಡೆದು ನಿಲ್ಲಿಸುವ ಕಾಂಕ್ರೀಟ್ ತಡೆಗೋಡೆಯನ್ನು ನಿಮರ್ಿಸಲು ಯೋಜನೆ ತಯಾರಿಸಲಾಗಿದೆ. ಇದರ ಉದ್ದ 93 ಮೀಟರ್. ಪೈಬರ್ ಹಲಗೆಗಳನ್ನು ಉಪಯೋಗಿಸಿ ಇದರ ಕಾರ್ಯ ನಿರ್ವಹಣೆ ನಡೆಯಲಿದೆ. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಆಡಳಿತಾನುಮತಿ ಲಭಿಸಿದ್ದರೂ ಇದರ ಟೆಂಡರ್ ಇನ್ನೂ ಪೂತರ್ಿಗೊಂಡಿಲ್ಲ. ಹೀಗಾಗಿ ಈ ಬೇಸಗೆಯಲ್ಲಿ ಇದರ ಕಾಮಗಾರಿ ಆರಂಭಗೊಳ್ಳುವುದು ಕಷ್ಟಸಾಧ್ಯ. ಅಂದರೆ ಮುಂದಿನ ಮಳೆಗಾಲ ಕಳೆದು ಕಾಮಗಾರಿ ಆರಂಭಗೊಂಡರೂ ಆರಂಭಗೊಳ್ಳಬಹುದು. ಅದು ಒಂದು ವರ್ಷದಲ್ಲಿ ಕಾಮಗಾರಿ ಪೂತರ್ಿಗೊಳ್ಳುವ ಕೆಲಸವಾಗಿರಲಾರದು. ಅಂದರೆ ಇನ್ನು ಒಂದು ವರ್ಷಕ್ಕೆ ಬೆಳ್ಳೂರಿಗೆ ಜಲ ವಿತರಣೆ ನಡೆಯಲಾರದು ಎಂದರೆ ತಪ್ಪಾಗಲಾರದು.
    ಬೆಳ್ಳೂರು ಗ್ರಾಮ ಪಂಚಾಯತಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು  ಸಮಗ್ರವಾಗಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಿಶ್ವ ಬ್ಯಾಂಕಿನ ನೆರವಿನೊಂದಿಗೆ ರಾಜ್ಯ ಸರಕಾರ, ಗ್ರಾಮ ಪಂಚಾಯತು ಆಥರ್ಿಕ ಸಹಾಯದೊಂದಿಗೆ ಬೆಳ್ಳೂರು ಗ್ರಾಮ ಪಂಚಾಯತಿನ 13 ವಾಡರ್ುಗಳ 1126 ಕುಟುಂಬಗಳಿಗೆ ಕುಡಿಯುವ ನೀರನ್ನು ಒದಸುವ  ಸಲುವಾಗಿ 7.37 ಕೋಟಿ ರೂಪಾಯಿ ವೆಚ್ಚದ ಬೃಹತ್ತ್ ಕುಡಿಯುವ ನೀರಿನ ಯೋಜನೆ ಇದಾಗಿದೆ. ಯೋಜನೆಯಂತೆ ಕಾರಡ್ಕ ಗ್ರಾಮ ಪಂಚಾಯತಿಗೆ ಸೇರಿದ ಕುಂಟಾರು ಶ್ರೀ ಕ್ಷೇತ್ರ ಸಮೀಪದಲ್ಲಿ ಹರಿಯುವ ಪಯಸ್ವಿನಿ ನದಿಯಿಂದ ನೀರನ್ನು, ನದಿಗೆಹೊಂದಿಕೊಂಡು ಬೃಹತ್ತ್ ಬಾವಿಯೊಂದನ್ನು ಕೊರೆದು, ಇದಕ್ಕೆ 50 ಅಶ್ವಶಕ್ತಿಯ ನೀರೆತ್ತುವ ಪಂಪನ್ನು ಜೋಡಿಸಿ, ಕುಂಟಾರು-ಮಾಯಿಲಂಕೋಟೆ ಮೂಲಕ ಮಿಂಚಿಪದವಿನಲ್ಲಿ ನಿಮರ್ಿಸುವ ಸಂಗ್ರಹಣಾ ಟ್ಯಾಂಕಿಯಲ್ಲಿ ಶೇಖರಿಸಿ ಅಲ್ಲಿಂದ ಬೆಳ್ಳೂರನ್ನು ತಲಪಿಸುವ ಯೋಜನೆ ಇರಿಸಲಾಗಿದೆ. ಇದಕ್ಕಾಗಿ ಸುಮಾರು 10ಕಿ.ಮೀ. ಉದ್ದಕ್ಕೆ ಕೊಳವೆಯನ್ನು ಜೋಡಿಸಬೇಕಾಗಿದೆ. ಗ್ರಾಮೀಣ ಪ್ರದೇಶವಾಗಿರುವ ಬೆಳ್ಳೂರು ಗ್ರಾಮ ಪಂಚಾಯತಿಗೆ ಈ ಕುಡಿಯುವ ನೀರಿನ ಯೋಜನೆ ವರದಾನವಾಗಬಹುದು. ಇಲ್ಲಿನ ಬಹಳಷ್ಟು ಕುಟುಂಬಗಳು ಬೇಸಗೆ ಬಂತೆಂದರೆ ನೀರಿಗಾಗ ಒದ್ದಾಟ, ಅರಂಭವಾಗುತ್ತದೆ. ಪಲರ್ಾಂಗುಗಳ ತನಕ ನೀರಿಗಾಗಿ ಸಾಗ ಬೇಕಾದ ಪರಿಸ್ಥಿತಿ ಎದುರಾಗ ಬೇಕಾಗುತ್ತದೆ.ಕಾಲನಿ ನಿವಾಸಿಗಳು ಸಹ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಿಂಚಿಪದವಿನಲ್ಲಿ ಎರಡೂವರೆ ಲಕ್ಷ  ಲೀಟರ್ ಸಾಮಾಥ್ರ್ಯದ ನೀರು ಸಂಗ್ರಹಣಾ ಟ್ಯಾಂಕಿ ನಿಮರ್ಾಣ ನಡೆಯಲಿದೆ. ಇಲ್ಲಿಂದ ಕಿರು ನೀರು ಸಂಗ್ರಾಹಕಗಳಿಗೆ ವಿತರಿಸಿ, ಅಲ್ಲಿಂದ ಮನೆಮನೆಗೂ ನೀರು ಒದಗಿಸುವ ಯೋಜನೆ ಇದಾಗಿದೆ. ಕೊಳವೆ ಜೋಡಿಸುವ ಕಾಮಗಾರಿಯೂ ನಡೆಯಬೇಕಿದೆ. 7.37 ಕೋಟಿ ರೂಪಾಯಿಯ ಈ ಯೋಜನೆಯಂತೆ 15 ಶೇಕಡಾ ಖರ್ಚನ್ನು  ಗ್ರಾಮ ಪಂಚಾಯತು, 10 ಶೇಕಡಾ ಖರ್ಚನ್ನು ಫಲಾನುಭವಿಗಳು ಭರಿಸಲಿದ್ದಾರೆ.
    ಈ ಯೋಜನೆಯ ಕಾಮಗಾರಿಯನ್ನು 2014, ಎಪ್ರಿಲ್ ತಿಂಗಳಲ್ಲಿಯೇ ಆರಂಭಿಸಲಾಗಿತ್ತು. ಕುಂಟಾರಿನ ಜನರ ವಿರೋಧದ ಕಾರಣದಿಂದಾಗಿ ಬಾವಿಕೊರೆಯುವ ಕಾಮಗಾರಿಯನ್ನು ನಿಲ್ಲಿಸಬೇಕಾಯಿತು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕೃತರು ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದರು. ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾಡರ್್ ನೇತೃತ್ವದಲ್ಲಿ ಚೆಕ್ ಡೇಮ್ ನಿಮರ್ಿಸಲು ನಿರ್ಧರಿಸಲಾಯಿತು. ಇದರ ಸ್ಥಳ ಪರಿಶೋಧನೆ ನಡೆಸಿ ನಿಮರ್ಾಣಕ್ಕೆ ಅಂಗೀಕಾರ ಲಭಿಸಿದ್ದರೂ ಈ ತನಕ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ.
    ಕುಂಟಾರು ಪ್ರದೇಶದಲ್ಲಿ ಪಯಸ್ವಿನಿ ನದಿಗೆ ಹೊಂದಿಕೊಂಡು ಬೃಹತ್ತ್ ಪಂಪಿಂಗ್ ಕೇಂದ್ರ ತಯಾರಾಗಿದೆ. ಇದರ ಕಾಮಗಾರಿಯೂ ನಿಧಾನಗತಿಯಲ್ಲಿ ನಡೆದರೂ ಈಗಲಾದರೂ ತಲೆ ಎತ್ತಿ ನಿಂತಿದೆ. ಇದರಲ್ಲಿ ಅಗತ್ಯವಾದ ಯೋಜನೆಗೆ ನೀರು ಹಾಯಿಸುವ ಮೋಟಾರನ್ನು ಜೋಡಿಸಲಾಗುವುದು. ವಿದ್ಯುತ್ತ್ ಸಂಪರ್ಕಕ್ಕಾಗಿ ತಂತಿಯನ್ನು ಜೋಡಿಸುವ ಕಾಮಗಾರಿಯೂ ಬಹುತೇಕ ಪೂತರ್ಿಗೊಂಡಿದೆ. ಕೊಳವೆ ಜೋಡಿಸುವ ಕೆಲಸವೂ ಪೂತರ್ಿಗೊಂಡಿದೆ. ಆದರೆ ಬಹು ನಿರೀಕ್ಷೆಯಲ್ಲಿರುವ ಈ ನೀರಿನ ಯೋಜನೆಯಿಂದ ನೀರು ಪಡೆಯಲು ಬೆಳ್ಳೂರಿನ ಜನತೆ ಕಾದಿದ್ದಾರೆ.
  ಏನಂತಾರೆ:
   ಜಲನಿಧಿ ಯೋಜನೆ ಸಾಕಾರಗೊಳ್ಳಲು ಪಯಸ್ವಿನಿಗೆ ಚೆಕ್ ಡ್ಯಾಂ ನಿಮರ್ಿಸದ ಹೊರತು ಪ್ರಯೋಜನವಾಗದು. ಈ ಬಗ್ಗೆ ವಿಶ್ವ ಬ್ಯಾಂಕಿಗೆ ಮನವಿ ನೀಡಿದ್ದು, ಆದರೆ 3 ಕೋಟಿಗಿಂತಲೂ ಹೆಚ್ಚು ವೆಚ್ಚದಾಯಕವಾದ ಮೊತ್ತ ನೀಡಲು ವಿಶ್ವ ಬ್ಯಾಂಕ್ ಮುಂದೆ ಬಾರದಿರುವುದರಿಂದ ಯೋಜನೆ ಈ ವರ್ಷ ಜಾರಿಗೊಳ್ಳುವಲ್ಲಿ ಸೋತಿದ್ದು, ಮುಂದೆ ಶಾಸಕರಿಗೆ ಮನವಿ ನೀಡಿ ರಾಜ್ಯ ಕಿರು ನೀರಾವರಿ ಇಲಾಖೆಯ ನಿಧಿ ಮಂಜೂರುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ವರ್ಷದ ನೀರಿನ ಲಭ್ಯತೆಗಾಗಿ ಕೀಯೋಸ್ಕ್ ಯೋಜನೆ ಮತ್ತು ಇತರ ವಿಧಾನಗಳ ಮೂಲಕ ಜಲಪೂರೈಕೆಗೆ ಚಾಲನೆ ನೀಡಲಾಗುವುದು.
             ಲತಾ.
         ಅಧ್ಯಕ್ಷೆ ಬೆಳ್ಳೂರು ಗ್ರಾಮ ಪಂಚಾಯತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries