HEALTH TIPS

No title

          ಬೇಂಗಪದವು ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವ
   ಪೆರ್ಲ: ಬೇಂಗಪದವು ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
   ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾಥರ್ಿಗಳು, ಬೇಂಗಪದವು, ಸೇರಾಜೆ, ಬಜಕೂಡ್ಲು, ಪೆರ್ಲ ಅಂಗನವಾಡಿಗಳ ಮಕ್ಕಳು ಮತ್ತು ಬಾಲಭಾರತಿ ವಿದ್ಯಾಕೇಂದ್ರ ಪೆರ್ಲ ಇಲ್ಲಿನ ಪುಟಾಣಿಗಳು ಭಾಗವಹಿಸಿದರು.
   ಶಾಲಾ ವ್ಯವಸ್ಥಾಪಕ ರಾಧಾಕೃಷ್ಣ ಅಡ್ಯಂತಾಯ ರು ಅಧ್ಯಕ್ಷತೆ ವಹಿಸಿ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯರ ವಿಭಾಗದ ಕನ್ನಡ ಸ್ಪಧರ್ೆಗಳಲ್ಲಿ ಶಾಲೆ ಚಾಂಪಿಯನ್ ಆಗಿ ಮೂಡಿಬರಲು ಕಾರಣರಾದ ವಿದ್ಯಾಥರ್ಿಗಳು ಮತ್ತು ಶಿಕ್ಷಕರ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಶಾಲೆಯ ಅತ್ಯುತ್ತಮ ಸಾಧನೆಯನ್ನು ಈ ಸಂದರ್ಭದಲ್ಲಿ ಕೊಂಡಾಡಿದರು.
   ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ. ಅವರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು. ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸಮೂತರ್ಿ ಶಾಲೆಯ ಅಭಿವೃದ್ಧಿಯಲ್ಲಿ ರಕ್ಷಕ ಶಿಕ್ಷಕ ಸಂಘ ಅತ್ಯುತ್ತಮ ರೀತಿಯಲ್ಲಿ ಸಹಕರಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಬಿ. ಶಾಲೆಯ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಮತ್ತು ಮಾತೃ ಸಂಘದ ಅಧ್ಯಕ್ಷೆ ರೇಖಾ ಕೆ.ಎಸ್. ಉಪಸ್ಥಿತರಿದ್ದರು.
   ಕಳೆದ ಮಾಚರ್್ ತಿಂಗಳಲ್ಲಿ ನಡೆದ ಕೇರಳ ಹತ್ತನೇ ತರಗತಿಯ ಅತ್ಯಧಿಕ ಎ ಗ್ರೇಡ್ಗಳನ್ನು ಪಡೆದ ಶಾಲೆಯ ಹಿರಿಯ ವಿದ್ಯಾಥರ್ಿನಿಯರಾದ ಅಶ್ವಿತಾ ಬಿ.ಜಿ. ಹಾಗೂ ಡ್ಯಾಪ್ನಿ ಗೋರಿಟಾ ಡಿ'ಸೋಜ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
   ವಾಷರ್ಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಧ್ಯಾಪಕಿ ಯಕ್ಷಿತಾ ಪ್ರಾಥರ್ಿಸಿದರು. ಮುಖ್ಯೋಪಾಧ್ಯಾಯ ಶಿವಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಅಧ್ಯಾಪಿಕೆ ನಳಿನಿ ವಂದಿಸಿದರು. ಶಿಕ್ಷಕಿ  ಹರಿಣಾಕ್ಷಿ ಬಿ. ಕಾರ್ಯಕ್ರಮ ನಿರೂಪಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries