ಸರಕಾರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಾಸರಗೋಡು: ಕರ್ಣನ ಆದರ್ಶ ವ್ಯಕ್ತಿತ್ವ, ತನ್ನ ಜೀವನದುದ್ದಕ್ಕೂ ಆತ ತೆಗೆದುಕೊಂಡ ನಿಲುವು ಪ್ರಸ್ತುತ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಾ. ಬೇ.ಸಿ.ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಘದ ನೇತೃತ್ವದಲ್ಲಿ ಕನ್ನಡ ವಿಭಾಗ ಸಭಾಂಗಣದಲ್ಲಿ ಕುಮಾರವ್ಯಾಸ ಭಾರತದಲ್ಲಿ ಕರ್ಣ ಎಂಬ ವಿಷಯದ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕರ್ಣನ ಆದರ್ಶ, ವ್ಯಕ್ತಿತ್ವ, ಆತ ತನ್ನ ಜೀವನದುದ್ದಕ್ಕೂ ತೆಗೆದುಕೊಂಡ ನಿಲುವು ಆತನನ್ನು ದುರಂತ ನಾಯಕ ಎಂಬ ಹಣೆಪಟ್ಟಿಗೆ ತಳ್ಳುವಂತಾಗಿಸಿತು. ಆದರೆ ಆತನ ಜೀವನದ ಮೌಲ್ಯಗಳು ಯುವಪೀಳಿಗೆಗೆ ಮಾದರಿ ಎಂದು ಅವರು ಹೇಳಿದರು.
ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದಶರ್ಿ ರಾಜಾರಾಮ ಸ್ವಾಗತಿಸಿ, ಸುಶ್ಮಿತಾ ಶೆಟ್ಟಿ ವಂದಿಸಿದರು. ಶ್ರಾವ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿ ವೃಂದ ಬಿ. ಜಿ. ಪ್ರಾರ್ಥನೆ ಹಾಡಿದರು.