ದೀನಬಂಧು, ಕೊಡುಗೈ ದಾನಿ ಸಾಯಿರಾಂ ಭಟ್ಟರಿಗೆ ಹುಟ್ಟೂರ ಸನ್ಮಾನ
ಅಭಿನಂದನೆಯ ಮಹಾಪೂರ
ಬದಿಯಡ್ಕ: ನ್ ಸಾಯಿರಾಂ ಭಟ್ಟರ ಸಮಾಜಪರ ಕಾಳಜಿ ಮತ್ತು ಸೇವೆಯು ಮಾದರಿ ಮಾತ್ರವಲ್ಲದೆ ಸ್ಮರಣೀಯವಾದುದು. ಜಾತಿ, ಮತ, ಧಮರ್ಾತೀತವಾಗಿರುವ ಅವರ ಸೇವೆಯು ಸುತ್ಯರ್ಹ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಅವರ ಜೀವನವು ಎಲ್ಲರಿಗೂ ಮಾರ್ಗದಶರ್ಿಯಾಗಿದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೀನಬಂಧು, ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರಿಗೆ ಹುಟ್ಟೂರ ಪೌರ ಸನ್ಮಾನ ಕಾರ್ಯಕ್ರಮವನ್ನು ಬದಿಯಡ್ಕದ ಸರಕಾರಿ ಶಾಲಾ ಸಭಾಂಗಣದಲ್ಲಿ ಗುರುವಾರ ಅಪರಾಹ್ನ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಿಂದ ಸಮಾಜಪರ ಸೇವೆಗಾಗಿ ಪದ್ಮ ಪ್ರಶಸ್ತಿಗೆ ಹೆಸರನ್ನು ನೊಂದಾಯಿಸಲ್ಪಟ್ಟ ಕಾಸರಗೋಡಿನ ಏಕೈಕ ವ್ಯಕ್ತಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರು. ಆದರೆ ಎರಡು ಬಾರಿಯೂ ಈ ಪ್ರತಿಷ್ಠಿತ ಪ್ರಶಸ್ತಿಯಿಂದ ಅವರು ವಂಚಿತರಾಗಿದ್ದಾರೆ. ಅವರ ಅವಿರತ ಸಮಾಜಮುಖಿ ಕಾಳಜಿ ಮತ್ತು ಸೇವೆಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬರಲಿ ಎಂದು ಹಾರೈಸಿದರು. 250 ನೇ ಮೆನೆಯ ಕೀಲಿ ಕೈ ಹಸ್ತಾಂತರಿಸುವ ಕಾರ್ಯಕ್ರಮ ತುಳುನಾಡಿನ ಇತಿಹಾಸದಲ್ಲಿ ಮರೆಯಲಾಗದ ಅತ್ಯಪೂರ್ವ ಕ್ಷಣವಾಗಿದೆ ಎಂದರು.ಆರೋಗ್ಯ, ಉದ್ಯೋಗ, ವಸತಿ, ಕುಡಿ ನೀರು ಪೂರೈಕೆ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಯಿರಾಂ ಭಟ್ಟರು ಚಿರಸ್ಮರಣೀಯರು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರಿಗೆ ಹುಟ್ಟೂರ ಸನ್ಮಾನದ ಗೌರವ ಜೌಚಿತ್ಯಪೂರ್ಣವಾಗಿದೆ. ಅವರ ನಿಮರ್ಿಸಿ ಕೊಡುತ್ತಿರುವ 250 ನೇ ಮನೆಯು ಸಂತಸದ ವಿಚಾರವಾಗಿದೆ ಎಂದರು. ಪರೋಪಕಾರಾರ್ಥ ಮಿದಂ ಶರೀರಂ ಎಂಬ ಉಕ್ತಿಯಂತೆ ಬಡವರ ಸೇವೆಯ ಮೂಲಕ ಸಾಯಿರಾಂ ಭಟ್ಟರು ಅನುಕರಣೀಯ ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದರು. ಕೊಂಡೆವೂರಿನ ಮಠದ ಮೂಲಕ ಆರಂಭಿಸಲಾದ ಆಶ್ರಯ ಯೋಜನೆಗೂ ಪ್ರೇರಣಾ ಶಕ್ತಿ ಮತ್ತು ಸ್ಪೂತರ್ಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರಾಗಿದ್ದಾರೆ ಎಂದು ತಿಳಿಸಿದರು. ಸಾಯಿರಾಂ ಭಟ್ಟರ ಆದರ್ಶಮಯ ಜೀವನದ ಬಗ್ಗೆ ಇಡೀ ಕಾಸರಗೋಡಿಗರು ಹೆಮ್ಮೆ ಪಡಬೇಕು, ದೇವರು ಅವರಿಗೆ ಸಮಾಜ ಸೇವಾ ಕೈಂಕರ್ಯ ನಡೆಸಲು ಇನ್ನಷ್ಟು ಶಕ್ತಿ ನೀಡಿ, ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ಹರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಂದನೀಯ ಗುರು ರಾಜು ಫಿಲಿಪ್ ಸಕರಿಯಾ ಮಾತನಾಡಿ ಸಾಯಿರಾಂ ಭಟ್ ಓರ್ವ ಸಮಾಜ ಬೆಳಗುತ್ತಿರುವ ನಕ್ಷತ್ರದಂತೆ ಎಂದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರು ನಿಮರ್ಿಸಿ ಕೊಡುತ್ತಿರುವ 250 ನೇ ಮನೆಯನ್ನು ಫಲಾನುಭವಿ ನೀಚರ್ಾಲು ಬೇಳದ ಗೀತಾರಿಗೆ ಕೀಲಿ ಕೈ ಹಸ್ತಾಂತರಿಸುವ ಮೂಲಕ ದಾನ ನೀಡಿದರು. ಬಳಿಕ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ ನೂರನೇ ಮನೆಯ ಕೀಲಿ ಕೈ ಹಸ್ತಾಂತರಕ್ಕೆ ತಾನು ತಲುಪಿದ್ದೆ, ಆಗಲೂ ಶಾಸಕಿಯಾಗಿದ್ದೆ, ಈಗ 250 ನೇ ಮನೆ ನಿಮರ್ಿಸಿ ದಾನ ನೀಡಲಾಗಿದೆ. ಮುಂದೆ 500 ಮನೆಗಳನ್ನು ಕಟ್ಟಿಸಿ ಬಡವರಿಗೆ ವಸತಿ ಭಾಗ್ಯ ಕಲ್ಪಿಸಿ ಕೊಡುವ ಶಕ್ತಿ ಅವರಿಗೆ ಸಿಗಲಿ ಎಂದು ಹಾರೈಸಿದರು.
ಹಿರಿಯ ಸಮಾಜಿಕ ಕಾರ್ಯಕರ್ತ ಎಂ.ಪಿ ಅಬ್ದುಲ್ ಸಮದ್ ಸಾಮದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಜೀವನಗಾಥೆಯನ್ನು ತಿಳಿಸುವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಚಿತ್ರಕಲಾವಿದ, ಕೇರಳ ತುಳು ಅಕಡೆಮಿ ಅಧ್ಯಕ್ಷ ಪಿ.ಎಸ್ ಪುಣಚಿತ್ತಾಯರಿಗೆ ಪುಸ್ತಕದ ಮೊದಲ ಪ್ರತಿ ನೀಡಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗಾಗಿ ಸಾಯಿರಾಂ ಗೋಪಾಲಕೃಷ್ಣ ಭಟ್ಟ ಮತ್ತು ಪತ್ನಿ ಶಾರದಾ ಅವರನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯು.ಎ.ಇ ಎಕ್ಸಚೇಂಜಿನ ಸುಧೀರ್ ಕುಮಾರ್ ಶೆಟ್ಟಿ ಸ್ಮರಣಿಕೆ ನೀಡಿ ಗೌರವಿಸಿದರು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಲಾಯಿತು. ಗೋಪಾಲಕೃಷ್ಣ ಭಟ್ಟರ ಜೀವನ ಚರಿತ್ರೆಯ ಬಗ್ಗೆ ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ಸಿ.ಟಿ ಅಹಮ್ಮದಾಲಿ, ಪ್ರದೀಪ್ ಕುಮಾರ್ ಕಲ್ಕೂರ, ಎಂ.ಬಿ ಪುರಾಣಿಕ್, ಯೋಗೀಶ್ ಭಟ್ ಮೊದಲಾದವರು ಮಾತನಾಡಿದರು. ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ನವಜೀವನ ಪ್ರೌಢಶಾಲೆಯ ಪ್ರಾಂಶುಪಾಲ ಶಂಕರ ಸಾರಡ್ಕ, ಆಯೆಷಾ ಪೆರ್ಲ, ರವಿ ನಯ್ಕಾಪು ಇದ್ದರು. ರತ್ನಾಕರ ಒಡಂಗಲ್ಲು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮ ಸಂಯೋಜಕ ಮಾಹಿನ್ ಕೇಳೋಟ್ ಸ್ವಾಗತಿಸಿ, ಪ್ರೊ.ಶ್ರೀನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ನಾಗರಿಕರು ಉಪಸ್ಥಿತರಿದ್ದರು.