HEALTH TIPS

No title

                ಶಬರೀನಾಥನ ಚಿಕಿತ್ಸೆಗೆ ಸರಕಾರದ ಸಹಾಯದ ಭರವಸೆ
    ಮುಳ್ಳೇರಿಯ:  ಶೈಕ್ಷಣಿಕ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆಯಲ್ಲಿ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಹಾಸಿಗೆ ಹಿಡಿದಿರುವ ಕಾರಡ್ಕ ಜಿವಿಎಚ್ಎಸ್ ಶಾಲೆಯ ವಿದ್ಯಾಥರ್ಿ ಶಬರೀನಾಥನಿಗೆ ಚಿಕಿತ್ಸೆಗೆ ಸರಕಾರದ ಸಹಾಯದ ಭರವಸೆ ಲಭಿಸಿದೆ.
  ಭಾನುವಾರ ಆರೋಗ್ಯ ಸಚಿವೆ ಕೆ.ಕೆ.ಶೈಲಜ ಶಬರೀನಾಥನ ಮನೆಗೆ ಭೇಟಿ ನೀಡಿ ಆತನ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಅವರು ಚಿಕಿತ್ಸೆಗೆ ಸರಕಾರದ ಸಹಾಯ ನೀಡುವ ಭರವಸೆ ನೀಡಿದರು. ಕಳೆದ ವರ್ಷ ಹತ್ತನೇ ತರಗತಿಯ ಪರೀಕ್ಷೆ ಬರೆಯಬೇಕಾದ ವಿದ್ಯಾಥರ್ಿ 2017 ಜ.4ರಂದು ಪಯ್ಯನ್ನೂರಿನ ಸಮೀಪದ ವೆಳ್ಳೂರಿನಲ್ಲಿ ಉಂಟಾದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಬೇಕಾಗಿ ಬಂದುದು ದುದರ್ೈವ. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ತಲೆಯ  ಶಸ್ತ್ರಕ್ರಿಯೆಯನ್ನು ಮಾಡಲಾಯಿತು. ಕಳೆದ 14 ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಪೂರ್ಣ ವಾಸಿಯಾಗುವಲ್ಲಿ ವಿಫಲವಾಗಿದೆ.  ಈಗಾಗಲೇ 13 ಲಕ್ಷ ರೂಪಾಯಿಯನ್ನು ಚಿಕಿತ್ಸೆಗಾಗಿ ಖಚರ್ು ಮಾಡಲಾಗಿದೆ. ಆದರೂ ಕಲಿಕೆಯನ್ನು ಮುಂದುವರಿಸುವ ಸ್ಥಿತಿಗೆ ತಲಪಿಲ್ಲ. ತಲೆಗೆ ಆದ ಗಾಯವನ್ನು ಗುಣಪಡಿಸಲು ಸಾಧ್ಯವಾದರೂ, ಕೈಕಾಲುಗಳ ಚಲನ ಶಕ್ತಿ ಇಲ್ಲದಾಗಿದೆ.
   ಕಾರಡ್ಕ ಸಮೀಪದ ಅಡ್ಕ ಎಂ.ಸಿ.ರಾಜನ್ ಮತ್ತು ನಿಶಾ ದಂಪತಿ ಪುತ್ರನಾದ ಶಬರೀನಾಥನಿಗೆ ಈ ಬಾರಿಯಾದರೂ ಪರೀಕ್ಷೆ ಬರೆಯಲು ಸಾಧ್ಯವಾದೀತು ಎಂದು ನೀರೀಕ್ಷಿಸಿದ್ದರೂ ಅದು ಕೈಗೂಡಲಿಲ್ಲ. ಇನ್ನೂ ಎರಡು ಶಸ್ತ್ರಕ್ರಿಯೆ ಅನಿವಾರ್ಯವಾಗಿದೆ ಎಂದು ವೈದ್ಯರು ತಿಳಿಸಿರುವರು. ಕೊಚ್ಚಿಯ ಅಮೃತ ವೈದ್ಯಕೀಯ ಕಾಲೇಜಿನಲ್ಲಿ ಈ ಶಸ್ತ್ರಕ್ರಿಯೆ ನಡೆಸಲಾಗುವುದು. ಇದಕ್ಕಾಗಿ ಇನ್ನೂ 3 ಲಕ್ಷ ರೂಪಾಯಿಯ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ನೀಡಲಾಗಿತ್ತು.  ಚಿಕಿತ್ಸೆಗೆ ಸರಕಾರದ ಸಹಾಯದ ಭರವಸೆ ಈ ಕುಟುಂಬಕ್ಕೆ ನೆಮ್ಮದಿಯನ್ನುಂಟುಮಾಡಬಹುದಾಗಿದೆ.
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries