HEALTH TIPS

No title

                           ಒಂದಿಂಚು ಭೂಮಿಯನ್ನೂ ಪಾಳು ಬಿಡಬಾರದು-ಮುಖ್ಯಮಂತ್ರಿ ವಿಜಯನ್
    ಕಾಸರಗೋಡು: ಪಾಳು ಬಿದ್ದ ಭತ್ತದ ಗದ್ದೆಗಳಲ್ಲಿ ಭತ್ತ ಕೃಷಿಯನ್ನು ಮುಂದುವರಿಸಿ ಕೃಷಿ ಯೋಗ್ಯ ಸ್ಥಳವನ್ನಾಗಿಸಬೇಕು, ಪ್ರಸ್ತುತ ಕೃಷಿ ಸಂಸ್ಕೃತಿಯನ್ನು ವಿನಾಶದ ಅಂಚಿನಿಂದ ಹೊರತಂದು ಮುಂದಿನ ತಲೆಮಾರಿಗೆ ಕೃಷಿ ಸಂಸ್ಕೃತಿಯನ್ನು ತಲುಪಿಸುವ ಜವಾಬ್ದಾರಿ ಪ್ರತಿಯೋರ್ವನಿಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಒಂದಿಂಚೂ ಭೂಮಿಯೂ ಕೃಷಿ ಅಯೋಗ್ಯವಾಗಲು ಬಿಡಬಾರದು. ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಲು ನಮ್ಮಿಂದ ಸಾಧ್ಯವಾಗಬೇಕೆಂದು ಅವರು ಹೇಳಿದರು.
  ಕಾಞಂಗಾಡು ತುಳುಚ್ಚೇರಿ ಬಯಲಿನಲ್ಲಿ ವಯನಾಟ್ಟ ಕುಲವನ್ ವಾಷರ್ಿಕದ ಅಂಗವಾಗಿ ನಡೆದ ಭತ್ತದ ಕೊಯ್ಲು ಉತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಪಾಳು ಬಿದ್ದಿರುವ ಬಯಲು ಗದ್ದೆಗಳಲ್ಲಿ ಭತ್ತದ ಕೃಷಿಯನ್ನು ಮಾತ್ರವೇ ಮುಂದುವರಿಸಬೇಕೆಂಬುದು ಕೆಲವರ ತಪ್ಪು ಕಲ್ಪನೆಯಾಗಿದೆ. ನಮ್ಮೂರಿನ ಪ್ರತೀ ಸ್ಥಳಗಳನ್ನು ಒಂದಿಲ್ಲೊಂದು ಕೃಷಿ ಮೂಲಕ ಯೋಗ್ಯವನ್ನಾಗಿಸಬೇಕಿದೆ. ವಿವಿಧ ಸ್ವ ಸಹಾಯ ಸಂಘಗಳು, ಯುವಜನ ಸಂಘಟನೆಗಳ ಸಹಕಾರದೊಂದಿಗೆ ಕೃಷಿ ಪೂರಕ ಕಾರ್ಯಕ್ರಮಗಳು ಏರ್ಪಡಬೇಕು ಎಂದು ಹೇಳಿದರು. ಭತ್ತ ಕೃಷಿ ಮಾತ್ರವಲ್ಲದೆ ಇತರ ಕೃಷಿಯನ್ನು ಮುಂದುವರಿಸಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ ಹರಿತ ಕೇರಳ ಮಿಶನ್ ಯೋಜನೆಯ ಮೂಲಕ ಕೃಷಿಯಲ್ಲಿ ಹಲವು ಪ್ರಗತಿಪರ ಬದಲಾವಣೆಗಳು ಬಂದಿವೆ. ವಷರ್ಾನುಗಟ್ಟಳೆ ಪಾಳು ಬಿದ್ದಿದ್ದ ಗದ್ದೆಗಳನ್ನು ಭತ್ತ ಕೃಷಿಯ ಮೂಲಕ ಪುನಜರ್ೀವಿತಗೊಳಿಸಲಾಗಿದೆ, ಕೃಷಿ ಇಲಾಖೆಯ ಪೂರ್ಣ ಸಹಕಾರದೊಂದಿಗೆ ಕೃಷಿ ರಂಗ ಅಭಿವೃದ್ಧಿಯತ್ತ ಮುಖಮಾಡಿದೆ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ನಾಶವಾಗುತ್ತಿರುವ ಕೃಷಿ ಸಂಸ್ಕೃತಿಯನ್ನು ಪುನಃ ಬೆಳಗುವ ಸದಾವಕಾಶವನ್ನು ಸಂಪೂರ್ಣ ಬಳಸಿಕೊಳ್ಳಬೇಕೆಂದು ಅವರು ತಿಳಿಸಿದರು. ಬಹಳ ಹಿಂದೆ ಸಣ್ಣ ತಟ್ಟು ಪ್ರದೇಶ ಸೇರಿದಂತೆ ಬೆಟ್ಟು ಸ್ಥಳದಲ್ಲೂ ಭತ್ತ ಹಾಗೂ ತರಕಾರಿ ಕೃಷಿ ಮಾಡುತ್ತಿದ್ದ ಉದಾಹರಣೆಗಳು ಹಲವಿದೆ. ವಿಷು ಹಬ್ಬದ ಪೂರ್ವಭಾವಿ ತರಕಾರಿ ಕೃಷಿಗೆ ಎಲ್ಲರೂ ಉತ್ತೇಜಿಸುತ್ತಿದ್ದು, ಸ್ವಯಂ ಕೃಷಿಯನ್ನು ಮಾಡುತ್ತಿದ್ದರು, ಅಂತಹ ಕೃಷಿ ಸಂಸ್ಕೃತಿಯ ಪುನರುದ್ಧಾರಕ್ಕೆ ಎಲ್ಲರೂ ಸಹಮತದೊಂದಿಗೆ ಶ್ರಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
    ಕಾರ್ಯಕ್ರಮದಲ್ಲಿ ಸಿಪಿಸಿಆರ್ಐ ನಿದರ್ೇಶಕ ಚೌಡಪ್ಪ ಗೌಡ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್, ಅಜಾನೂರ್ ಗ್ರಾ.ಪಂ ಅಧ್ಯಕ್ಷ ಪಿ.ದಾಮೋದರನ್, ಮುಖ್ಯ ಕೃಷಿ ಅಧಿಕಾರಿ ಆರ್.ಉಷಾದೇವಿ, ಬೆಂಗಳೂರು ಎಡಿಆರ್ಐ ನಿದರ್ೇಶಕ ಡಾ.ಪಿ.ಚಂದ್ರಗೌಡ, ಕೇರಳ ಕೃಷಿ ವಿ.ವಿಯ ನಿದರ್ೇಶಕ ಡಾ.ಜಿಜು.ಪಿ, ಕಾಞಂಗಾಡು ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ವಿ ರಾಘವನ್, ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಟಿ.ಎಸ್ ಮನೋಜ್ ಕುಮಾರ್, ಸಂಯೋಜಕ ಪ್ರೊ.ಪಿ.ಜಯರಾಜ್, ಸಿ.ರಾಜನ್ ಪೆರಿಯಾ, ವೇಣುಗೋಪಾಲ್ ನಂಬ್ಯಾರ್, ಕಣ್ಣನ್ ಕುಂಞ, ಮೆಟ್ರೋ ಮೊಹಮ್ಮದ್ ಹಾಜಿ, ಎನ್.ವಿ ಅರಂವಿದಾಕ್ಷನ್, ಸಿ.ವಿ ಗಂಗಾಧರನ್ ಭಾಗವಹಿಸಿದ್ದರು. ವೇಣುರಾಜ್ ಕೋಡೋತ್ ಸ್ವಾಗತಿಸಿ, ಕುಮಾರನ್ ಐಶ್ವರ್ಯ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries